ಸಮಾಚಾರ

ಅಂಬಾನಿ ಈಗ ಭಾರತಕ್ಕೆ ಮಾತ್ರವಲ್ಲ ಇಡೀ ಏಷ್ಯಾಗೆ ನಂ.1 ಶ್ರೀಮಂತ- ಅವರ ಬಳಿ ಇರೋ ಆಸ್ತಿ ಎಷ್ಟು.

ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮುಖ್ಯಸ್ಥ ಮುಖೇಶ್ ಅಂಬಾನಿ ಇದೀಗ ಭಾರತಕ್ಕೆ ಮಾತ್ರವಲ್ಲದೆ ಇಡೀ ಏಷ್ಯಗೆ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಕೀತಿಗೆ ಪಾತ್ರರಾಗಿದ್ದಾರೆ. ಚೀನಾದ ಅಲಿಬಾಬಾ ಗ್ರೂಪ್​ನ ಜಾಕ್​ ಮಾ ಅವರನ್ನು ಹಿಂದಿಕ್ಕಿರುವ ಅಂಬಾನಿ ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಅಗ್ರಗಣ್ಯರಾಗಿ ಹೊರಹೊಮ್ಮಿದ್ದಾರೆ..

 

 

ಇಂದು ಬಿಡುಗಡೆಯಾಗಿರುವ ಬ್ಲೂಮ್​ಬರ್ಗ್​ ವರದಿ ಪ್ರಕಾರ ಮುಖೇಶ್​ ಅಂಬಾನಿಯ ಬಳಿ 44.3 ಬಿಲಿಯನ್​ ಡಾಲರ್​ ಸಂಪತ್ತು (ಅಂದಾಜು ರೂ. 3 ಲಕ್ಷ ಕೋಟಿ) ಇದ್ದರೇ ಜಾಕ್​ ಮಾ ಅವರ ಬಳಿ 44 ಬಿಲಿಯನ್​ ಡಾಲರ್ ಆಸ್ತಿಯಿದೆ.. ಈ ಮೂಲಕ ಸ್ವಲ್ಪ ಅಂತರದಲ್ಲಿ ಅಂಬಾನಿ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈಗಾಗಲೇ ದೇಶಾದ್ಯಂತ 20ಕೋಟಿಗೂ ಹೆಚ್ಚು ಗ್ರಾಹಕರನ್ನು ಸಂಪಾದಿಸಿರುವ ಜಿಯೋ ಬೇರೆ ಟೆಲಿಕಾಂ ಆಕರ್ಷಕ ಆಫರುಗಳನ್ನೂ ನೀಡುವ ಮೂಲಕ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ಮುಖೇಶ್ ಅಂಬಾನಿ 4k ರೆಸಲ್ಯೂಷನ್​ನ ಆಧುನಿಕ​ ಫೈಬರ್​ ಒಳಗೊಂಡಿರುವ ಜಿಯೋಗಿಗಾ ಫೈಬರ್​ ಎಂಬ ಬ್ರಾಡ್​ಬ್ಯಾಂಡ್​ ಅನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top