ಮನೋರಂಜನೆ

ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ಟಗರು-2 ಪ್ರೊಮೊಶನಲ್ ಸಾಂಗ್.

ಸೂರಿ ನಿರ್ದೇಶನದ ಟಗರು ಚಿತ್ರ ಭರಪೂರ ಗೆಲುವನ್ನು ತನ್ನದಾಗಿಸಿಕೊಂಡಿದೆ. ನಮ್ಮ ನಡುವಿನವೆ ಅನ್ನಿಸುವಂಥಾ ಪಾತ್ರಗಳು, ಭಿನ್ನವದ ನಿರೂಪಣಾ ಶೈಲಿ, ಅಚ್ಚರಿಯಾಗುವಂಥಾ ಪಾತ್ರಗಳಿಂದ ಕನ್ನಡದ ಗಡಿಯಾಚೆಗೂ ಟಗರಿನ ಖದರ್ ಹರಡಿಕೊಂಡಿದೆ. ಶಿವಣ್ಣನ ಎನರ್ಜಿಟಿಕ್ ನಟನೆ, ಮಾನ್ವಿತಾ, ಧನಂಜಯ್, ವಸಿಷ್ಠರಂತಹ ಮನೋಜ್ಞ ಅಭಿನಯ, ಸೂರಿಯ ಪಾತ್ರಕಟ್ಟುವ ಕುಸುರಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಅಭಿಮಾನದಾಚೆಗೆ ನೋಡಿಸಿಕೊಳ್ಳುತ್ತಿರುವ ಟಗರು ಇದೀಗ ಯಶಸ್ವಿ 100 ದಿನಗಳನ್ನು ಕಂಪ್ಲೀಟ್ ಮಾಡಿ 150ನೇ ದಿನದತ್ತ ದಾಪುಗಾಲಿಡುತ್ತಿದೆ.

 

 

ಇಂಥಾದ್ದೊಂದು ಪುಷ್ಕಳ ಗೆಲುವನ್ನು ಕಂಡಿರುವ ಟಗರು ಚಿತ್ರದ ಸೀಕ್ವೆಲ್ ತಯಾರಾಗುತ್ತಿರುವ ವಿಷಯ ಬಹುಷಃ ಎಲ್ಲರಿಗೂ ತಿಳಿದಿರುತ್ತದೆ. ಇದೀಗ ಅದರ ಸಂಭಂದಪಟ್ಟ ಕೆಲಸಗಳು ಸದ್ದಿಲ್ಲದೇ ನಡೆಯುತ್ತಿದ್ದು ಚಿತ್ರಕತೆಯನ್ನು ಸಿದ್ಧಪಡಿಸುವುದರಲ್ಲಿ ನಿರ್ದೇಶಕರು ಬ್ಯುಸಿಯಾಗಿದ್ದಾರೆ. ಈ ನಡುವೆ ಶಿವಣ್ಣನ ಅಭಿಮಾನಿಗಳೇ ಸೇರಿಕೊಂಡು ಟಗರು-2’ ಚಿತ್ರಕ್ಕೆ ಮಾಡಿರುವ ಮಾಡಿರುವ ಹಾಡೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಕ್ಕತ್ ಹವಾ ಎಬ್ಬಿಸಿದ್ದು ವೈರಲ್ ಆಗಿದೆ.

ಪಿಆರ್‌ಕೆ ಆಡಿಯೋ ಕಂಪೆನಿ ಮೂಲಕ ಹೊರತರಲಾಗಿರುವ ಈ ಹಾಡನ್ನು ಗದಗ ಜಿಲ್ಲೆಯ ಶಿರಹಟ್ಟಿ ಮೂಲದ ಸತೀಶ್ ಎಂಬುವವರು ರಚನೆ ಮಾಡಿದ್ದಾರೆ. ಮಂಗಳೂರು ಮೂಲದ ಲಾಯ್ ವ್ಯಾಲೆಂಟೈನ್ ಸಾಲ್ಡಾನಾ ಅವರು ಹಾಡಿಗೆ ವಿಭಿನ್ನ ರೀತಿಯ ಸಂಗೀತ ಸಂಯೋಜಿಸಿ, ಧ್ವನಿ ನೀಡಿದ್ದಾರೆ. ಟಗರು ಚಿತ್ರದ ನಿರ್ಮಾಪಕ ಶ್ರೀಕಾಂತ್, ನಿರ್ದೇಶಕ ಸೂರಿ, ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ದಿನಕರ್ ತೂಗುದಿಪ್ ಸೇರಿ ಅನೇಕ ಮಂದಿ ಈ ಹಾಡನ್ನು ಕೇಳಿ ಮೆಚ್ಚಿಕೊಂಡಿದ್ದಾರೆ.

 

 

ಈ ಹಾಡನ್ನು ಇಲ್ಲಿ ಕೇಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top