ಆರೋಗ್ಯ

ಈ ಪುಡಿಯನ್ನು ದಿನಾ ರಾತ್ರಿ ಒಂದು ಚಮಚ ಕುಡಿಯುತ್ತ ಬಂದರೆ ಕೀಲು ನೋವು ಕಡಿಮೆಯಾಗುತ್ತದೆ , ದೇಹದ ಕೊಬ್ಬು ಕರಗುತ್ತದೆ .

ದೇಹದಲ್ಲಿ ಯಾವುದೇ ಸಮಸ್ಯೆಯಾದರೂ ಅಡ್ಡಪರಿಣಾಮಗಳಿಲ್ಲದೆ ವಾಸಿ ಮಾಡಿಕೊಳ್ಳುವ ಆಯುರ್ವೇದದ ಮದ್ದುಗಳಿವೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ದೇಹದ ಬೊಜ್ಜು ಹಾಗೆಯೇ ವಯಸ್ಸಾದಂತೆ ಕೀಲು ನೋವಿನ ಸಮಸ್ಯೆ ಕೂಡ ಹೆಚ್ಚಾಗುತ್ತಾ ಹೋಗುತ್ತದೆ .ಹಾಗಾದರೆ ಈ ದಿನ ದೇಹದ ಕೊಬ್ಬು ಕರಗಿಸುವ ಸುಲಭ ವಿಧಾನದ ಬಗ್ಗೆ ತಿಳಿದುಕೊಳ್ಳೋಣ..

ಬೇಕಾಗಿರುವ ಪದಾರ್ಥಗಳು :

250 ಗ್ರಾಂ ಮೆಂತ್ಯ , 100 ಗ್ರಾಂ ಓಂ ಕಾಳು, 50 ಗ್ರಾಂ ಜೀರಿಗೆ

ಸೂಚನೆ : ಅಳತೆಯನ್ನು ಕಡಿಮೆಬೇಕಾದರೂ ಮೇಲಿನ ಅನುಪಾತದಲ್ಲಿ ತೆಗೆದುಕೊಳ್ಳಬೇಕು

ತಯಾರಿಸುವ ವಿಧಾನ :

ಮೇಲೆ ತಿಳಿಸಲಾದ ಎಲ್ಲ ಪದಾರ್ಥಗಳನ್ನು ಶುದ್ದಿ ಮಾಡಿಕೊಂಡು , ಬಿಡಿಬಿಡಿಯಾಗಿ ಬಾಣಲೆಯಲ್ಲಿ ಸ್ವಲ್ಪ ಹುರಿದು ಬಿಸಿ ಮಾಡಿಕೊಳ್ಳಿ
ಆನಂತ್ರ ಮಿಶ್ರಣವನ್ನು ಪುಡಿ ಮಾಡಿಕೊಂಡು , ತಣ್ಣಗಾಗಲು ಬಿಟ್ಟು ಆನಂತ್ರ ಗಾಳಿಯಾಡದ ಡಬ್ಬಿಯೊಳಗೆ ತುಂಬಿಸಿಡಿ

ಪ್ರತಿ ರಾತ್ರಿ ಊಟ ಆದ ಮೇಲೆ ಒಂದು ಚಮಚ ಮಿಶ್ರಣವನ್ನು ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಬೇಕು

 

 

ಉಪಯೋಗಗಳು :

ಮಿಶ್ರಣವನ್ನು 2 ತಿಂಗಳು ಸೇವಿಸುತ್ತಾ ಬಂದರೆ ದೇಹದ ಕಶ್ಮಲಗಳು ಮಲ ,ಮೂತ್ರ ಹಾಗು ಬೆವರಿನ ರೂಪದಲ್ಲಿ ಹೊರಗೆ ಬರುತ್ತದೆ .

ರಕ್ತ ಶುದ್ಧಿಯಾಗುತ್ತದೆ ಹಾಗು ದೇಹದ ಅನಗತ್ಯ ಕೊಬ್ಬು ಕರಗುತ್ತದೆ .

ಚರ್ಮದ ಮೇಲಿನ ಸುಕ್ಕು ಕಡಿಮೆಯಾಗುತ್ತದೆ .

ಮಲ ಬದ್ಧತೆ ಕಡಿಮೆಯಾಗುತ್ತದೆ , ಕಣ್ಣಿನ ದೃಷ್ಟಿ ಸುಧಾರಿಸುತ್ತದೆ , ಕೂದಲು ಉದುರುವುದು ಕಡಿಮೆಯಾಗುತ್ತದೆ .

ಹೃದಯದ ಸಮಸ್ಯೆಗಳು ಹಾಗು ಸಕ್ಕರೆ ಖಾಯಿಲೆ ದೂರವಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top