ಮನೋರಂಜನೆ

ಫ್ಯಾಶನ್ ಮ್ಯಾಗಜಿನ್ ಮೇಲೆ ಬಂತು ತುಂಬು ಗರ್ಭಿಣಿ ಸಾನಿಯಾ ಮಿರ್ಜಾ ಫೋಟೋ.

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ಬಹಿರಂಗವಾಗಿ ದಿನಗಳೇ ಕಳೆದುಹೋಗಿವೆ. ನಾಲ್ಕು ತಿಂಗಳ ಹಿಂದೆಯಷ್ಟೇ ತಾನು ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದ ಸಾನಿಯಾ ಆ ನಂತರ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.. ಮಗುವನ್ನು ತನ್ನ ಹೋಟೆಯಲ್ಲಿ ಹೊತ್ತುಕೊಂಡಿರೋ ತುಂಬು ಗರ್ಭಿಣಿಯಾಗಿ ಸಾನಿಯಾ ಹೇಗೆ ಕಾಣುತ್ತಾಳೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿತ್ತು ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಯಾಕೆಂದರೆ ಅವರು ಖಾಸಗಿ ಮ್ಯಾಗಜೀನ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ

 

 

ಗರ್ಭಿಣಿ ಸಾನಿಯಾ ಮಿರ್ಜಾ ಇದೀಗ ಖ್ಯಾತ ಫ್ಯಾಶನ್‌ ಮ್ಯಾಗಜೀನ್ ಒಂದರ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ.. ಟೆನಿಸ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೈದರಾಬಾದಿನ ಮೂಗುತಿ ಸುಂದರಿ ಈ ನಿಯತಕಾಲಿಕೆಯಲ್ಲಿ ತನ್ನ ಸುತ್ತ ಯಾವಾಗಲು ಹರಿದಾಡುತ್ತಿರುವ ವಿವಾದಗಳ ಬಗ್ಗೆ ಮಾತನಾಡದೇ ಕೇವಲ ತಾಯ್ತನದ ಮತ್ತು ತಮ್ಮ ಪತಿ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಹಾಗೂ ಮುಂದಿನ ಪ್ಲಾನುಗಳ ಬಗ್ಗೆ ಮಾತನಾಡಿದ್ದಾರೆ.

ತಾಯ್ತನ ವಿಚಾರದಡಿ ಹೊರತರಲಾಗಿರುವ ಈ ಮುಖಪುಟದಲ್ಲಿ ಅವರ ಫೋಟೋವನ್ನು ಹಾಕಲಾಗಿದ್ದು ಅದರ ಜೊತೆಗೆ “ತಾಯಿಯಾಗುವುದೆಂದರೆ ಅದು ಹೆಣ್ಣಿನ ಸ್ವಾತಂತ್ರ್ಯಕ್ಕೆ ಅಡ್ಡಿಯಾದಂತಲ್ಲ. ಯಾಕೆಂದರೆ ಅದು ಮಹಿಳೆಯರನ್ನು ಇನ್ನಷ್ಟು ಸಶಕ್ತರನ್ನಾಗಿ ಮಾಡುತ್ತದೆ.”ಎಂಬ ಅವರ ಮಾತುಗಳನ್ನು ಬರೆಯಲಾಗಿದೆ. ಮೊದಲ ಬಾರಿ ತಾಯ್ತನದ ಖುಷಿಯನ್ನು ಎಂಜಾಯ್ ಮಾಡುತ್ತಿರುವ ಸಾನಿಯಾ ಅದಕ್ಕಾಗಿ ತಾವು ಅನುಸರಿಸುತ್ತಿರುವ ಅರೋಗ್ಯ ಕ್ರಮ ಮಗುವಾದ ಮೇಲೆ ತೆಗೆದುಕೊಳ್ಳಲೇಕಾದ ಮುಂಜಾಗ್ರತಾಕ್ರಮಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top