ಮನೋರಂಜನೆ

ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿಗೆ ಕೈಜೋಡಿಸಿದ ಚಾಲೆಂಜಿಂಗ್ ಸ್ಟಾರ್.

ತಮ್ಮ ನಟನೆಯ ಹೊರತಾಗಿಯೂ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗಷ್ಟೇ ಬೆಟ್ಟಿಂಗ್, ಪ್ಲಾಸ್ಟಿಕ್, ಪರಿಸರ, ವನ್ಯಜೀವಿ ಮತ್ತು ಅರಣ್ಯ ಸಂರಕ್ಷೆಣೆಯ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು. ಇಂಥಾ ದರ್ಶನ್ ಇದೀಗ ಮತ್ತೊಂದು ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು ಹೆಣ್ಣುಬ್ರೂಣ ಹತ್ಯೆ ಮಾಡುವ ಪಾಪಿಗಳ ವಿರುದ್ಧ ಸಿಡಿದೆದ್ದಾರೆ.

 

 

ಹೆಣ್ಣು ಮಗು ಹುಟ್ಟಿದರು ಅದು ತಮಗೆ ಹೊರೆಯಾಗುತ್ತೆ ಎಂಬ ಅವೈಜ್ಞಾನಿಕ ನೆಪವೊಡ್ಡಿ ಹೆಣ್ಣು ಭ್ರೂಣವನ್ನು ತೆಗೆಸಿಬಿಡುವ ಅನಿಷ್ಟ ಹವ್ಯಾಸವನ್ನು ಈ ಆಧುನಿಕ ಯುಗದಲ್ಲೂ ಅನೇಕರೂ ಮೈಗೂಡಿಸಿಕೊಂಡಿದ್ದಾರೆ. ಹೆಣ್ಣು ಬ್ರೂಣ ಹತ್ಯೆಯ ವಿರುದ್ಧ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಅದೆಷ್ಟು ಅರಿವು ಮೂಡಿಸಿದರೂ ತಲೆಗೆ ಹಾಕಿಕೊಳ್ಳದ ಜನರು ಅದ್ಯಾಕೋ ಹೆಣ್ಣು ಮಕ್ಕಳೆಂದರೇ ಅಸಡ್ಡೆ ತೋರುತ್ತಿದ್ದಾರೆ. ಪರಿಣಾಮ ಇಡೀ ವಿಶ್ವದಲ್ಲಿ ಅತೀ ಹೆಚ್ಚು ಹೆಣ್ಣುಶಿಶು ಹತ್ಯೆಯಲ್ಲಿ ಭಾರತ ಮುಂಚೂಣಿಯಲ್ಲಿದೆ..

ಇಂಥಾ ಗಂಭೀರ ವಿಚಾರವಾಗಿ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರಿವು ಮೂಡಿಸಲು ಮುಂದಾಗಿದ್ದಾರೆ. ಹೆಣ್ಣುಶಿಶುಹತ್ಯೆ ತಡೆ ಕುರಿತು ಜಾಗೃತಿ ಮೂಡಿಸುವ ‘ಮಾತೃಜನನ’ ಎನ್ನುವ ಡಾಕ್ಯುಮೆಂಟ್ರಿ ಅದಕ್ಕೆ ದರ್ಶನ್ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ, ನಿರ್ಮಾಪಕರನ್ನ ತಮ್ಮ ಮನೆಗೆ ಕರೆಯಿಸಿಕೊಂಡು ಮಾತನಾಡಿಸಿ ಡ್ಯಾಕ್ಯುಮೆಂಟರಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top