ಸಿನಿಮಾ

500ಕಿ.ಮೀ ಸೈಕಲ್ ನಲ್ಲೆ ಬಂದ ಅಭಿಮಾನಿಯನ್ನು ಕಂಡು ಕರಗಿದ ಶಿವಣ್ಣ.

ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರು ನಿನ್ನೆ 57ನೇ ವಸಂತಕ್ಕೆ ಕಾಲಿಟ್ಟರು. ಅಣ್ಣಾವ್ರ ಮಗ ಶಿವಣ್ಣ ನಿನ್ನೆ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಶಿವಣ್ಣ ಬರ್ತ್‍ಡೇಯಂದು ಅಭಿಮಾನಿಗಳು ತಡರಾತ್ರಿಯಿಂದಲೇ ಅದ್ದೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. 56ನೇ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು 56 ಕೆಜಿ ತೂಕದ ಕೇಕ್ ತಯಾರಿಸಿದ್ದು ವಿಶೇಷವಾಗಿತ್ತು.

ಶಿವಣ್ಣನ ಅವರ ಹುಟ್ಟುಹಬ್ಬದ ನಿಮಿತ್ಯ ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು ಆಗಮಿಸಿದ್ದರು.  ಅಭಿಮಾನಿಯೊಬ್ಬ ಎಲ್ಲರೂ ಅಚ್ಚರಿ ಪಡುವ ಕೆಲಸ ಮಾಡಿದ್ದಾರೆ. ಪಕೀರಪ್ಪ ಎಂಬ ಶಿವಣ್ಣ ಅವರ ಅಪ್ಪಟ್ಟ ಅಭಿಮಾನಿ 500 ಕಿಲೋ ಮೀಟರ್ ಸೈಕಲ್ ಸವಾರಿ ಮಾಡಿ ಶಿವಣ್ಣ ಅವರಿಗೆ ಹುಟ್ಟುಹಬ್ಬ ಶುಭಾಶಯ ತಿಳಿಸಿದ್ದಾರೆ.

 

 

ಅಪ್ಪಟ ಶಿವಣ್ಣ ಅಭಿಮಾನಿಯಾಗಿರುವ ಪಕೀರಪ್ಪ ಅವರು ಬೆಳಗಾವಿ ಜಿಲ್ಲೆಯವರಾಗಿದ್ದಾರೆ. ಇವರು ಚಿಕ್ಕವರಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ. ಶಿವಣ್ಣ ಅಭಿನಯದ ಆನಂದ್ ಸಿನಿಮಾ ನೋಡಿ ದೊಡ್ಡ ಅಭಿಮಾನಿಯಾದ ಪಕೀರಪ್ಪ ಅವರು ಇಂದು ಬೆಳಗಾವಿಯಿಂದ ಸುಮಾರು 500 ಕಿಮೀ ಗೂ ಅಧಿಕ ದೂರನ್ನು ಕ್ರಮಿಸಿ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಪಕೀರಪ್ಪ ಅವರು ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ಮೂರನೇ ಬಾರಿ ಬರುತ್ತಿದ್ದಾರೆ. ಮೊದಲ ಬಾರಿ ಕೂಡ ಸೈಕಲ್ ನಲ್ಲಿ ಆಗಮಿಸಿದ್ದ ಅವ್ರು, ಎರಡನೇ ಬಾರಿ ಕಾಲು ನಡಿಗೆಯಲ್ಲಿ ದೂರದ ಬೆಳಗಾವಿಯಿಂದ ಬಂದಿದ್ದರು ಎಂದು ತಿಳಿದು ಬಂದಿದೆ. 500ಕಿ.ಮೀ ಸೈಕಲ್ ನಲ್ಲೆ ಬಂದ ಅಭಿಮಾನಿಯನ್ನು ಕಂಡು ಶಿವಣ್ಣ ಮನ ಕರಿಗಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top