ಸಿನಿಮಾ

ಸರ್ಜಾ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ.

ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಸಾಕಷ್ಟು ಹೆಸರು ಮಾಡಿರುವ ಸರ್ಜಾ ಕುಟುಂಬದ ಸದಸ್ಯರಾದ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಜೊತೆಗೆ ಈಗ ಇನ್ನೊಬ್ಬರು ಸೇರಿಕೊಳ್ಳುತ್ತಿದ್ದಾರೆ. ಅರ್ಜುನ್ ಸರ್ಜಾ ಸೋದರ ಅಳಿಯ ಪವನ್‌ ತೇಜ ‘ಅಥರ್ವ’ ಚಿತ್ರದಲ್ಲಿ ಅಭಿನಯ ಮಾಡಿದ್ದೂ ಇಂದು ರಾಜ್ಯಾದ್ಯಂತ ಚಿತ್ರ ರಿಲೀಸ್ ಆಗಿದೆ.

ಪವನ್ ತೇಜ ಹುಟ್ಟಿ, ಬೆಳೆದದ್ದು , ಶಿಕ್ಷಣ ಎಲ್ಲ ಮೈಸೂರಿನಲ್ಲಿ. ಬಾಲ್ಯದಿಂದಲೂ ಅಭಿನಯದ ಕಡೆಗೆ ಹೆಚ್ಚಾಗಿ ಆಸಕ್ತಿ ಹೊಂದಿದ್ದರು, ಕೆಲ ವರ್ಷಗಳ ಕಾಲ ರಂಗಭೂಮಿಯಲ್ಲೂ ಸಕ್ರಿಯವಾಗಿ ಅಭಿನಯ ಮಾಡಿದ್ದಾರೆ. ಅಭಿನಯ, ನೃತ್ಯ, ಆ್ಯಕ್ಷನ್ ಹೀಗೆ ಸಿನಿಮಾಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಪವನ್ ತೇಜ, ‘ಅಥರ್ವ’ ಸಿನಿಮಾ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

 

 

ವಿನಯ್ ಕುಮಾರ್ ಎಚ್ ನಿರ್ಮಾಣ ಮಾಡಿರುವ ಈ ಸಿನೆಮಾಗೆ ಅರುಣ್ ನಿರ್ದೇಶಕರಾಗಿದ್ದಾರೆ. ರಕ್ಷಯ್ ಎಸ್ ವಿ ಸಹ ನಿರ್ಮಾಪಕರಾಗಿದ್ದಾರೆ. ಸನಮ್ ಶೆಟ್ಟಿ ಈ ಚಿತ್ರದ ಕಥಾ ನಾಯಕಿ. ರಂಗಾಯಣ ರಘು, ತಾರಾ, ಧರ್ಮೇಂದ್ರ ಅರಸ್, ಯಶ್ವಂತ್ ಶೆಟ್ಟಿ, ಸುಚಿಂದ್ರ ಪ್ರಸಾದ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ ಟಾಮಿ ರವಿ, ನಿಶಾಂತ್, ಚೇತನ ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.

ಈ ಸಿನಿಮಾ ಜಯಣ್ಣ ವಿತರಣೆ ಮಾಡುತ್ತಿದ್ದು, 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಎಂದು ತಿಳಿದು ಬಂದಿದೆ. ಪವನ್ ತೇಜ ಬೆಳ್ಳಿ ತೆರೆಯಲ್ಲಿ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ‘ಕಿಕ್’ ಕೊಟ್ಟು ಇಷ್ಟವಾಗುತ್ತಾರೆ ಎಂಬುದು ಇದೇ ವಾರಾಂತ್ಯದಲ್ಲಿ ತಿಳಿಯಲಿದೆ. ನಾಯಕಿ ಸನಮ್‌ ಶೆಟ್ಟಿ ಅವರಿಗೂ ಕೂಡಾ ತಮ್ಮ ಚೊಚ್ಚಲ ಕನ್ನಡ ಸಿನಿಮಾ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top