ಸಿನಿಮಾ

ಏಕಲವ್ಯನಂತ ಶಿಷ್ಯನ ಪಾಲಿಗೆ ದ್ರೋಣಾಚಾರ್ಯರಾದ ಪುನೀತ್.

ಕೆಲವು ದಿನಗಳ ಹಿಂದೆ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬ ಸುಮಾರು ಆರು ಕಿಲೋಮೀಟರ್ ಪುನೀತ್ ರವರ ಚಲಿಸುತ್ತಿದ್ದ ಕಾರ್ ಅನ್ನು ಫಾಲೋ ಮಾಡುತ್ತ ಬಂದಿದ್ದ ಅದನ್ನು ಮೀರರ್ ನಲ್ಲಿ ನೋಡಿ ತಮ್ಮ ಕಾರ್ ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ. ಮೊದಲು ಪ್ರಾಣ ಮುಖ್ಯ ನಾನು ಮತ್ತೆ ಸಿಗುತ್ತೆನೇ ಪೋಟೋ ಬೇಕಾ ತಗೊಳ್ಳಿ ಎಂದು ಬುದ್ಧಿವಾದವನ್ನು ಹೇಳಿ ಪುನೀತ್ ಅವರು ಅಭಿಮಾನಿಯ ಪೋಟೋ ತೆಗೆಸಿಕೊಂಡಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ.

 

 

ಇದರ ಬೆನ್ನಲ್ಲೆ ಈಗ ಇನ್ನೊಬ್ಬ ಅಭಿಮಾನಿಯೊಬ್ಬರು ಅಲ್ಲಿಯವೆರೆಗೂ ಪುನೀತ್ ಅವರ ಚಿತ್ರಗಳಲ್ಲಿ ಬಂದಿರುವ ಸ್ಟಂಟ್‌ಗಳನ್ನೇ ತಪಸ್ಸಿನಂತೆ ಫಾಲೋ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಳಗಾವಿಯ ಆರುಗೆರೆ ಎಂಬ ಗ್ರಾಮದ ಪುಟ್ಟ ಗುಡಿಸಿಲಿನಲ್ಲಿ ವಾಸ ಆಗಿರುವ ಗೋಪಿ ಆಂಥೋಣಿ ಎಂಬ ಅಭಿಮಾನಿಗೆ ಪುನೀತ್‌ ರಾಜಕುಮಾರ ರವರು ಕೇವಲ ನಟ ಅಷ್ಟೇ ಅಲ್ಲ. ಸಾಕ್ಷಾತ್‌ ಗುರು. ಎದುರಿಗೆ ಅವರ ಫೋಟೋ ಇಟ್ಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಈ ವ್ಯಕ್ತಿ ಪುನೀತ್‌ ಅವರಿಗೆ ಏಕಲವ್ಯ ಶಿಷ್ಯ ಎಂದು ಹೇಳಿಕೊಳ್ಳುತ್ತಾರೆ. ತನ್ನದೇ ಆದ 15 ಹುಡುಗರ ತಂಡ ಕಟ್ಟಿಕೊಂಡು ಯಾವುದೇ ಪಕ್ಕಾ ತರಬೇತಿ ಇಲ್ಲದೆ ಪುನೀತ್‌ ಸ್ಟಂಟ್‌ಗಳನ್ನು ಕಲಿತು ಅದ್ಭುತವಾಗಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇವರು ಯಾವುದೇ ಡ್ಯೂಪ್ ಇಲ್ಲದೆ ಸಾಹಸಮಯವಾಗಿರುವ ಸ್ಟಂಟ್ ಮಾಡಬಲ್ಲ ಈ ಯುವಕ ತನ್ನ ಸ್ನೇಹಿತರಿಗೂ ಕೂಡ ಸ್ಟಂಟ್ ಮಾಡುವ ಅಭ್ಯಾಸ ಹೇಳಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರು ಮಾಡುವ ಸ್ಟಂಟ್ ವಿಡಿಯೋ ವೈರಲ್ ಆಗಿವೆ ಎಂದು ತಿಳಿದು ಬಂದಿದೆ. ಇಂತಹ ಯುವ ಪ್ರತಿಭೆಗಳು ಬೆಳಕಿಗೆ ಬರಬೇಕಾದ ಅವಶ್ಯಕತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top