ಮನೋರಂಜನೆ

ಈ ಸ್ಟಾರ್ ನಟನನ್ನು ತಮ್ಮ ಹಿಂದಿನ ಜನ್ಮದ ಸಹೋದರ ಎಂದು ಕರೆದ್ರು ಜಗ್ಗೇಶ್.

ವಯಕ್ತಿಕ, ಸಿನಿಮಾ ವಿಚಾರಗಳ ಜೊತೆಗೆ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ಮೂಲಕವೇ ಪ್ರತಿಕ್ರಿಯಿಸುತ್ತಾ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವವರು ನವರಸ ನಾಯಕ ಜಗ್ಗೇಶ್.. ಕನ್ನಡದ ಮಟ್ಟಿಗೆ ಟ್ವಿಟರ್’ನಲ್ಲಿ ಅತಿಹೆಚ್ಚು ಸಕ್ರಿಯವಾಗಿರೋ ನಟ ಎಂಬ ಕೀರ್ತಿ ನಿಸ್ಸಂದೇಹವಾಗಿ ಜಗ್ಗೇಶ್ ಅವರಿಗೆ ಸಲ್ಲುತ್ತದೆ. ಇಂಥ ಜಗ್ಗೇಶ್ ಸ್ವಾರಸ್ಯಕರವಾದ ವಿಚಾರವೊಂದನ್ನ ಟ್ವೀಟ್ ಮಾಡುವ ಮೂಲಕ ಬಿಚ್ಚಿಟ್ಟಿದ್ದಾರೆ. ಅದು ಏನು ಅಂತೀರಾ? ಮುಂದೆ ಓದಿ.

 

 

ಜಗ್ಗೇಶ್ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅವರನ್ನು ತಮ್ಮ ಹಿಂದಿನ ಜನುಮದ ಸಹೋದರ ಎಂದು ಕರೆದಿದ್ದಾರೆ.. ಹೌದು, ಶಿವರಾಜಕುಮಾರ್ ಅಭಿನಯದಲ್ಲಿ ‘ದ್ರೋಣಾ’ ಎಂಬ ಹೆಸರಿನ ಸಿನಿಮಾವೊಂದು ತಯಾರಾಗುತ್ತಿದೆಯಲ್ಲಾ? ಅದೇ ಹೆಸರಿನಲ್ಲಿ ಈ ಹಿಂದೆಯೇ ಜಗ್ಗೇಶ್ ಸಿನಿಮಾ ಮಾಡಿದ್ದರು. ಈ ಬಗ್ಗೆ ಅಭಿಮಾನಿಯೊಬ್ಬನ ಟ್ವೀಟ್’ಗೆ ಪ್ರತಿಕ್ರಿಯಿಸುತ್ತಾ ಜಗ್ಗೇಶ್ ಶಿವಣ್ಣನನ್ನು ತಮ್ಮ ಹಿಂದಿನ ಜನುಮದ ಸಹೋದರ ಎಂದಿದ್ದಾರೆ.

ಅಭಿಮಾನಿಯೇ ಟ್ವೀಟ್ ಏನು?
ಜಗ್ಗೇಶ್ ಸರ್, ನಾನು ನಿಮ್ಮ ಅಭಿಮಾನಿ, ನಿಮ್ಮ ಚಿತ್ರ ಗಳಾದ ರುಸ್ತುಂ, ದ್ರೋಣ, ಈ ಚಿತ್ರದ ಹೆಸರು ಗಳು , ಶಿವರಾಜ್ ಕುಮಾರ್ ರವರ ಹೊಸ ಚಿತ್ರಗಳ ಹೆಸರಾಗಿವೆ, ಇದಕ್ಕೆ ನಿವೇನಂತಿರಾ ಸರ್.

ಜಗ್ಗೇಶ್ ಪ್ರತಿಕ್ರಿಯೆ ಏನು?
ಇದಕ್ಕಿಂತ ಆನಂದ ಬೇರೇನಿದೆ..ಶಿವ ನನ್ನ ಹಿಂದಿನ ಜನ್ಮದ ಸಹೋದರನಂತೆ ಅವರ ತಂದೆ ನನ್ನ ಬದುಕಿಗೆ ದ್ರೋಣಾಚಾರ್ಯರಂತೆ..ಅವರ ವಂಶದ ಎಲ್ಲಾ ಕಾರ್ಯಕ್ಕು ನನ್ನ ಹೃದಯದಿಂದ ಶುಭಹಾರೈಸುವೆ..ನೂರ್ಕಾಲ ಸುಖವಾಗಿ ಬಾಳಿಲಿ ರಾಜವಂಶ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top