ಮನೋರಂಜನೆ

ಪಾತ್ರಕ್ಕಾಗಿ ಪಲ್ಲಂಗ- ರಾಘವ ಲಾರೆನ್ಸ್ ವಿರುದ್ಧ ಗಂಭೀರ ಆರೋಪ ಮಾಡಿದ ಶ್ರೀರೆಡ್ಡಿ.

ತೆಲುಗು ಚಿತ್ರರಂಗದಲ್ಲಿ ಬೇರೂರಿರುವ ಪಾತ್ರಕ್ಕಾಗಿ ಮಂಚಕ್ಕೆ ಕರೆಯುವವ ಕಾಮುಕರ ವಿರುದ್ಧ ನಿರ್ಣಾಯಕ ಸಮರ ಸಾರಿರುವ ಬಾಲಿವುಡ್ ಮೂಲದ ನಟಿ ಶ್ರೀರೆಡ್ಡಿಯ ವಿವಾದಗಳು ಯಾವುದೇ ಅಡೆತಡೆಯಿಲ್ಲದೆ ಭರ್ಜರಿಯಾಗಿ ಮುಂದುವರೆದಿವೆ. ಮಹೇಶ್ ಬಾಬು, ಪವನ್ ಕಲ್ಯಾಣ್‌ರಂಥಾ ಅತ್ಯಂತ ಪ್ರಭಾವಿ ಸ್ಟಾರ್ ನಟರನ್ನೂ ಬಿಡದೆ ತಡವಿಕೊಂಡಿರುವ ಈಕೆ ಒಂದು ಕಡೆಯಿಂದ ಎಲ್ಲರನ್ನೂ ಟಾರ್ಗೆಟ್ ಮಾಡುತ್ತಾ ಪ್ರತಿಯೊಬ್ಬರ ಮಾನ ಮರ್ಯಾದೆಗಳನ್ನು ಮೂರ್ಕಾಸಿಗೆ ಹರಾಜಿಡುತ್ತಿದ್ದಾಳೆ.

 

 

ಕಳೆದೊಂದಷ್ಟು ದಿನದಿಂದ ತೆಲುಗಿನ ನ್ಯಾಚುರಲ್ ಸ್ಟಾರ್ ನಾಣಿ ಬೆನ್ನು ಬಿದ್ದು ಅವನನ್ನು ಕಾಮುಕ, ಅವನಿಗೆ ಹುಡುಗಿಯರ ಶೋಕಿ ಎಂದೆಲ್ಲಾ ಎಂದು ಕರೆದು ನಾನಾ ಆರೋಪಗಳನ್ನು ಮಾಡಿದ್ದ ಶ್ರೀರೆಡ್ಡಿ ಇದೀಗ ತನ್ನ ಆರೋಪಗಳನ್ನು ತೆಲುಗು ಚಿತ್ರರಂಗದಿಂದ ತಮಿಳು ಚಿತ್ರರಂಗಡೆಗೆ ಶಿಫ್ಟ್ ಮಾಡಿದ್ದಾಳೆ.. ನೆನ್ನೆ ತಾನೇ ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್ ಮತ್ತು ನಟ ಶ್ರೀಕಾಂತ್ ಮೇಲೆ ತಮ್ಮನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದ ಶ್ರೀರೆಡ್ಡಿ ಇದೀಗ ತಮಿಳಿನ ಸ್ಟಾರ್ ನಟ ರಾಘವ ಲಾರೆನ್ಸ್ ಮೇಲೆ ಗಂಭೀರ ಆರೋಪವನ್ನು ಮಾಡಿದ್ದಾಳೆ.

ರಾಘವ ಲಾರೆನ್ಸ್ ನನ್ನ ಜೊತೆ ದೈಹಿಕ ಸಂಪರ್ಕ ನಡೆಸಿದ್ದಾರೆ ಎಂದು ಆರೋಪಿಸಿರುವ ಶ್ರೀರೆಡ್ಡಿ ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ ಶ್ರೀರೆಡ್ಡಿ ಸೌತ್ ಸಿನಿ ದುನಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. “ನನ್ನ ಕೆಲ ಸ್ನೇಹಿತರ ಮೂಲಕ ಗೋಲ್​ಕೊಂಡ ಹೋಟೆಲ್​ನಲ್ಲಿ ನಟ ರಾಘವ ಲಾರೆನ್ಸ್​ ಅವರ ಪರಿಚಯವಾಗಿತ್ತು. ಅವತ್ತು ಅವರು ನನ್ನನ್ನು ಅವರ ರೂಮ್​ಗೆ ಕರೆದುಕೊಂಡು ಹೋಗಿದ್ದರು. ಅವರ ರೂಮಿನಲ್ಲಿ ರಾಘವೇಂದ್ರ ಸ್ವಾಮಿ ಫೋಟೋ ಮತ್ತು ರುದ್ರಾಕ್ಷಿ ಮಾಲೆಗಳಿದ್ದವು. ಅವನ್ನು ನೋಡಿದ ನಾನು ಲಾರೆನ್ಸ್ ತುಂಬಾ ಒಳ್ಳೆಯ ವ್ಯಕ್ತಿ ಎಂದುಕೊಂಡಿದ್ದೆ. ಆದರೆ ಸ್ವಲ್ಪ ಹೊತ್ತಿನ ನಂತರ ಸೊಂಟ ತೋರಿಸುತ್ತಾ ಕನ್ನಡಿಯೊಂದಿಗೆ ರೊಮ್ಯಾನ್ಸ್ ಮಾಡುವಂತೆ ನನಗೆ ರಾಘವ​ ಹೇಳಿದರು. ಏಕೆ ಎಂದು ಕೇಳಿದಕ್ಕೆ ನಿನಗೆ ಸಿನಿಮಾದಲ್ಲಿ ಅವಕಾಶ ಬೇಕೆಂದರೆ ಅಭಿನಿಯಿಸಿ ತೋರಿಸು ಎಂದರು.. ಅಷ್ಟೇ ಅಲ್ಲದೆ ಅವರು ನನ್ನನ್ನು ದೈಹಿಕವಾಗಿ ಬಳಸಿಕೊಂಡು ನಿನಗೆ ಆಫರ್​ ಪಕ್ಕಾ ಕನ್ಫರ್ಮ್ ಎಂದರು.. ಚಿತ್ರಗಳ ಅವಕಾಶಕ್ಕಾಗಿ ಅವರೊಂದಿಗೆ ಕೆಲಕಾಲ ನಾನು ಸ್ನೇಹವನ್ನೂ ಮುಂದುವರಿಸಿದ್ದೆ. ಆದರೆ ನನಗೆ ಯಾವುದೇ ಸಿನಿಮಾ ಚಾನ್ಸ್ ನೀಡದೆ ಅವರೂ ನನಗೆ ಮೋಸ ಮಾಡಿ ನನ್ನ ಜೀವನದಲ್ಲಿ ಖಳನಾಯಕನಾದರು’ ಎಂದು ಶ್ರೀರೆಡ್ಡಿ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ತನಗೆ ಕಾಸ್ಟ್ ಕೌಚಿಂಗ್ ಮಾಡಿದವರ ಬಣ್ಣ ಬಯಲು ಮಾಡುವ ಶಪಥ ತೊಟ್ಟಿರುವ ಈಕೆ ತಿಂಗಳಿನಿಂದೆ ಫಿಲಂ ಚೇಂಬರ್ ಎದುರು ಬಟ್ಟೆ ಕಳಚಿ ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಳು. ಯಾವಾಗ ನಡು ಬೀದಿಯಲ್ಲಿ ಅರೆ ಬೆತ್ತಲೆಯಾಗಿ ನಿಂತು ಬಾಯಿ ಬಡಕೊಂಡರೂ ನ್ಯಾಯವೆಂಬುದು ಮರೀಚಿಕೆಯಾಯ್ತೋ… ಆಗ ಶ್ರೀ ರೆಡ್ಡಿ ರೊಚ್ಚಿಗೆದ್ದಿದ್ದಾಳೆ. ತನ್ನನ್ನು ಬಲವಂತವಾಗಿ, ಅವಕಾಶ ಕೊಡಿಸುವ ಆಮಿಷವೊಡ್ಡಿ ಕೆಡವಿಕೊಂಡವರ ಅಸಲಿ ಮುಖವಾಡಗಳನ್ನು ಕಳಚುತ್ತೇನೆ ಎಂದು ಹೇಳಿಕೊಂಡು ದಿನಕ್ಕೊಬ್ಬ ನಟ ನಿರ್ದೇಶಕ, ನಿರ್ಮಾಪಕರ ಹೆಸರನ್ನು ಹೊರಹಾಕುತ್ತಿದ್ದಾಳೆ. ಪವನ್ ಕಲ್ಯಾಣ್, ಮಹೇಶ್ ಬಾಬು ಅವರಂಥ ದೊಡ್ಡ ನಟರನ್ನೇ ಲೆಕ್ಕಿಸಿದೆ ಅವರನ್ನು ಟಾರ್ಗೆಟ್ ಮಾಡಿ ಕೆಟ್ಟದಾಗಿ ಮೂದಲಿಸಿದ ಈಕೆಯ ವಕ್ರದೃಷ್ಟಿ ಇದೀಗ ತಮಿಳು ಚಿತ್ರರಂಗದ ಮೇಲೆ ಬಿದ್ದಿದ್ದು ಮತ್ತಷ್ಟು ಅನೇಕ ಹೆಸರುಗಳನ್ನೂ ಬಹಿರಂಗಪಡಿಸುವುದಾಗಿ ಸುಳಿವು ನೀಡಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top