ಸಿನಿಮಾ

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ವೈಎಸ್‍‍ಆರ್ ಜೀವನಾಧಾರಿತ ‘ಯಾತ್ರಾ’ ಟೀಸರ್

ಆಂಧ್ರ ಪ್ರದೇಶ ರಾಜ್ಯದ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಜೀವನಾಧಾರಿತ ತೆಲುಗು ಸಿನಿಮಾದಲ್ಲಿ ಮಲಯಾಲಂ ಸೂಪರ್ ಸ್ಟಾರ್ ಮಮ್ಮೂಟಿ ಅಭಿನಯ ಮಾಡಿದ್ದು ಸಿನಿಮಾ ಟೀಸರ್ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆದಿದೆ ಎಂದು ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ತೆಲುಗು ನಟಿ ಸಾವಿತ್ರಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ‘ಮಹಾನಟಿ’ ಸಿನಿಮಾ ತೆರೆಗೆ ಬಂದು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿತ್ತು. ಈಗ ವೈ.ಎಸ್ ರಾಜಶೇಖರ ರೆಡ್ಡಿ (ವೈಎಸ್‌ಆರ್) ಜೀವನಾಧಾರಿತ ‘ಯಾತ್ರಾ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ದವಾಗಿದೆ ಎಂದು ತಿಳಿದು ಬಂದಿದೆ.

ವೈಎಸ್‌ಆರ್ ಹುಟ್ಟು ಹಬ್ಬದಂದು ‘ಯಾತ್ರಾ’ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ಸುಮಾರು 3 ಮಿಲಿಯನ್ಸ್ ಗು ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದಾರೆ.

 


 

ಸಿನಿಮಾ ವೈಎಸ್‌ಆರ್ ರವರು ರಾಜ್ಯಾದ್ಯಂತ ನಡೆಸಿದ ಐತಿಹಾಸಿಕ ಪಾದಯಾತ್ರೆಯ ಕುರಿತಾಗಿದೆ. ಮಹಿ ಆರ್ ರಾಘವ್ ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ರಾವ್ ರಮೇಶ್, ಅನಸೂಯ, ಪೊಸನಿ ಕೃಷ್ಣ ಮುರುಳಿ, ವಿನೋದ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಓ ‘ಯಾತ್ರಾ’ ಸಿನಿಮಾ ಟೀಸರ್ ನಲ್ಲಿ ವೈಎಸ್‌ಆರ್ ಪಾತ್ರದ ನಟ ಮುಮ್ಮೂಟ್ಟಿ, ‘ನಾನು ತಿಳಿದುಕೊಳ್ಳಬೇಕು, ನಾನು ಕೇಳಬೇಕು ಮತ್ತು ಕಡಪದ ಪ್ರತಿಯೊಂದು ಮನೆಗೂ ಭೇಟಿ ಅವರ ಹೃದಯದ ಬಡಿತವನ್ನು ನಾನು ಕೇಳಲೇಬೇಕು. ನಾನು ಪಾದಯಾತ್ರೆ ಮಾಡಲೇಬೇಕು. ಒಂದು ವೇಳೆ ಅದರಲ್ಲಿ ಯಶಸ್ವಿಯಾದರೇ ಮೊಂಡುತನ, ವಿಫಲವಾದರೇ ಮೂರ್ಖತನ ಎಂದು ನನ್ನನ್ನು ಕರೆಯುತ್ತಾರೆ’ ಎಂದು ಹೇಳಿ ಮನೆಯಿಂದ ಹೊರಗೆ ಬರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top