ಸಿನಿಮಾ

ಸದ್ದು ಮಾಡ್ತಿವೆ ಶಿವಣ್ಣನ ಕವಚ ಚಿತ್ರದ ಮೇಕಿಂಗ್ ಸ್ಟಿಲ್ಲುಗಳು.

‘ಕೋದಂಡರಾಮ’ ಸಿನಿಮಾ ರಿಲೀಸ್ ಆಗಿ 15 ವರ್ಷಗಳ ವೆರೆಗೂ ಯಾವುದೇ ರಿಮೇಕ್ ಸಿನಿಮಾದಲ್ಲಿ ಅಭಿನಯ ಮಾಡದ ಹ್ಯಾಟ್ರಿಕ್​ ಹೀರೋ ಶಿವರಾಜಕುಮಾರ್, ‘ಕವಚ’ ಎಂಬ ರಿಮೇಕ್ ಸಿನೆಮಾವನ್ನು ಇತ್ತೀಚೆಗೆ ಒಪ್ಪಿಕೊಂಡಿದ್ದರು. ಆ ಚಿತ್ರದ ಮುಹೂರ್ತ ಸಮಾರಂಭದಲ್ಲಿಯೇ, ಒಳ್ಳೆಯ ವಿಷಯಗಳಿರುವ ಚಿತ್ರಗಳು ರಿಮೇಕ್ ಆದರೆ, ಅದರಲ್ಲಿ ನಟಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿಕೊಂಡಿದ್ದರು.

 

 

ಸದ್ಯ ಸಿನಿಮಾ ಮೇಕಿಂಗ್ ಚಿತ್ರಗಳು ಬಿಡುಗಡೆ ಆಗಿದ್ದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಸಿನಿಮಾ ಮೇಲೆ ಸಿನಿಪ್ರಿಯರ ನಿರೀಕ್ಷೆ ಮತ್ತು ಶಿವರಾಜಕುಮಾರ್ ಅಭಿಮಾನಿಗಳ ಸಂಭ್ರವನ್ನೂ ಹೆಚ್ಚುವಂತೆ ಮಾಡಿದೆ. ಅಂದ ಹಾಗೇ ಕವಚ ಸಿನಿಮಾ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಆಗಿದೆ.

ಕವಚ ಸಿನಿಮಾದಲ್ಲಿ ಶಿವರಾಜಕುಮಾರ್ ದೃಷ್ಟಿದೋಷವುಳ್ಳ ವ್ಯಕ್ತಿಯಾಗಿ ಅಭಿನಯ ಮಾಡುತ್ತಿದ್ದು, ಅವರ ಜೊತೆಗೆ ಇಶಾ ಕೊಪ್ಪಿಕರ್, ರವಿ ಕಾಳೆ, ತಬಲಾ ನಾಣಿ, ವಸಿಷ್ಠ ಸಿಂಹ, ಸುಧಾ ಬೆಳವಾಡಿ, ಜಯಪ್ರಕಾಶ್, ಲಯೇಂದ್ರ ಮುಂತಾದವರು ನಟಿಸುತ್ತಿದ್ದಾರೆ. ರಾಹುಲ್ ಶ್ರೀವಾತ್ಸವ್ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಈ ಸಿನೆಮಾಗೆ ಇದೆ.  ಶಿವಣ್ಣ ಅವರು ಇಷ್ಟೂ ದಿನ ನಟಿಸಿದ ಎಲ್ಲಾ ಸಿನೆಮದಲ್ಲೂ ವಿಭಿನ್ನ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಕವಚ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡು ಹೇಗೆ ಮಿಂಚಲಿದ್ದಾರೆ ಕಾಡು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top