ಮನೋರಂಜನೆ

ಡಿಜಿಟಲ್ ಲೋಕಕ್ಕೂ ಕಾಲಿಟ್ಟರು ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್

ಇತ್ತೀಚಿಗೆ ವೆಬ್‌ ಸೀರಿಸ್‌ ಎಂಬುದು ಒಂದು ರೀತಿಯ ಟ್ರೆಂಡ್ ಆಗಿ ಬದಲಾಗಿದೆ.. ಈಗಷ್ಟೇ ಆಕ್ಟಿಂಗ್ ಕಲಿಯೋದಕ್ಕೆ ಶುರುವಿಟ್ಟಿರುವವರಿಂದ ಹಿಡಿದು ಸಾಕಷ್ಟು ಖ್ಯಾತ ನಟ ನಟಿಯರು ವೆಬ್‌ಸೀರಿಸ್‌ನಲ್ಲಿ ಕಾಣಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಇದೀಗ ಆ ಸಾಲಿಗೆ ಶಿವರಾಜ್‌ಕುಮಾರ್‌ ಸಹ ಸೇರಿಕೊಂಡಿದ್ದಾರೆ. ..ಚಿತ್ರದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಶಿವರಾಜಕುಮಾರ್ ಈಗ ಈ ವೆಬ್ ಸೀರಿಸ್ ಗಳ ಕಡೆ ಮುಖ ಮಾಡಿರೋದು ಯಾಕೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಅಷ್ಟಕ್ಕೂ ಶಿವಣ್ಣ ವೆಬ್ ಸೀರಿಸ್ ಗಳಲ್ಲಿ ಅಭಿನಯಿಸುತ್ತಿಲ್ಲ ಬದಲಾಗಿ ನಿರ್ಮಾಣ ಮಾಡುತ್ತಿದ್ದಾರೆ.. ಇತ್ತೀಚೆಗೆ ಶ್ರೀಮುತ್ತು ಸಿನಿ ಸರ್ವೀಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿರುವ ಶಿವಣ್ಣ ಆ ಸಂಸ್ಥೆ ಮೂಲಕ ಮಾನಸಸರೋವರ ಎಂಬ ಧಾರಾವಾಹಿಯನ್ನು ಪ್ರೊಡ್ಯೂಸ್ ಮಾಡಿದ್ದರು. ಈಗ ಅದೇ ಸಂಸ್ಥೆಯಿಂದ ವೆಬ್‌ಸೀರಿಸ್‌ನ್ನು ನಿರ್ಮಾಣ ಮುಂದಾಗಿದ್ದಾರೆ., ತಮ್ಮ ತಮ್ಮ ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ನಲ್ಲಿ ಈ ವೆಬ್ ಸೀರಿಸ್ ತಯಾರಾಗುತ್ತಿದೆ.

 

 

ನೆನ್ನೆ ಶಿವಣ್ಣನ ಬರ್ತಡೇ ಅಂಗವಾಗಿ ಈ ವೆಬ್ ಸೀರಿಸ್ ಪೋಸ್ಟರ್ ಬಿಡುಗಡೆಯಾಗಿದ್ದು ಅದಕ್ಕೆ ‘ಹೇಟ್ ಯೂ ರೋಮಿಯೊ’ ಎಂಬ ಟೈಟಲ್ ಇಡಲಾಗಿದೆ. ಈ ಹಿಂದೆ ಲೂಸ್ ಕನೆಕ್ಷನ್ ಎಂಬ ವೆಬ್ ಸೀರಿಸ್ ಮೂಲಕ ಖ್ಯಾತಿ ಗಳಿಸಿದ್ದ ಟೀಮ್ ಮತ್ತೊಮ್ಮೆ ‘ಹೇಟ್ ಯೂ ರೋಮಿಯೊ’ ವೆಬ್ ಸೀರಿಸ್ ಮಾಡುತ್ತಿದೆ. ಇಶಾಮ್ ಖಾನ್ ಹಾಗೂ ಹಸೀನ್ ಖಾನ್ ಅವರ ನಿರ್ದೇಶನದಲ್ಲಿ ಇದು ಮೂಡಿಬರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top