ದೇವರು

ಚಳಿಗಾಲದಲ್ಲಿ ಬೆಚ್ಚಗೆ ಇರುವ , ಬೇಸಿಗೆಯಲ್ಲಿ ತಣ್ಣಗೆ ಇರುವ ಈ ದೇವಾಲಯದ ಬಗ್ಗೆ ಗೊತ್ತಾದ್ರೆ ಭಕ್ತಿ ಜಾಸ್ತಿಯಾಗಿ ನೀವೇ ಈ ದೇವಾಯದ ದರ್ಶನ ಮಾಡ್ತೀರಾ ಒಂದ್ಸಲ.

ನಮ್ಮ ದೇಶದಲ್ಲಿ ಇರುವ ಅತಿ ಪ್ರಾಚೀನ ದೇವಾಲಯಗಳಲ್ಲಿ ಇದೂ ಸಹ ಒಂದಾಗಿದೆ. ಅಂದಿನ ತಾಂತ್ರಿಕ ಚಿತ್ರಕಲೆ ಇಂದಿಗೂ ಆಶ್ಚರ್ಯವನ್ನು ಉಂಟು ಮಾಡುವಂತಿವೆ.ಅಂತಹ ಅತ್ಯದ್ಭುತವಾದಂತಹ ದೇವಾಲಯಗಳಲ್ಲಿ ಇದು ಕೂಡ ಒಂದು ಎಂದು ಹೇಳಬಹುದಾಗಿದೆ. ಇಲ್ಲಿನ ವಿಶೇಷತೆ ಎಂದರೆ ಮೊದಲೇ ತಿಳಿಸಿದ ಹಾಗೆ ಈ ದೇವಾಲಯದ ಗರ್ಭ ಗುಡಿಯ ಒಳಗೆ ಚಳಿಗಾಲದಲ್ಲಿ ಬಿಸಿಯಾಗಿರುತ್ತದೆ ಮತ್ತು ಹಾಗೆಯೇ ಬೇಸಿಗೆಯ ಕಾಲದಲ್ಲಿ ತುಂಬಾ ತಂಪಾದ ಗಾಳಿ ಬೀಸುತ್ತಿರುತ್ತದೆ. ಆ ಗರ್ಭ ಗುಡಿಯ ಪ್ರಾಂಗಣವು ಇಂತಹ ಅನೇಕಾನೇಕ ವಿಶೇಷತೆಗಳಿಂದ ಕೂಡಿದೆ ಈ ದೇವಾಲಯ. ಹಾಗಾದರೆ ಬನ್ನಿ ಈ ದೇವಾಲಯದ ವಿಶೇಷತೆ ಏನು ? ಈ ದೇವಾಲಯ ಎಲ್ಲಿದೆ ? ಎಂಬುದನ್ನು ತಿಳಿದುಕೊಳ್ಳೋಣ.

 

 

ಅಂದ್ರ ಪ್ರದೇಶ ರಾಜ್ಯದ, ಕೃಷ್ಣ ಜಿಲ್ಲೆಯಲ್ಲಿ, ನಾಗಾಲೇ ಯಂಕಮಂಡಲದ ,ಭವದೇವರಪಲ್ಲಿಯ , ಬಾಪೆಟ್ಳದಲ್ಲಿ ಈ ಭವ ನಾರಾಯಣ ಸ್ವಾಮಿಯ ದೇವಾಲಯ ಇದೆ. ಇದು ಪಂಚ ಭವ ನಾರಾಯಣ ಕ್ಷೇತ್ರಗಳಲ್ಲಿ ಒಂದೆಂದು ಪ್ರಸಿದ್ಧಿಗೊಂಡಿದೆ.ಇನ್ನು ಉಳಿದ ನಾಲ್ಕು ಭವ ನಾರಾಯಣಸ್ವಾಮಿ ದೇವಾಲಯಗಳು ಕಾಕಿನಾಡದಲ್ಲಿವೆ. ಅಂದರೆ ಆಂಧ್ರಪ್ರದೇಶದಲ್ಲಿರುವ ಕಾಕಿನಾಡದಲ್ಲಿರುವ ಸಪ್ತಪರದಲ್ಲಿ ಒಂದು, ಗುಂಟೂರು ಜಿಲ್ಲೆಯ ಸರ್ಪಪುರಂನಲ್ಲಿ ಒಂದು,ಗುಂಟೂರು ಜಿಲ್ಲೆಯ ಪೊನ್ನೂರಿನಲ್ಲಿ ಮತ್ತೊಂದು, ಪ್ರಕಾಶಂ ಜಿಲ್ಲೆಯ ಪೆದಗಂಜಾರಾಂನಲ್ಲಿ ಮತ್ತೊಂದು, ಪಶ್ಚಿಮ ಗೋದಾವರಿಯ ಜಿಲ್ಲೆಯ ಪಟ್ಟಿ ಸೀಮೆಯಲ್ಲಿ ಮತ್ತೊಂದು ಪಂಚ ಭಾವ ನಾರಾಯಣ ದೇವಾಲಯ ನೆಲೆಸಿದೆ.

ಹೀಗೆ ಒಟ್ಟಾರೆಯಾಗಿ ಭವ ನಾರಾಯಣನ ಕ್ಷೇತ್ರಗಳು 5 ನೆಲೆಸಿವೆ.ಇಲ್ಲಿ ಸಿಕ್ಕಿರುವ ಪುರಾತತ್ವ ಇಲಾಖೆಯ ಶಾಸನಗಳಲ್ಲಿ ಒಂದು ಇದು ಚೋಳರ ಕಾಲದಲ್ಲಿ ನಿರ್ಮಿಸಲಾಗಿರುವ ದೇವಾಲಯ ಎಂದು ಉಲ್ಲೇಖವಾಗಿದೆ. ಈ ದೇವಾಲಯದಲ್ಲಿ ವಿಗ್ರಹವು ಬೆರಳುಗಳ ಮೇಲೆ ಅಂದರೆ ಪಾದಗಳ ಬೆರಳುಗಳ ಮೇಲೆ ನಿಂತು ಭಕ್ತರಿಗೆ ಕಾಯುತ್ತಿರುವಂತೆ ಇದೆ.
ಇಂತಹ ವಿಗ್ರಹವು ಭಾರತ ದೇಶದಲ್ಲಿ ಮತ್ತೊಂದು ಇಲ್ಲ ಎಂದು ಹೇಳುತ್ತಾರೆ. ಈ ಮೂಲ ವಿರಾಟ ರೂಪವನ್ನು ಶಾಂತಗೊಳಿಸಲು ಶಾಂತ ಕೇತುವಿನ ವಿಗ್ರಹವನ್ನು ಸ್ಥಾಪಿಸಲಾಯಿತು ಎಂದು ಸ್ಥಳ ಪುರಾಣದ ಮೂಲಕ ತಿಳಿಯುತ್ತದೆ. ಈ ಪಂಚ ಭವ ನಾರಾಯಣನ ಕ್ಷೇತ್ರದಲ್ಲಿ ಯಾವುದೇ ಬಗೆಯ ಕೋರಿಕೆಗಳಾಗಿರಲಿ, ಈಡೇರುತ್ತದೆ, ಭಕ್ತರ ಮನಸ್ಸನ್ನು ಅರಿತು ಅವರ ಆಸೆಗಳನ್ನು ಕೋರಿಕೆಗಳನ್ನು ಈಡೇರಿಸುತ್ತಾನೆ ಎಂದು ಸ್ಥಳೀಯರು ನಂಬುತ್ತಾರೆ.

ಈ ದೇವಾಲಯದ ಪ್ರತ್ಯೇಕತೆ ಏನು ಎಂದರೆ ಚಳಿಗಾಲದಲ್ಲಿ ತುಂಬಾ ಬೆಚ್ಚಗೆ ಹಾಗೂ ಬೇಸಿಗೆಯ ಕಾಲದಲ್ಲಿ ತುಂಬಾ ತಂಪಾಗಿದ್ದು ಆ ಕಾಲದ ಶಾಸ್ತ್ರವೇತರ ಇಂಜಿನಿಯರ್ ಗಳ ಚಾಣಾಕ್ಷತನಕ್ಕೆ ಇದು ನಿದರ್ಶನವಾಗಿದೆ. ಈ ದೇವಾಲಯದಲ್ಲಿ ಎರಡು ದ್ವಜ ಸ್ಥಂಭಗಳಿದ್ದು, ಅವುಗಳ ಕಾಲುಗಳು ಆನೆಗಳ ಕಾಲುಗಳಿಗೆ ಹೋಲಿಸಲಾಗಿದೆ.
ಅಷ್ಟೇ ಅಲ್ಲ ದೇವಾಲಯದ ಹಿಂಬದಿಯ ಗೋಪುರದ ಮೇಲಿನ ಛಾವಣಿಯು ಮತ್ಸ್ಯಾಕಾರದಲ್ಲಿ ಅಂದರೆ ಮೀನಿನ ಆಕಾರದಲ್ಲಿ ಇದೆ. ಇದನ್ನು ಸ್ಪರ್ಶಿಸಿ ನಮಸ್ಕರಿಸಿದ ಜೀವನದಲ್ಲಿ ಎಲ್ಲವೂ ಶುಭವಾಗುತ್ತದೆ ಒಳಿತಾಗುತ್ತದೆ ಎನ್ನುವ ನಂಬಿಕೆ ಇದೆ.

ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ಅಖಂಡ ಜ್ಯೋತಿಯು ಬೆಳಗುತ್ತಾ ಇರುತ್ತದೆ. ಇಲ್ಲಿ ಅಖಂಡ ದೀಪಾರಾಧನೆಯ ಸೇವೆಯೇ ಪ್ರತ್ಯೇಕವಾಗಿದೆ. ಇನ್ನೂ ಮುಖ್ಯವಾಗಿ ಸಾಕಷ್ಟು ಜನ ಭಕ್ತರು ಈ ಅಖಂಡ ದೀಪಾರಾಧನೆ ಸೇವೆಗಾಗಿಯೇ ಸ್ವಾಮಿಯ ದರ್ಶನ ಮಾಡುತ್ತಾರೆ .ಹೀಗೆ ಪಂಚ ಭವ ನಾರಾಯಣನ ಕ್ಷೇತ್ರಗಳಲ್ಲಿ ಈ ಬಾಪಟ್ಲದ ಭವನಾರಾಯಣ ಪಲ್ಲಿಯಲ್ಲಿರುವ ಭವ ನಾರಾಯಣ ಕ್ಷೇತ್ರ ತುಂಬಾ ವೈಶಿಷ್ಟಪೂರ್ಣವಾಗಿ ಪ್ರಸಿದ್ಧಿಯನ್ನು ಪಡೆದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top