ಸಿನಿಮಾ

ರಘು ದೀಕ್ಷಿತ್ ಅವರ ಬಗ್ಗೆ ಹರಿದಾಡುತ್ತಿದೆ ಹೀಗೊಂದು ಸುಳ್ಳು ಸುದ್ದಿ.

ರಘು ದೀಕ್ಷಿತ್ ಅವರೊಬ್ಬ ಹೊಸ ತಲೆಮಾರಿನ ವಿಶಿಷ್ಟ ಸಂಗೀತ ಸಂಯೋಜಕ ಗಾಯಕರಲ್ಲೊಬ್ಬರು. ಜಗತ್ತಿನಾದ್ಯಂತ ಲಕ್ಷಾಂತರ ಸಂಗೀತ ಪ್ರೇಮಿಗಳಿಗೆ ಆರಾಧ್ಯದೈವೆನಿಸುವ, ಗಿಟಾರ್ ನುಡಿಸುವವರಿಗೆ ಮಾದರಿಯಾಗಿರುವ ಹೆಮ್ಮೆಯ ಕನ್ನಡಿಗ ರಘು ದೀಕ್ಷಿತ್. ತಾವೇ ರೂಪಿಸಿದ ಒಂದು ಸಂಸ್ಥೆ “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ವತಿಯಿಂದ ಜಗತ್ತಿನಾದ್ಯಂತ ಹಲವಾರು ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ರಘು ದೀಕ್ಷಿತ್ ಅವರು ಕಾಲೇಜ್ನಲ್ಲಿ ಸೂಕ್ಷ್ಮ ಜೀವಶಾಸ್ತ್ರದಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ ಮತ್ತು ಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಆದರೂ ಕೂಡಾ ಅವರು ತಮ್ಮ ಸ೦ಗೀತದಿ೦ದ ಹೆಚ್ಚಾಗಿ ಹೆಸರು ಮಾಡಿದ್ದಾರೆ.

 

 

 

ಅಮೋಘ ಸಾಧನೆ ಮಾಡಿರುವ ರಘು ದೀಕ್ಷಿತ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯೊಂದು ಹಬ್ಬಿತ್ತು ಅದೇನೆಂದರೆ, ರಘು ದೀಕ್ಷಿತ್ ಅವರ ಯಾವಾಗಲು ಬರೀ ಬ್ಯುಸಿ ಆಗಿರ್ತಾರೆ, ಆ ದೇಶ ಈ ದೇಶ ಅಂತೆಲ್ಲ ಸುತ್ತಾಡುತ್ತಿರುತ್ತಾರೆ. ಯಾರ ಕೈಗೂ ಕೂಡ ಸಿಗಲ್ಲ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಆದರೆ ಇದಕ್ಕೆಲ್ಲ ರಘು ಏನು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಕೊನೆಗೂ ರಘು ಬಾಯ್ಬಿಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು, ಹಾಗೇನು ಇಲ್ಲ ನಾನು ಬೆಂಗಳೂರಿನಲ್ಲೇ ಇರುತ್ತೇನೆ. ವರ್ಷದಲ್ಲಿ ಕೇವಲ ಒಂದು ತಿಂಗಳು ಮಾತ್ರ ವಿದೇಶಕ್ಕೆ ಹೋಗುತ್ತೇನೆ. ಬೆಂಗಳೂರಿನ ಇಂದಿರಾನಗರದಲ್ಲಿ ಅವರ ಸ್ಟುಡಿಯೋ ಇದ್ದು. ಅಲ್ಲಿ ನನ್ನ ಯಾವಾಗಲಾದರೂ ಭೇಟಿ ಮಾಡಬಹುದು ಎಂದು ತಿಳಿಸಿದ್ದಾರೆ.

ರಘು ದೀಕ್ಷಿತ್ ಅವರು ಹೆಚ್ಚಾಗಿ ಶಿಶುನಾಳ ಶರೀಫ಼ರ ಹಾಡುಗಳನ್ನು ಹಾಡಿದ್ದವರು ಈಗ ಬೇಂದ್ರೆ ಅವರ ಹಾಡುಗಳಿಗೂ ಹೊಸತನ ನೀಡಿದ್ದಾರೆ. ಇವರು ಇನ್ನು ಅನೇಕ ಕನ್ನಡ ಹಾಡುಗಳನ್ನು ಹಾಡಲಿ ಎಂಬುದು ಕನ್ನಡಿಗರ ಆಶಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top