ಹೆಚ್ಚಿನ

ಜುಲೈ 27 ನೇ ತಾರೀಖು ಬರುವಂತ ಕೇತುಗ್ರಸ್ತ ಖಗ್ರಾಸ ಚಂದ್ರ ಗ್ರಹಣ ಮಿಥುನ ಹಾಗೂ ಕಟಕ ರಾಶಿಯವರ ಮೇಲೆ ಯಾವ ಒಳ್ಳೆ ಹಾಗೂ ಘೋರ ರೀತಿಯ ಪರಿಣಾಮ ಬೀರುತ್ತೆ ಅಂತ ತಪ್ಪದೆ ತಿಳ್ಕೊಳ್ಳಿ.

ಈ ಶತಮಾನದ ಸುದೀರ್ಘಾವಧಿಯ ಕೇತುಗ್ರಸ್ಥ ಖಗ್ರಾಸ ಚಂದ್ರಗ್ರಹಣದ ಮಿಥುನ ರಾಶಿಯ ಭವಿಷ್ಯ .

ಇದೇ ತಿಂಗಳು ಜುಲೈ 27 ನೇ ತಾರೀಖು ರಾತ್ರಿಯಿಂದಲೇ ಶುರುವಾಗಿ 28ನೇ ತಾರೀಖಿನಂದು ನಡೆಯುವ ಕೇತುಗ್ರಸ್ತ ಖಗ್ರಾಸ ಚಂದ್ರ ಗ್ರಹಣವು ಮಿಥುನ ರಾಶಿಯವರ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

 

 

ನಿಮ್ಮದು ಮಿಥುನ ರಾಶಿ ಕಾಲ ಪುರುಷನ ಮೂರನೇ ರಾಶಿಯಾಗಿದ್ದು, ಈ ಖಗ್ರಾಸ ಚಂದ್ರ ಗ್ರಹಣವು ಅಷ್ಟಮ ಭಾವದಲ್ಲಿ ಅಂದರೆ ಎಂಟನೇ ಭಾವದಲ್ಲಿ ಗ್ರಹಣ ಸಂಭವಿಸಲಿದೆ. ಅಷ್ಟಮ ಭಾವದಲ್ಲಿ ನಡೆಯುವುದರಿಂದ ಅನಿಷ್ಟ ಮತ್ತು ಅಶುಭವಾಗಿರುತ್ತದೆ.ಅಷ್ಟಮ ಭಾವ ನಿಗೂಢ ಭಾವ ಮತ್ತು ರಹಸ್ಯ ಮತ್ತು ಮೃತ್ಯು ಭಾವವಾಗಿದ್ದು, ಆದ್ದರಿಂದ ಕೇತು ಮತ್ತು ಕುಜ ಚಂದ್ರನ ಜೊತೆ ಸೇರಿಕೊಂಡು ಕಂಟಕವನ್ನು ತರುತ್ತವೆ. ಆದ್ದರಿಂದ ಇನ್ನೂ ಆರು ತಿಂಗಳುಗಳ ಕಾಲ ನಿಮ್ಮ ರಾಶಿಯವರಿಗೆ ವಾಹನಗಳಿಂದ ಅಪಘಾತವಾಗುವ ಸಂಭವವಿರುತ್ತದೆ. ಆದ್ದರಿಂದ ವಾಹನವನ್ನು ಚಲಾಯಿಸುವಾಗ ಅಥವಾ ವಾಹನದಲ್ಲಿ ಚಲಿಸುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಂತರ ಪಶ್ಚಾತ್ತಾಪ ಪಟ್ಟರೆ ಯಾವ ರೀತಿಯ ಪ್ರಯೋಜನವೂ ಇಲ್ಲ.

ಶಸ್ತ್ರಗಳಿಂದಲೂ ಕೂಡ ಅಪಘಾತವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಶಸ್ತ್ರಗಳಿಂದ ಆದಷ್ಟು ದೂರವಿದ್ದರೆ ಒಳ್ಳೆಯದು. ಅವಸರದಿಂದ ವಾಹನವನ್ನು ಚಾಲನೆ ಮಾಡಬೇಡಿ. ಅಪಘಾತಕ್ಕೆ ಒಳಗಾಗಿ ಅಂದರೆ ಗಾಯವಾಗಿ ನಂತರ ಒಂದು ಚಿಕ್ಕ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಆದ್ದರಿಂದ ನಿಮಗೆ ಅಗ್ನಿಪರೀಕ್ಷೆಯ ಸಮಯವಾಗಿತ್ತು. ಒಂದು ಕಠಿಣ ಸಂದರ್ಭದ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆದಷ್ಟು ಎಚ್ಚರವಾಗಿರಿ. ಇದಕ್ಕೂ ಮೊದಲು ನಿಮಗೆ ನಿರೀಕ್ಷಿತ ಪ್ರಮಾಣದಲ್ಲಿ ಉತ್ತಮ ಫಲಗಳನ್ನು ನೀಡಿದೆ ಆದರೂ ಕೂಡ ಈ ಅವಧಿಯಲ್ಲಿ ಸಂಕಟಕ್ಕೆ ಸಿಲುಕಿ ಕೊಳ್ಳುವ ಅಥವಾ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿ ಹಾಕಿ ಕೊಳ್ಳುವ ಸಾಧ್ಯತೆ ಇದೆ ಆದ್ದರಿಂದ ಎಚ್ಚರಿಕೆಯಿಂದಿರಿ. ಕೆಲವರಿಗೆ ಬಂಧನವಾಗುವ ಯೋಗವೂ ಕೂಡ ಹೆಚ್ಚಾಗಿದೆ ದೈಹಿಕ ರೂಪದಲ್ಲಿ ಇರಬಹುದು ಅಥವಾ ಮಾನಸಿಕ ರೂಪದಲ್ಲಿ ಇರಬಹುದು ಇನ್ನು ಕೆಲವರಿಗೆ ಕಾನೂನಾತ್ಮಕ ಬಂಧನವು ಕೂಡ ಹೆಚ್ಚಾಗಿ ಇರಬಹುದು.

ಕುಟುಂಬದಲ್ಲಿ ರಾಹು ಹಲವಾರು ರೀತಿಯ ಸಮಸ್ಯೆಗಳನ್ನು ಈ ಕೇತು ಮತ್ತು ಕುಜರು ಮೂಡಿಸಲಿದ್ದಾರೆ. ಕುಟುಂಬ ಸದಸ್ಯರಲ್ಲಿ ಹಲವಾರು ರೀತಿಯ ಭಿನ್ನಾಭಿಪ್ರಾಯಗಳನ್ನು ಮೂಡಿಸಲಿದ್ದಾರೆ . ಅಕ್ಟೋಬರ್ 11 ನೇ ತಾರೀಖಿನ ನಂತರ ಗುರು ಬಲದಿಂದ ವಂಚಿತರಾಗುತ್ತೀರಿ. ಈಗಾಗಲೇ ನಿಮ್ಮ ಜೊತೆಗೆ ಇರುವ ಗುರು ಬಲವು ಅಕ್ಟೋಬರ್ 11 ನೇ ತಾರೀಖಿನ ನಂತರ ಇರುವುದಿಲ್ಲ . ಆವರಿಗೆ ಕಾಲುಗಳಲ್ಲಿ ನೋವು ಕಂಡು ಬರಲಿದೆ, ಸ್ನಾಯು ಮತ್ತು ನರಗಳ ನೋವು ಉಂಟಾಗಲಿದೆ ವಿಪರೀತ ಸೆಳೆತ ಕೂಡ ಉಂಟಾಗಲಿದೆ. ಇನ್ನು ಕೆಲವರಿಗೆ ಮೂಳೆಗಳು ದುರ್ಬಲವಾಗಲಿವೆ. ಕ್ಯಾಲ್ಸಿಯಂ ಕೊರತೆ ಉಂಟಾಗಲಿದೆ.ಶಾರೀರಿಕ ಪೀಡೆ ಮತ್ತು ಭಾಧೆ ಹೆಚ್ಚಾಗಲಿದೆ

ಪರಿಹಾರ.
ಮಾನಸಿಕ ರೋಗಗಳಿಂದ ದೂರವಾಗಲು ಪ್ರತಿದಿನವೂ ಸ್ಪಟಿಕ ಮಾಲೆಯಿಂದ 108 ಬಾರಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬೇಕು.
ಪ್ರತಿ ಸೋಮವಾರ ದೇವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮತ್ತು ಬಿಲ್ವಾರ್ಚನೆಯನ್ನು,ಭಸ್ಮಾರ್ಚನೆಯನ್ನು ಮಾಡಬೇಕಾಗುತ್ತದೆ ಮತ್ತು ಬಿಲ್ವಾಷ್ಟಕವನ್ನು ಪಠಿಸಬೇಕು.
ಚಿಕ್ಕ ಮಕ್ಕಳು ಆಟವಾಡುವ ಆಟಿಕೆ ಸಾಮಾನುಗಳಾದ ವಾಹನಗಳನ್ನು ನಾಲ್ಕು ರಸ್ತೆ ಕೂಡಿರುವ ಸ್ಥಳಗಳಲ್ಲಿ ಇರಿಸಿ ಇದರಿಂದ ಅಪಘಾತ ಸ್ಥಳ ಅಪಘಾತ ದೋಷದಿಂದ ಅಥವಾ ಭಯದಿಂದ ಮುಕ್ತಿ ಹೊಂದುತ್ತೀರಿ.

 

ಈ ಶತಮಾನದ ಸುದೀರ್ಘ ಅವಧಿಯ ಕೇತುಗ್ರಸ್ಥ ಖಗ್ರಾಸ ಚಂದ್ರ ಗ್ರಹಣದ ಕಟಕ ರಾಶಿಯ ಭವಿಷ್ಯ .
ಇದೇ ತಿಂಗಳು ಜುಲೈ 27 ನೇ ತಾರೀಖು ರಾತ್ರಿ ಪ್ರಾರಂಭವಾಗಿ 28 ನೇ ತಾರೀಖಿನಂದು ನಡೆಯುವ ಕೇತುಗ್ರಸ್ತ ಖಗ್ರಾಸ ಚಂದ್ರ ಗ್ರಹಣದ ಪ್ರಭಾವ ಕಟಕ ರಾಶಿಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ .

 

 

ನಿಮ್ಮದು ಕಟಕ ರಾಶಿಯ ಹಾಗಾದರೆ ನಿಮ್ಮದು ಕಾಲಪುರುಷನ ನಾಲ್ಕನೇ ರಾಶಿಯಾಗಿದ್ದು, ಅತ್ಯಂತ ಭಾವನಾತ್ಮಕ ರಾಶಿ ಮನಸ್ಸು ಮತ್ತು ಹೃದಯಕ್ಕೆ ಸಂಬಂಧಪಟ್ಟಂತಹ ರಾಶಿ. ನಿಮ್ಮ ರಾಶಿಗೆ ಈ ಖಗ್ರಾಸ ಚಂದ್ರ ಗ್ರಹಣವು ಸಪ್ತಮ ಭಾವದಲ್ಲಿ ಜರುಗಲಿದ್ದು, ಆದ್ದರಿಂದ ಗ್ರಹಣ ಮಿಶ್ರ ಫಲಗಳನ್ನು ನೀಡುತ್ತದೆ .ಆದ್ದರಿಂದ ಈ ಸಪ್ತಮ ಭಾವ ಸಂಗಾತಿಯನ್ನು ಸೂಚಿಸುತ್ತದೆ .ಅದು ಮಾರಕ ಭಾವವಾಗಿದ್ದು, ಹೀಗಾಗಿ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವುದು, ಮಾನಸಿಕ ಸ್ಥಿತಿ ಅಷ್ಟೊಂದು ಸರಿಯಾಗಿ ಇರುವುದಿಲ್ಲ. ಅದರ ಜೊತೆಗೆ ನಿಮ್ಮ ಮಾನಸಿಕ ಸ್ಥಿತಿಯೂ ಕೂಡ ಅಷ್ಟು ಸರಿಯಾಗಿ ಇರುವುದಿಲ್ಲ , ಈಗಾಗಲೇ ನಿಮ್ಮ ಮನಸ್ಸಿಗೆ ದೊಡ್ಡ ಆಘಾತ ಉಂಟಾಗಿದೆ . ನಿಮ್ಮ ರಾಶಿಯಲ್ಲಿರುವ ರಾಹುವಿನ ಕಾರಣ ಪಿಶಾಚಿಯ ಭಾದೆ ಮುಂದುವರೆದಿದ್ದು ,ಮಾರ್ಚ 2019 ರವರೆಗೆ ಶರೀರವು ಜಡವಾಗಲಿದೆ, ಭಾರವಾಗಲಿದೆ ಶರೀರದ ತೂಕ ಹೆಚ್ಚಾಗಲಿದೆ, ಆಗಾಗ ವಿಚಿತ್ರವಾಗಿ ವರ್ತಿಸುತ್ತೀರ.

ಸಪ್ತಮ ಭಾವದಲ್ಲಿ ಸಂಭವಿಸುವ ಗ್ರಹಣದ ಪ್ರಭಾವವನ್ನು ಇಮ್ಮಡಿ ಗೊಳಿಸಿದೆ, ಹಾಗೂ ಕೇತು, ಕುಜರು ಚಂದ್ರನ ಜೊತೆ ಸೇರಿ ಗ್ರಹಣದ ಪ್ರಭಾವವನ್ನು ಇನ್ನಷ್ಟು ಇಮ್ಮಡಿಗೊಳಿಸಲಿದೆ.ಶನಿ ಬಲವು ನಿಮ್ಮನ್ನು ಕಾಪಾಡುತ್ತಲೇ ಬಂದಿದೆ. ಇದುವರೆಗೂ ಕೂಡ ನಿಮಗೆ ಇದರ ಜೊತೆಗೆ ನಿಮಗೆ ಗುರುಬಲ ಬರುತ್ತದೆ . ಆದ್ದರಿಂದ ಶನಿ ಮತ್ತು ಗುರು ಬಲಗಳು ಸೇರಿ ನಿಮ್ಮನ್ನು ಹಲವಾರು ರೀತಿಯ ಸಮಸ್ಯೆಗಳಿಂದ ಕಾಪಾಡಲಿದ್ದಾರೆ. ಹೃದಯ ಮತ್ತು ಮೊಣಕಾಲಿನ ಸಮೀಪದ ಭಾಗಗಳು ಸ್ವಲ್ಪ ಪೀಡೆಗೆ ಒಳಗಾಗಲಿದೆ. ನಾಶವಾಗುವ ಸಾಧ್ಯತೆ ಹೆಚ್ಚಾಗಿದೆ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿರಿ.

ನಿಮ್ಮ ಭಾವನೆಗಳೇ ನಿಮಗೆ ವೈರಿ ಆಗಲಿವೆ. ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಅದು ವ್ಯಕ್ತಿಯನ್ನು ಕಾಪಾಡುತ್ತದೆ. ಹೀಗಾಗಿ ಶನಿ ಮತ್ತು ಗುರುವಿನ ಬೆಂಬಲ ನಿಮಗೆ ಇರುವ ಕಾರಣ ಹೆದರುವ ಅವಶ್ಯಕತೆ ಇಲ್ಲ . ಆದರೂ ಕೂಡ ಆಸ್ಪತ್ರೆ ,ಔಷಧಿಗಳಿಗಾಗಿ ಹಣವು ಖರ್ಚಾಗುವುದನ್ನು ಶನಿ ಮತ್ತು ಗುರುವಿನಿಂದಲೂ ಕೂಡ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಆಸ್ಪತ್ರೆಯ ವಾಸ ನಿಶ್ಚಿತವಾಗಿದೆ.
ಅತಿಯಾದ ಆಲೋಚನೆಯನ್ನು ಮಾಡಬೇಡಿ. ಮನಸ್ಸಿಗೆ ಹೆಚ್ಚಿನ ಒತ್ತಡವನ್ನು ನೀಡಬೇಡಿ. ಏಕಾಂತದಲ್ಲಿ ಹೆಚ್ಚಾಗಿರಬೇಡಿ. ಯಾವುದಾದರೂ ಚಟುವಟಿಕೆಗಳಲ್ಲಿ ಮತ್ತು ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಈ ಗ್ರಹಣ ವಿಶೇಷವಾಗಿ ನಿಮ್ಮ ಮನಸ್ಸು ಮತ್ತು ಹೃದಯವನ್ನು ಗುರಿಯಾಗಿಸಿ ಕೊಂಡಿದೆ.

ಪರಿಹಾರ .
ಈ ಕೆಳಗಿನ ಮಂತ್ರವನ್ನು ಸ್ಪಟಿಕ ಮಾಲೆಯಿಂದ ಪ್ರತಿ ದಿನ ನೂರಾ ಎಂಟು ಬಾರಿ ಜಪಿಸಿ.
1.“ದೇಹಿ ಸೌಭಾಗ್ಯಮ್ ಆರೋಗ್ಯಮ್ ದೇಹಿಮೆ ಪರಮಂ ಸುಖಂ,
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ವೃಷೋರಿಹಿ”
2.ಸರ್ವ ಸ್ವರೂಪೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ,
ಬಯೋಭ್ಯೋ ಶಾಸ್ತ್ರೀನೋ ದೇವಿ ದುರ್ಗಾದೇವಿ ನಮೋಸ್ತುತೆ”.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top