ಸಿನಿಮಾ

ಕುಮಾರಸ್ವಾಮಿ ನಿರ್ಮಾಣ ಮಾಡಿರುವ ಸೂಪರ್ ಹಿಟ್ ಸಿನೆಮಾಗಳು ಯಾವವು ಗೊತ್ತೇ?

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ. ಇವರು ಪ್ರಸ್ತುತ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿದ್ದಾರೆ. ತಮ್ಮ ರಾಜಕೀಯ ಜೀವನದ ಜೊತೆಗೆ ಸಿನಿಮಾ ರಂಗದ ನಂಟನ್ನು ಕೂಡ ಹೊಂದಿದ್ದಾರೆ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪರಾಗಿ ಹಾಗು ವಿತರಕರಾಗಿಯೂ ಕೂಡ ಕೆಲಸ ಮಾಡಿದ್ದಾರೆ.

 

ವಿಷ್ಣುವರ್ಧನ್ ಅಭಿಯನದ ‘ಸೂರ್ಯವಂಶ’

ಕನ್ನಡ ಸೂಪರ್ ಹಿಟ್ ಚಿತ್ರಗಳಲ್ಲಿ ‘ಸೂರ್ಯವಂಶ’ ಸಿನಿಮಾ ಕೂಡ ಒಂದು. ವಿಷ್ಣುವರ್ಧನ್ ಅಭಿಯನದ ‘ಸೂರ್ಯವಂಶ ಅಂದು ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರವನ್ನು ಹೆಚ್.ಡಿ. ಕುಮಾರಸ್ವಾಮಿ ಅವರು ನಿರ್ಮಾಣ ಮಾಡಿದ್ದರು.

 

 

 

ಶ್ರೀ ಮುರಳಿ ಅಭಿನಯದ ಚಂದ್ರ ಚಕೋರಿ:

ಚಂದ್ರ ಚಕೋರಿ ಚಿತ್ರದ ಮೂಲಕ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಪರಿಚಯವಾಗಿ ಒಂದು ಹೊಸ ಪ್ರಯತ್ನಕ್ಕೆ ನಾಂದಿಯಾದವರು ಶ್ರೀ ಮುರಳಿ. ಈ ಸಿನಿಮಾ ದಿನ ಒಂದು ವರ್ಷ ಓಡಿ ಭರ್ಜರಿ ಯಶಸ್ಸು ಕಂಡಿತ್ತು. ಈ ಸಿನೆಮಾವನ್ನು ಹೆಚ್.ಡಿ. ಕುಮಾರಸ್ವಾಮಿ ಅವರು ನಿರ್ಮಾಣ ಮಾಡಿದ್ದರು.

 

ಶಿವರಾಜ್​ಕುಮಾರ್ ಅಭಿನಯದ ‘ಗಲಾಟೆ ಅಳಿಯಂದ್ರು’ :

2000 ರಲ್ಲಿ ಬಿಡುಗಡೆ ಆಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅಭಿನಯದ ‘ಗಲಾಟೆ ಅಳಿಯಂದ್ರು’ ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರವನ್ನು ಹೆಚ್.ಡಿ. ಕುಮಾರಸ್ವಾಮಿ ಅವರು ನಿರ್ಮಾಣ ಮಾಡಿದ್ದರು.

 

 

ಜಗ್ಗೇಶ್ ಅಭಿನಯದ ಜಿತೇಂದ್ರ:

ರಿಯಲ್ ಸ್ಟಾರ್‌ ಉಪೇಂದ್ರ ನಿರ್ದೇಶನದ ‘ಉಪೇಂದ್ರ’ ಸಿನೆಮಾವನ್ನು ಅಣಕ ಮಾಡಿದಂತಿರುವ ಸಿನಿಮಾ ‘ಜಿತೇಂದ್ರ’. ಥೇಟ್ ಉಪ್ಪಿ ಸ್ಟೈಲ್ ನಲ್ಲೇ ಹೇರ್ ಸ್ಟೈಲ್, ಕಾಸ್ಟ್ಯೂಮ್ಸ್ ತೊಟ್ಟು, ‘ಉಪೇಂದ್ರ’ ಸಿನಿಮಾದಲ್ಲಿ ಉಪ್ಪಿ ಹೊಡೆದಿದ್ದ ಡೈಲಾಗ್ಸ್ ಜಗ್ಗೇಶ್ ಬಾಯಲ್ಲಿ ಬಂದವು. ಈ ಚಿತ್ರದಿಂದ ಉಪೇಂದ್ರ ಮತ್ತು ಜಗ್ಗೇಶ್ ನಡುವೆ ದೊಡ್ಡ ಕಂದಕ ಸೃಷ್ಟಿಯಾಯ್ತು. ಈ ಸಿನೆಮಾವನ್ನು ಹೆಚ್.ಡಿ. ಕುಮಾರಸ್ವಾಮಿ ಅವರು ನಿರ್ಮಾಣ ಮಾಡಿದ್ದರು.

 

 

 

ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್:

ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ಚಿತ್ರ ಅದ್ದೂರಿ ಪ್ರದರ್ಶನ ಕಂಡಿತ್ತು. ಇದನ್ನು ಅನಿತಾ-ಕುಮಾರಸ್ವಾಮಿ ಮಾಲೀಕತ್ವದ ‘ಚೆನ್ನಾಂಬಿಕಾ ಫಿಲಂಸ್’ ಸಂಸ್ಥೆ ನಿರ್ವಿುಸಿದೆ.

 

 

ಸೀತಾರಾಮ ಕಲ್ಯಾಣ ಕುಮಾರಸ್ವಾಮಿ:

ನಟ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಸಿನಿಮಾದ ಶೂಟಿಂಗ್ ಈಗ ನಡೆಯುತ್ತಿದೆ ಇನ್ನು ‘ಸೀತಾರಾಮ ಕಲ್ಯಾಣ’ ಅನಿತಾ-ಕುಮಾರಸ್ವಾಮಿ ಮಾಲೀಕತ್ವದ  ಚಿನ್ನಾಂಬಿಕಾ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾವಾಗಿದೆ. ‘ಜಾಗ್ವಾರ್’ ನಂತರ ನಿಖಿಲ್ ಈ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top