ಮನೋರಂಜನೆ

ಭರ್ಜರಿ ಫೋಟೋಶೂಟ್‌ನಲ್ಲಿ ಮಿಂಚಿದ ಗೊಂಬೆ – ಯುವರಾಣಿ ಅವತಾರವೆತ್ತಿದಳು ನಿವೇದಿತಾ ಗೌಡ.

ಪಕ್ಕಾ ಕನ್ನಡಿಗ ಕುಟುಂಬದಿಂದ ಬಂದು ಅದರಲ್ಲೂ ಮೈಸೂರಿನಲ್ಲೇ ಹುಟ್ಟಿ ಬೆಳೆದಿದ್ದರೂ ಬ್ರಿಟನ್ ಸಾಮ್ರಾಜ್ಯದಿಂದ ತಪ್ಪಿಸಿಕೊಂಡು ಬಂದ ಇಂಗ್ಲಿಶ್ ರಾಣಿಯಂತೆ ತಾನು ಮಾತಾಡಿದ್ದು ಕನ್ನಡವೋ ಇಂಗ್ಲಿಶೋ ಎಂಬ ಬಗ್ಗೆ ಖುದ್ದು ಆಕೆಗೇ ಅನುಮಾನ ಮೂಡುವಂತೆ, ಚಿತ್ರ-ವಿಚಿತ್ರವಾಗಿ ನುಲಿಯುತ್ತ ಬಿಗ್‌ಬಾಸ್ ಶೋದ ಪ್ರಮುಖ ಆಕರ್ಷಣೆಯಾಗಿದ್ದಾಕೆ ನಿವೇದಿತಾ ಗೌಡ. ಇಂತಹ ನಿವೇದಿತಾ ಗೌಡ್ಡಾ ಉರ್ಫ್ ಬೊಂಬೆ ಯುವರಾಣಿ ಅವತಾರವೆತ್ತಿದ್ದಾಳೆ.

 

 

ಮೈಸೂರಿನ ಲಲಿತಮಹಾಲ್‌ ಪ್ಯಾಲೇಸ್‌ನಲ್ಲಿ ಭರ್ಜರಿ ಪೋಟೋ ಶೂಟ್‌ ನಲ್ಲಿ ನಿವೇದಿತಾ ಗೌಡ ಪಾಲ್ಗೊಂಡಿದ್ದಾಳೆ. ರಾಯಲ್‌ ಲುಕ್‌ನಲ್ಲಿ ಕಾಣಿಸಿಕೊಂಡ ಗೊಂಬೆ ಬಿಳಿ, ಕೆಂಪು, ಕ್ರೀಂ ಹಾಗೂ ಮರೂನ್‌ ಬಣ್ಣದ ದುಬಾರಿ ಗೌನ್ ಅನ್ನು ಧರಿಸಿ ತೊಟ್ಟು ಯುವರಾಣಿ ಲುಕ್ ನಲ್ಲಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ಗೌನ್​ನಲ್ಲಿ ಥೇಟ್ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದರು.

ಸನ್​ಬರ್ಸ್ಟ್​ ಸಂಸ್ಥೆಯ ಜಾಹೀರಾತಿಗಾಗಿ ರಾಜಕುಮಾರಿಯಂತೆ ಪೋಸ್​ ನೀಡಿರುವ ನಿವೇದಿತಾ ನಿಜವಾದ ರಾಜಕುಮಾರಿಯರನ್ನೂ ನಾಚುವಂತೆ ಮಿರಮಿರನೆ ಮಿಂಚುತ್ತಿದ್ದಾಳೆ. ಮೈಸೂರಿನ ಲಲಿತ್​ ಮಹಲ್​ನ ಒಳಾಂಗಣ ಹಾಗೂ ಹೊರಾಂಗಣ ಎರಡೂ ಕಡೆ ಈ ಪೋಟೋ ಶೂಟ್‌ ಮಾಡಲಾಗಿದೆ.. ಅಂದಹಾಗೆ ಈ ಹಿಂದೆ ಖಾಸಗಿ ಹೇರ್ ಆಯಿಲ್ ಕಂಪೆನಿಯೊಂದಕ್ಕೂ ನಿವೇದಿತಾ ಜಾಹಿರಾತು ನೀಡಿದ್ದಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top