ಸಿನಿಮಾ

ಶಿವಣ್ಣನ ಬರ್ತಡೆಗೆ ಟಗರು ಪ್ರೊಡ್ಯೂಸರ್ ಕೊಟ್ಟ ಸ್ಪೆಷಲ್ ಗಿಫ್ಟ್ ಏನು ಗೊತ್ತಾ?

ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರು ಮೊನ್ನೆ 57ನೇ ವಸಂತಕ್ಕೆ ಕಾಲಿಟ್ಟರು. ಅಣ್ಣಾವ್ರ ಮಗ ಶಿವಣ್ಣ ನಿನ್ನೆ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಶಿವಣ್ಣ ಬರ್ತ್‍ಡೇಯಂದು ಅಭಿಮಾನಿಗಳು ತಡರಾತ್ರಿಯಿಂದಲೇ ಅದ್ದೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. 56ನೇ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು 56 ಕೆಜಿ ತೂಕದ ಕೇಕ್ ತಯಾರಿಸಿದ್ದು ವಿಶೇಷವಾಗಿತ್ತು.

 

 

ಈ ವರ್ಷ ತೆರೆ ಕಂಡಿದ್ದ ಶಿವಣ್ಣ ಅಭಿನಯದ ಟಗರು ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಶಿವಣ್ಣ ಹುಟ್ಟುಹಬ್ಬದಂದು ಟಗರು ಚಿತ್ರತಂಡದ ಸದಸ್ಯರು ಕೂಡ ಆಗಮಿಸಿ ಶಿವಣ್ಣ ಅವರಿಗೆ ಶುಭಾಶಯ ಕೋರಿದ್ದಾರೆ. ಟಗರು ಸಿನಿಮಾ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ಅವರು ಶಿವಣ್ಣ ಅವರಿಗೆ ಚಿನ್ನದ ಸರವನ್ನು ನೀಡಿ ಗೌರವಿಸಿದ್ದಾರೆ ಎಂದು ತಿಳಿದು ಬಂದಿದೆ. ಶಿವನ ಅವರು ನಿಮ್ಮ ಪ್ರೀತಿ ಅಷ್ಟೇ ಸಾಕು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಅನೇಕ ನಟ ನಟಿಯರು ಆಗಮಿಸಿ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಬಿಗ್ ಬಾಸ್ ವಿಜೇತ ಒಳ್ಳೆ ಹುಡುಗ ಪ್ರಥಮ್ ಶಿವಣ್ಣ ಅವರಿಗೆ ಉಂಗುರ ತೊಡಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೊಂದು ವಿಶೇಷತೆ ಅಂದರೆ, ಪಕೀರಪ್ಪ ಎಂಬ ಶಿವಣ್ಣ ಅವರ ಅಪ್ಪಟ್ಟ ಅಭಿಮಾನಿ 500 ಕಿಲೋ ಮೀಟರ್ ಸೈಕಲ್ ಸವಾರಿ ಮಾಡಿ ಶಿವಣ್ಣ ಅವರಿಗೆ ಹುಟ್ಟುಹಬ್ಬ ಶುಭಾಶಯ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top