ಆರೋಗ್ಯ

ಹಲಸಿನಹಣ್ಣಿನ ಇಡ್ಲಿಯನ್ನ ಮಾಡೋದು ಹೇಗೆ ಗೊತ್ತಾ?

ಹಲಸಿನ ಹಣ್ಣು ಏನಂದ್ರೆ ಬಾಯಲ್ಲಿ ನೀರು ತರಿಸುತ್ತದೆ ಮತ್ತೆ ಇದರಲ್ಲಿ ಹಲವಾರು ಪೋಷಕಾಂಶಗಳನ್ನು ಹೊಂದಿದೆ .
ಈ ಒಂದು ಹಲಸಿನ ಹಣ್ಣಿನಲ್ಲಿ ಬರಿ ತಿನ್ನುವುದಕ್ಕೆ ಮಾತ್ರ ಸೀಮಿತವಾಗಲಿಲ್ಲ ಇದರಲ್ಲಿ ಹಲವಾರು ಬಗೆ ಬಗೆಯ ಅಡುಗೆಯನ್ನ ಮಾಡಬಹುದು.ಇದು ತುಂಬಾ ಆರೋಗ್ಯಾಕಾರಿಯಾಗಿರುತ್ತದೆ.
ಮಲೆನಾಡಿನಲ್ಲಿ ಹೆಚ್ಚಾಗಿ ತಯಾರಿಸುವಂತಹ ಹಲಸಿನ ಹಣ್ಣುಗಳಲ್ಲಿ ಇಡ್ಲಿ , ಕಡುಬು, ತುಂಬಾನೇ ಪ್ರಸಿದ್ದಿ ಹೊಂದಿದೆ.

ಹಲಸಿನ ಹಣ್ಣಿನ ಇಡ್ಲಿ

ಇದಕ್ಕೆ ಬೇಕಾಗುವ ಸಾಮಗ್ರಿಗಳು
ಹಲಸಿನ ಹಣ್ಣಿನ ತೊಳೆ ಎರಡರಿಂದ ಮೂರೂ ಕಪ್,
ಅಕ್ಕಿ ತರಿ ಒಂದು ಕಪ್
ಬೆಲ್ಲ ಅರ್ಧ ಕಪ್
ಒಂದು ಚಮಚ ಉಪ್ಪು
ಚೀಟಿಗೆ ಏಲಕ್ಕಿ ಪುಡಿ

 

 

ತಯಾರಿಸುವ ವಿಧಾನ
ಬೀಜಗಳಿಂದ ಬೇರ್ಪಡಿಸಿದ ಹಲಸಿನ ಹಣ್ಣನ್ನು ನುಣ್ಣಗೆ ರುಬ್ಬಿಕೊಳ್ಳಿ, ನಂತರ ಮೇಲೆ ಹೇಳಿರುವ ರುಬ್ಬಿದ ಅಕ್ಕಿ ತರಿಯನ್ನ ಹಲಸಿನ ಹಣ್ಣಿನ ಜೊತೆ ಮಿಶ್ರಣ ಮಾಡಿ . ನಂತರ ಅದಕ್ಕೆ ಬೆಲ್ಲ ಮತ್ತು ಏಲಕ್ಕಿ ಪುಡಿ ಹಾಕಿ ಚನ್ನಾಗಿ ಮಿಶ್ರಣ ಮಾಡಿ ಇದು ಇಡ್ಲಿ ಹಿಟ್ಟಿಗಿಂತ ಸಲ್ಪ ತೆಳ್ಳೆಗೆ ಇರಲಿ .ನಂತರ ಕಲಸಿದ ಹಿಟ್ಟನ್ನ 10 -20 ನಿಮಿಷ ಸಮಯ ಹಾಗೆ ಬಿಡಿ.
ಆಮೇಲೆ ಇಡ್ಲಿ ಪಾತ್ರೆಯಲ್ಲಿ ಕಲಸಿದ ಹಲಸಿನ ಹಣ್ಣಿನ ಹಿಟ್ಟನ್ನು ಎಣ್ಣೆ ಸವರಿ ಇಡ್ಲಿ ಪಾತ್ರೆಯಲ್ಲಿ ಹಾಕಿ ಸುಮಾರು 30 ನಿಮಿಷಗಳ ಕಾಲ ಬೇಯಲು ಬಿಡಿ .ನಂತರ ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಇಡ್ಲಿ ತಯಾರಾಗುತ್ತದೆ.
ಇದನ್ನ ಬಾಳೆಯೆಲೆಯಲ್ಲಿ ಮಾಡಿದರೆ ಇಡ್ಲಿಯನ ಕನಿಷ್ಠ ಒಂದು ಗಂಟೆಯಾದ್ರೂ ಬೇಯಿಸಬೇಕು.
ಇದು ತುಪ್ಪದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.ಹಾಗು ನಿಮ್ಮ ಚರ್ಮ ಕಾಂತಿಗೆ ನೈಸರ್ಗಿಕವಾಗಿ ಸಿಗುವ ಮನೆ ಮದ್ದು ಆಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top