ಮನೋರಂಜನೆ

ಫಿಲಂ ಛೇಂಬರ್​ಗೆ ದೂರು ನೀಡಿದ ವಜ್ರಮುನಿ ಕುಟುಂಬಸ್ಥರು- ಯಾಕೆ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ಶ್ರೇಷ್ಠ ಖಳನಟ ಎಂದೇ ಹೆಸರವಾಸಿಯಾಗಿ ಕನ್ನಡಿಗರ ಮನದಲ್ಲಿ ಹಚ್ಚಿಳಿಸಿಕೊಂಡಿರುವವರು ನಟಭಯಂಕರ ವಜ್ರಮುನಿ. ಇಂಥಾ ವಜ್ರಮುನಿಯವರ ಹೆಸರನ್ನು ಇಟ್ಟುಕೊಂಡಿ ಯುವತಂಡವೊಂದು ಚಿತ್ರವನ್ನು ತೆಗೆಯಲು ಹೊರಟಿದೆಯಲ್ಲಾ ಆ ಚಿತ್ರತಂಡ ವಿರುದ್ಧ ಖುದ್ದು ವಜ್ರಮುನಿಯವರ ಕುಟುಂಬವೇ ಆಕ್ರೋಶಗೊಂಡಿದ್ದಾರೆ.

 

 

ವಜ್ರಮುನಿ ಪತ್ನಿ ಲಕ್ಷ್ಮೀದೇವಿ, ಪುತ್ರ ಜಗದೀಶ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿ ದೂರು ನೀಡಿದ್ದು, ಕುಟುಂಬಸ್ಥರ ಅನುಮತಿ ಪಡೆಯದೇ ‘ವಜ್ರಮುನಿ’ ಎಂಬ ಟೈಟಲ್ ಇಟ್ಟುಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ನಮ್ಮ ಅನುಮತಿಯಿಲ್ಲದೆ ವಜ್ರಮುನಿಯವರ ಯಾವುದೇ ಫೋಟೋಗಳನ್ನಾಗಲಿ ಅಥವಾ ಯಾವುದೇ ದೃಶ್ಯಗಳನ್ನು ಬಳಸಕೂಡದು.. ಅಂತಹುದರಲ್ಲಿ ಅವರ ಹೆಸರನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾದಲ್ಲಿರುವ ವಿಚಾರಗಳನ್ನು ನಮ್ಮ ಬಳಿ ಚರ್ಚಿಸದೇ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯಾವೆಲ್ಲಾ ಸಂಗತಿಗಳನ್ನು ತೋರಿಸುತ್ತಾರೆ ಎಂದೂ ಕೂಡ ಚರ್ಚೆ ಮಾಡಿಲ್ಲ” ಎಂದು ದೂರಿನಲ್ಲಿ ವಜ್ರಮುನಿ ಕುಟುಂಬ ತಿಳಿಸಿದೆ. ದೂರನ್ನು ಪರಿಗಣಿಸಿರುವ ಫಿಲಂ ಛೇಂಬರ್​ ಆದಷ್ಟು ಬೇಗ ‘ವಜ್ರಮುನಿ’ ಚಿತ್ರತಂಡ ಹಾಗೂ ವಜ್ರಮುನಿ ಕುಟುಂಬ ಇಬ್ಬರನ್ನು ಒಟ್ಟಿಗೆ ಕೂರಿಸಿ ಮಾತನಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top