ಸಮಾಚಾರ

ಮಂಡ್ಯದ ಪುಟ್ಟ ಗ್ರಾಮದಲ್ಲಿ ಬೆಳಕು ಮೂಡಿಸಿದ ಆಲಿಯಾ ಭಟ್ ಬಟ್ಟೆ.

ಚಿತ್ರರಂಗದ ಕೆಲವು ನಟ ನಟಿಯರು ಬಡವರಿಗೆ ತಮ್ಮ ಕೈಲಾದಷ್ಟು ಸಹಾಯ ನೀಡುವ ಮೂಲಕ ಅನೇಕರಿಗೆ ಮಾದರಿ ಆಗುತ್ತಾರೆ. ಇದೇ ಸಾಲಿನಲ್ಲಿ ಸೇರ್ಪಡೆಯಾಗಿರುವ ಹೊಸ ಹೆಸರು ಬಾಲಿವುಡ್ ನಟಿ ಆಲಿಯಾ ಭಟ್ ಅವರದ್ದು. ಆಲಿಯಾ ಭಟ್ ಅವರು ಕರ್ನಾಟಕದ ಮಂಡ್ಯ ಜಿಲ್ಲೆಯ ಹಳ್ಳಿಗೆ ವಿದ್ಯುತ್ ಒದಗಿಸುವ ಮೂಲಕ ಗಮನ ಸೆಳೆದಿದ್ದಾರೆ ಎಂದು ತಿಳಿದು ಬಂದಿದೆ.

 

 

ರಾಜ್ಯದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಎಂಬ ಹಳ್ಳಿಯಲ್ಲಿ 40 ಬಡ ಕುಟುಂಬಗಳಿಗೆ ನಟಿ ಆಲಿಯಾ ಭಟ್ ಸೋಲಾರ್ ದೀಪಗಳನ್ನು ಕೊಡುವ ಕಾರ್ಯ ಮಾಡಿದ್ದಾರೆ. ಈ ವರ್ಷ ಪ್ರಾರಂಭಗೊಂಡ `ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್’ ಸ್ಟೈಲ್ಕ್ರಾಕರ್ ನೈಟ್ ಮಾರ್ಕೆಟ್ ಅಭಿಯಾನದಲ್ಲಿ ಆಲಿಯಾ ಭಟ್ ತಮ್ಮ ವಿಶೇಷ ಉಡುಪೊಂದನ್ನು ಮಾರಾಟ ಮಾಡಿದ್ದರು. ಈ ಉಡುಪನ್ನು ಮಾರಾಟದಿಂದ ಬಂದ ಹಣವನ್ನು ಅವರು ಬೆಂಗಳೂರಿನ ಎಆರ್ ಓಎಚ್‍ಎ ಸಂಸ್ಥೆಯೊಂದು ಆಯೋಜಿಸಿದ್ದ `ಲಿಟರ್ ದ ಲೈಟರ್’ ಕಾರ್ಯಕ್ರಮದಲ್ಲಿ ಒದಗಿಸಿದ್ದರು ಎಂದು ತಿಳಿದು ಬಂದಿದೆ.

ಈ ಸಂಸ್ಥೆ `ಲಿಟರ್ ದ ಲೈಟರ್’ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಇದು ಪ್ಲಾಸ್ಟಿಕ್ ಬಾಟಲ್‍ ಗಳನ್ನೂ ಮರುಬಳಕೆ ಮಾಡಿ ಬಳಿಕ ಅದರಿಂದ ವಿದ್ಯುತ್ ಇಲ್ಲದ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೋಲಾರ್ ದೀಪಗಳನ್ನು ಒದಗಿಸುವ ಕಾರ್ಯ ಮಾಡುತ್ತಿದೆ.

ಅಲಿಯಾ ಅವರು ನೀಡಿದ್ದ ಹಣದಿಂದ ಈ ಸಂಸ್ಥೆ ಮಂಡ್ಯ ಜಿಲ್ಲೆಯ ಹಳ್ಳಿಯ 40 ಬಡ ಕುಟುಂಬಗಳಿಗೆ ಸೋಲಾರ್ ದೀಪಗಳನ್ನು ಒದಗಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಲಿಯಾ ಭಟ್ ಅವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top