ಮನೋರಂಜನೆ

ಹಿಂದಿಯ ದೊಡ್ಡ ರಿಯಾಲಿಟಿ ಶೋನಲ್ಲಿ ಮಿಂಚು ಹರಿಸುತ್ತಿರುವ ಕನ್ನಡಿಗ.

ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಹಿಂದಿಯ ಅತಿದೊಡ್ಡ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಕನ್ನಡದ ಪ್ರತಿಭೆಯೊಂದು ಮಿಂಚು ಹರಿಸುತ್ತಿದೆ. ಕಿಶನ್ ಅಶೋಕ್ ಎಂಬ ಯುವಕ ‘ಡ್ಯಾನ್ಸ್ ದಿವಾನಿ’ ಡ್ಯಾನ್ಸಿಂಗ್ ಶೋನಲ್ಲಿ ಹುಬ್ಬೇರುವಂತ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾನೆ. ಈ ಮೂಲಕ ಕರುನಾಡಿನ ಕೀರ್ತಿ ಪತಾಕೆಯನ್ನು ದೇಶದಾದ್ಯಂತ ಹಾರಿಸುತ್ತಿದ್ದಾರೆ.

 

 

ಮೂಲತಃ ಮೂಡಿಗೆರೆಯಾವನಾದ ಈತ ದಿವಂಗತ ಸುಮ ಅಶೋಕ್ ಹಾಗೂ ಬಿ.ಪಿ ಅಶೋಕ್ ಅವರ ಮಗ. 28 ವರ್ಷ ವಯಸ್ಸಿನ ಕಿಶನ್ ಡ್ಯಾನ್ಸ್ ದಿವಾನಿ ಶೋನಲ್ಲಿ ಕರ್ನಾಟಕದಿಂದ ಭಾಗವಹಿಸಿರುವ ಒಬ್ಬನೇ ಒಬ್ಬ ಕಲಾವಿದ.. ಷೋ ಆರಂಭಾದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಕಿಶನ್ ಇದೀಗ ಅಂತಿಮ ಹಂತಕ್ಕೂ ಸಮೀಪದಲ್ಲಿದ್ದಾರೆ. ಮೂರು ಹಂತದಲ್ಲಿ ನಡೆಯುತ್ತಿರೋ ಈ ಶೋನಲ್ಲಿ ಎರಡನೇ ಪೀಳಿಗೆಯ ಹಂತದಲ್ಲಿ ಅಧ್ಭುತ ಪ್ರದರ್ಶನದಿಂದ ಗಮನಸೆಳೆದಿರುವ ಕಿಶನ್ ಅಂತಿಮವಾಗಿ ಉಳಿದಿರೋ ಐವರಲ್ಲಿ ಒಬ್ಬನಾಗಿದ್ದಾನೆ.

ಅಂದಹಾಗೆ ಈ ಶೋನಲ್ಲಿ ಜಡ್ಜ್ ಆಗಿರುವ ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ಕೂಡ ಈತನ ಹಾಡು ಕುಣಿತಕ್ಕೆ ಫಿದಾ ಆಗಿದ್ದು ಕಾರ್ಯಕ್ರಮದುದ್ದಕ್ಕೂ ಕಿಶನ್ ನನ್ನ ಹಾಡಿ ಹೊಗಳಿದ್ದಾರೆ.. ತಾಯಿಯನ್ನು ಕಳೆದುಕೊಂಡಿರುವ ಕಿಶನ್ ಇತ್ತೀಚಿಗೆ ತಮ್ಮ ತಾಯಿಗೆ ಸಮರ್ಪಿಸಿ ಮಾಡಿ ಪ್ರದರ್ಶನವನ್ನು ಕಂಡು ಮಾಧುರಿ ದೀಕ್ಷಿತ್ ಭಾವುಕರಾಗಿದ್ದರು.. ಒಟ್ಟಿನಲ್ಲಿ ಎಲೆಮರೆಕಾಯಿಯಂತೆಯೇ ತನ್ನ ಪ್ರತಿಭೆಯಿಂದ ದೇಶಾದ್ಯಂತ ಖ್ಯಾತಿಗಳಿಸಿಕೊಂಡಿರುವ ಕಿಶನ್ ಶೋನಲ್ಲಿ ವಿಜೇತರಾಗಿ ಬರಲಿ ಎಂಬುದೇ ಕನ್ನಡಿಗರೆಲ್ಲರ ಆಶಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top