ಹೆಚ್ಚಿನ

ಈ ಆಷಾಡ ಮಾಸದಲ್ಲಿ ತಪ್ಪದೆ ಈ ದೇವರನ್ನು ಪೂಜಿಸಿ ನಿಮ್ಮ ಎಲ್ಲ ಕಷ್ಟಗಳಿಂದ ಮುಕ್ತಿ ಹೊಂದುವುದರ ಜೊತೆ ಅದೃಷ್ಟ ನಿಮ್ಮದಾಗಿಸಿಕೊಳ್ಳಿ.

ಹಿಂದೂ ಧರ್ಮದ ನಾಲ್ಕನೇ ತಿಂಗಳ ಆಷಾಡ ಮಾಸ. ಈ ತಿಂಗಳಲ್ಲಿ ವರ್ಷ ಋತುವಿನ ಆರಂಭವಾಗುತ್ತದೆ. ಈ ತಿಂಗಳಲ್ಲಿ ರೋಗಗಳು, ಸೋಂಕುಗಳು ಬಹುಬೇಗ ಹರಡುತ್ತವೆ. ಈ ತಿಂಗಳಲ್ಲಿ ವಾತಾವರಣ ತುಂಬಾ ತೇವಾಂಶದಿಂದ ಕೂಡಿರುತ್ತದೆ. ಯಾಕೆಂದರೆ ಇದು ಮಳೆಗಾಲ ಮತ್ತು ಅಧಿಕ ಗಾಳಿಯಿಂದ ಕೂಡಿದ ಕಾಲವಿರುತ್ತದೆ.

 

 

ಆಷಾಡ ಮಾಸದಲ್ಲಿ ಭಾರತದಾದ್ಯಂತ ಮುಂಗಾರು ಮಾರುತಗಳು ಮಳೆ ಆಧಾರಿತ ಪ್ರದೇಶವಾಗಿದ್ದು, ಭಾರತ ಕೃಷಿಯಾದರಿತ ದೇಶ. ಈ ಸಮಯದಲ್ಲಿ ಜನರಿಗೆ ಕೈತುಂಬಾ ಕೆಲಸವಿರುತ್ತದೆ .ಹಿಂದೆ ಬೇಸಿಗೆ ತಿಂಗಳಿನಲ್ಲಿ ನೆಲವು ಒಣಗಿ ಹೋಗಿ ಬೆಂದು ಹೋಗಿದ್ದ ಕಾರಣ, ಮಳೆಯ ಹನಿ ಬೀಳುತ್ತಿದ್ದಂತೆ,ನೆಲವು ತೇವವಾಗಿ ಒದ್ದೆಯಾಗುತ್ತದೆ.ಎಲ್ಲಾ ಜೀವಿಗಳು ಮಳೆಗಾಲದ ಜೀವನಕ್ಕೆ ಹೊಂದಿಕೊಳ್ಳಲು ತಯಾರಾಗುತ್ತವೆ. ಬೀಜಗಳು ಮೊಳಕೆಯೊಡೆದು, ಕೆಲವೇ ದಿನಗಳಲ್ಲಿ ಹಸಿರು ತುಂಬಿ ತುಳುಕುತ್ತದೆ . ಅತ್ಯಂತ ಸುಂದರ ಪ್ರಕೃತಿ ನಮಗೆ ನೋಡಲು ಕಾಣಸಿಗುತ್ತದೆ. ಹಿಂದೂ ಪುರಾಣ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಆಶಾಡ ಮಾಸ ತುಂಬಾ ಅಮಂಗಳಕರವಾಗಿದೆ. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳು ಮತ್ತು ಮಂಗಳ ಕಾರ್ಯಗಳನ್ನು ಮಾಡಿದರೆ ದೇವರ ಅನುಗ್ರಹ ಸಿಗುವುದಿಲ್ಲ. ಆದ್ದರಿಂದ ಮದುವೆ ಗೃಹಪ್ರವೇಶ ಮೊದಲಾದ ಶುಭ, ಮಂಗಳ ಕಾರ್ಯಗಳನ್ನು ಈ ಮಾಸದಲ್ಲಿ ನಡೆಸಲಾಗುವುದಿಲ್ಲ.

ದಾಂಪತ್ಯವೂ ಸಹ ದೂರ.
ಆಷಾಡ ಮಾಸದಲ್ಲಿ ನಡೆಸುವ ಮದುವೆಯ ಬಳಿಕ ಒಂದಾಗಿರುವ ದಂಪತಿಗಳಿಗೆ ಹುಟ್ಟುವ ಸಂತಾನ 9 ತಿಂಗಳುಗಳ ಬಳಿಕ ಬರುವ ಚೈತ್ರಮಾಸದಲ್ಲಿ ಜನಿಸುತ್ತದೆ. ಅಂದರೆ ಆಗ ಬಿರುಬೇಸಿಗೆಯ ಕಾಲವಾಗಿರುತ್ತದೆ. ಬಿರು ಬೇಸಿಗೆಯ ದಿನಗಳಲ್ಲಿ ಹೆರಿಗೆ ಅಂದಿನ ದಿನಗಳಲ್ಲಿ ಭಾರಿ ತ್ರಾಸದಾಯಕವಾಗಿತ್ತು. ಇದನ್ನು ತಡೆಯಲೆಂದೇ ಆಷಾಡ ಮಾಸವನ್ನು ಅಮಂಗಳಕರ ಎಂದು ವೈಜ್ಞಾನಿಕವಾಗಿ ಒಪ್ಪಬಹುದು ಮತ್ತು ತರ್ಕಬದ್ಧವಾಗಿದೆ. ಆದ್ದರಿಂದ ಆಷಾಡ ಮಾಸದಲ್ಲಿ ಗಂಡ ಹೆಂಡತಿಯರು ಸೇರಬಾರದು,ಒಟ್ಟಿಗೆ ಇರಬಾರದು ಎಂದು ದೂರ ಮಾಡುತ್ತಾರೆ .
ಆಷಾಡ ಮಾಸದಲ್ಲಿ ಆರಂಭವಾಗುವ ಕೃಷಿ ಚಟುವಟಿಕೆಗಳನ್ನು ಈ ಮಾಸದಲ್ಲಿ ನಡೆಸುವ ಪೂಜೆ ವ್ರತ ಗಳ ಮೂಲಕ ಪ್ರಾರಂಭಿಸಿದರೆ, ಈ ವರ್ಷದ ಬೆಳೆ ಚೆನ್ನಾಗಿ ಆಗುತ್ತದೆ ಎಂದು ನಂಬಿಕೊಂಡು ಬಂದಿದ್ದಾರೆ.
ಯಾವ ದೇವರ ಪೂಜೆ ಆರಾಧನೆ ಮಾಡಿದರೆ ಉತ್ತಮ.

ಆಷಾಡ ಮಾಸದಲ್ಲಿ ಗುರುವಿನ ಪೂಜೆಯನ್ನು ಮಾಡಿದರೆ ಹೆಚ್ಚು ಫಲ ಲಭಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಜೊತೆಗೆ ದೇವಿಯ ಪೂಜೆ ಕೂಡ ತುಂಬಾ ಮಂಗಳಕರ ಮತ್ತು ಶ್ರೇಯಸ್ಕರ. ಶ್ರೀಹರಿ ವಿಷ್ಣುವಿನ ಪೂಜೆಯಿಂದ ಸಂತಾನ ಪ್ರಾಪ್ತಿಯಾಗುತ್ತದೆ.
ಜಲ ದೇವನ ಆರಾಧನೆ ಮಾಡಿದರೆ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ. ಈ ತಿಂಗಳು ಮಂಗಳ ಗ್ರಹ ಹಾಗೂ ಸೂರ್ಯನ ಪೂಜೆಯನ್ನು ಅವಶ್ಯಕವಾಗಿ ಮಾಡಬೇಕು. ಈ ಆಷಾಡ ಮಾಸದಲ್ಲಿ ನೀರು ಅಂಶವಿರುವ ಹಣ್ಣುಗಳ ಸೇವನೆ ಮಾಡಬೇಕು.ಆಷಾಡ ಮಾಸದಲ್ಲಿ ಬೇಲದ ಹಣ್ಣನ್ನು ತಿನ್ನಬಾರದು. ಆದಷ್ಟು ಎಣ್ಣೆಯುಕ್ತ ಪದಾರ್ಥಗಳ ಸೇವನೆಯನ್ನು ಹೆಚ್ಚಾಗಿ ಮಾಡಬಾರದು. ಸೋಂಪು ಇಂಗು ಹಾಗೂ ನಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ತಿಂಗಳು ಶ್ರೀಹರಿ ವಿಷ್ಣು ನಿದ್ರೆಗೆ ಜಾರುತ್ತಾನೆ. ಹಾಗಾಗಿ ಈ ನಾಲ್ಕು ತಿಂಗಳುಗಳ ಕಾಲ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top