ಮನೋರಂಜನೆ

‘ಕುರುಕ್ಷೇತ್ರ’ ಕಾಂಟ್ರವರ್ಸಿಯ ಬಗ್ಗೆ ನಿರ್ಮಾಪಕ ಮುನಿರತ್ನ ಹೇಳಿದ್ದೇನು?

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ವಿಚಾರವಾಗಿ ನೆನ್ನೆಯಿಂದೀಚೆಗೆ ಸುದ್ದಿಯೊಂದು ಕಾಡ್ಗಿಚ್ಚಿಗೂ ವೇಗವಾಗಿ ಹರಡಿಕೊಳ್ಳುತ್ತಿದೆ. ಅದೇನೆಂದರೆ ದರ್ಶನ್ ಅವರಿಗೂ ಮುನಿರತ್ನ ಅವರಿಗೂ ಭಿನ್ನಾಭಿಪ್ರಾಯವುಂಟಾಗಿದೆ, ದರ್ಶನ್ ಅವರು ನಿಖಿಲ್ ಕುಮಾರ್ ಅವರ ಅಭಿಮನ್ಯು ಪಾತ್ರದ ವಿರುದ್ಧ ಬೇಸರ ಗೊಂಡಿದ್ದಾರೆ, ಮಹಾಭಾರತದಲ್ಲಿ ಅಭಿಮನ್ಯು ಪಾತ್ರವಿರುದು ಒಂದು ಸ್ವಲ್ಪವೇ ಆಗಿದ್ದರೂ ಕುರುಕ್ಷೇತ್ರ ಸಿನಿಮಾದಲ್ಲಿ ಹೆಚ್ಚು ಬಿಲ್ಡಪ್ ಕೊಟ್ಟು ಚಿತ್ರೀಸಿದ್ದಾರೆ ಎಂದು ದಚ್ಚು ಮಿನಿಸಿಕೊಂಡಿದ್ದಾರೆ” ಎಂಬಂತ ನಾನಾ ಸುದ್ದಿಗಳು ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ಸ್ವತಃ ಮುನಿರತ್ನ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

 

 

ಈ ಬಗ್ಗೆ ಖಾಸಗಿ ಸುದ್ದಿಯೊಂದಿಗೆ ಮಾತನಾಡಿರುವ ಮುನಿರತ್ನ “ದರ್ಶನ್ ಅವರು ನಿಖಿಲ್ ಪಾತ್ರದ ಮೇಲೆ ಕೋಪಿಸಿಕೊಂಡಿದ್ದಾರೆ ಎಂಬುದು ಸುಳ್ಳು ಸುದ್ದಿ” ಎಂದು ಸ್ಪಷ್ಟಪಡಿಸಿದ್ದಾರೆ. “ನಾವು ನಿಖಿಲ್ ಅವರ ಜಾಗ್ವಾರ್​ ಸಿನಿಮಾ ನೋಡಿ ಅವರನ್ನು ಅಭಿಮನ್ಯು ಪಾತ್ರಕ್ಕೆ ಆಯ್ಕೆ ಮಾಡಿದ್ದೇವೆ.. ಈ ಚಿತ್ರ ಇದು ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ಚಿತ್ರ ಇಲ್ಲಿ ಯಾರ ಪಾತ್ರವನ್ನೂ ಕಡಿಮೆ ಮಾಡಲಾಗಲೀ, ಹೆಚ್ಚು ಮಾಡಲಾಗಲೀ ಸಾಧ್ಯವಿಲ್ಲ. ದರ್ಶನ್​ ಹಾಗೂ ನಿಖಿಲ್​ ಇಬ್ಬರಿಗೂ ಚಿತ್ರಕಥೆ ಹೇಳಿದಂತೆಯೇ ಚಿತ್ರ ಮೂಡಿಬಂದಿದೆ.. ಕತೆ ಹೇಳಿದ್ದಾಗ ಎಷ್ಟಿತ್ತೋ ಈಗಲೂ ಹಾಗೇ ಇದೆ. ಅವರವರ ಪಾತ್ರ ಬಂದಾಗ ಅವರು ತೆರೆ ಮೇಲೆ ಬಂದು ಹೋಗುತ್ತಾರೆ” ಎಂದು ಹೇಳಿದ್ದಾರೆ.

ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಹೊಗಳಿದ ಮುನಿರತ್ನ “ಕುಮಾರಣ್ಣನ ಚಿತ್ರರಂಗವನ್ನು ತುಂಬಾ ಪ್ರೀತಿಸುತ್ತಾರೆ. ಹಾಗಾಗಿಯೇ ಅವರ ಬಗ್ಗೆ ನಮಗೆ ಬಹಳ ಅಭಿಮಾನವಿದೆ.. ಕುರುಕ್ಷೇತ್ರದಲ್ಲಿ ‘ಅಭಿಮನ್ಯು’ ಒಂದು ಸಾಯುವ ಪಾತ್ರ ಅಂತ ಗೊತ್ತಿದ್ದರೂ ಕೂಡ ತಮ್ಮ ಮಗನನ್ನು ಆ ಪಾತ್ರದಲ್ಲಿ ನಟಿಸಲು ಕಳಿಸಿದ್ದಾರೆ. ” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top