ಮನೋರಂಜನೆ

ಪವನ್‌ ಕಲ್ಯಾಣ್‌ ವಿರುದ್ಧ ಮತ್ತೆ ರೊಚ್ಚಿಗೆದ್ದ ಶ್ರೀರೆಡ್ಡಿ.

ತೆಲುಗು ಚಿತ್ರರಂಗದಲ್ಲಿ ಬೇರೂರಿರುವ ಪಾತ್ರಕ್ಕಾಗಿ ಮಂಚಕ್ಕೆ ಕರೆಯುವವ ಕಾಮುಕರ ವಿರುದ್ಧ ನಿರ್ಣಾಯಕ ಸಮರ ಸಾರಿರುವ ಬಾಲಿವುಡ್ ಮೂಲದ ನಟಿ ಶ್ರೀರೆಡ್ಡಿಯ ವಿವಾದಗಳು ಯಾವುದೇ ಅಡೆತಡೆಯಿಲ್ಲದೆ ಭರ್ಜರಿಯಾಗಿ ಮುಂದುವರೆದಿವೆ.ಹಾಕೊಂಡಿದ್ದ ಬಟ್ಟೆಯನ್ನು ನಡು ರೋಡಿನಲ್ಲಿ ಕಿತ್ತೆಸೆದು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಮಹೇಶ್ ಬಾಬು, ಪವನ್ ಕಲ್ಯಾಣ್‌ರಂಥಾ ಅತ್ಯಂತ ಪ್ರಭಾವಿ ಸ್ಟಾರ್ ನಟರನ್ನೂ ಬಿಡದೆ ತಡವಿಕೊಂಡಿರುವ ಈಕೆ ಒಂದು ಕಡೆಯಿಂದ ಎಲ್ಲರನ್ನೂ ಟಾರ್ಗೆಟ್ ಮಾಡುತ್ತಾ ಪ್ರತಿಯೊಬ್ಬರ ಮಾನ ಮರ್ಯಾದೆಗಳನ್ನು ಮೂರ್ಕಾಸಿಗೆ ಹರಾಜಿಡುತ್ತಿದ್ದಾಳೆ.

 

 

ಕಳೆದೊಂದಷ್ಟು ದಿನದಿಂದ ತೆಲುಗಿನ ನ್ಯಾಚುರಲ್ ಸ್ಟಾರ್ ನಾಣಿ ಬೆನ್ನು ಬಿದ್ದು ಅವನನ್ನು ಕಾಮುಕ, ಅವನಿಗೆ ಹುಡುಗಿಯರ ಶೋಕಿ ಎಂದೆಲ್ಲಾ ಎಂದು ಕರೆದು ನಾನಾ ಆರೋಪಗಳನ್ನು ಮಾಡಿದ್ದ ಶ್ರೀರೆಡ್ಡಿ ಇದೀಗ ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ಮತ್ತೊಂದು ಸುತ್ತಿನ ಸಮರ ಸಾರಿದ್ದಾಳೆ. ಇತ್ತೀಚಿನ ಜನಸೇನಾ ಸಮಾರಂಭವೊಂದರಲ್ಲಿ “ನನಗೆ ಮಹಿಳೆಯರ ಮೇಲೆ ಗೌರವವಿರುವುದರಿಂದ ನನ್ನ ಸಿನಿಮಾಗಳಲ್ಲಿ ನಟಿಯರಿಗೆ ತುಂಡುಬಟ್ಟೆ ಹಾಕಿಸೋದಿಲ್ಲ” ಎಂದು ಪವನ್ ಕಲ್ಯಾಣ್ ಹೇಳಿದ್ದರು.. ಈ ಹೇಳಿಕೆಯನ್ನು ಇಟ್ಟುಕೊಂಡು ಫೇಸ್ಬುಕ್ ಪೋಸ್ಟ್ ಹಾಕಿರುವ ಶ್ರೀರೆಡ್ಡಿ ಪವನ್’ಗೆ ತಿರುಗೇಟು ನೀಡಿದ್ದಾರೆ.

ಮಹಿಳೆಯರ ಬಗ್ಗೆ ಮಾತನಾಡುತ್ತಾ ನೀವು ಒಂದು ಮಾತು ಹೇಳಿದ್ದೀರಲ್ಲಾ ಸಾರ್‌, ನನಗೆ ಮಹಿಳೆಯರೆಂದ್ರೆ ತುಂಬಾ ಗೌರವ, ಹೀಗಾಗಿ ನನ್ನ ಸಿನಿಮಾಗಳಲ್ಲಿ ಅರೆನಗ್ನ ದೃಶ್ಯಗಳಿಗೆ ಅನುಮತಿ ಕೊಡೋದಿಲ್ಲ ಅಂತ. ಈ ಮಾತನ್ನು ನೆನಪಿಸುವ ಒಂದು ಸಣ್ಣ ಪ್ರಯತ್ನವಿದು ಸರ್‌.. ” ಎಂದು ಬರೆದು ಪವನ್‌ ಕಲ್ಯಾಣ್‌ ನಟಿಸಿರುವ ಚಿತ್ರಗಳಲ್ಲಿ ನಟಿಯರು ಅರೆನಗ್ನವಾಗಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಕಾಸ್ಟ್ ಕೌಚಿಂಗ್ ಮಾಡಿದವರ ಬಣ್ಣ ಬಯಲು ಮಾಡುವ ಶಪಥ ತೊಟ್ಟಿರುವ ಈಕೆ ತಿಂಗಳಿನಿಂದೆ ಇಂಡಸ್ಟ್ರಿಯ ಖ್ಯಾತನಾಮರ ಕಾಮಪುರಾಣವನ್ನು ಹೊರಗೆಳೆದ ಬೆನ್ನಲ್ಲೇಯೇ ಇದೀಗ ಮತ್ತೊಂದು ಸುತ್ತಿನ ಸಮರಕ್ಕೆ ಚಾಲನೆ ನೀಡಿದ್ದಾಳೆ. ಪವನ್ ಕಲ್ಯಾಣ್, ಮಹೇಶ್ ಬಾಬು ಅವರಂಥ ದೊಡ್ಡ ನಟರನ್ನೇ ಲೆಕ್ಕಿಸಿದೆ ಅವರನ್ನು ಟಾರ್ಗೆಟ್ ಮಾಡಿ ಕೆಟ್ಟದಾಗಿ ಮೂದಲಿಸಿದ ಈಕೆಯ ವಕ್ರದೃಷ್ಟಿ ಇದೀಗ ತಮಿಳು ಚಿತ್ರರಂಗದ ಮೇಲೆ ಬಿದ್ದಿದ್ದು ಮತ್ತಷ್ಟು ಅನೇಕ ಹೆಸರುಗಳನ್ನೂ ಬಹಿರಂಗಪಡಿಸುವುದಾಗಿ ಸುಳಿವು ನೀಡಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top