ಮನೋರಂಜನೆ

ದರ್ಶನ್,ನಿಖಿಲ್ ನಡುವಿನ ಶೀತಲ ಸಮರ- ಪ್ರತಿಕ್ರಿಯೆ ನೀಡಿದ ಕುರುಕ್ಷೇತ್ರದ ಅಭಿಮನ್ಯು.

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ವಿಚಾರವಾಗಿ ನೆನ್ನೆಯಿಂದೀಚೆಗೆ ಸುದ್ದಿಯೊಂದು ಕಾಡ್ಗಿಚ್ಚಿಗೂ ವೇಗವಾಗಿ ಹರಡಿಕೊಳ್ಳುತ್ತಿದೆ. ಅದೇನೆಂದರೆ ದರ್ಶನ್ ಅವರಿಗೂ ಮುನಿರತ್ನ ಅವರಿಗೂ ಭಿನ್ನಾಭಿಪ್ರಾಯವುಂಟಾಗಿದೆ, ದರ್ಶನ್ ಅವರು ನಿಖಿಲ್ ಕುಮಾರ್ ಅವರ ಅಭಿಮನ್ಯು ಪಾತ್ರದ ವಿರುದ್ಧ ಬೇಸರ ಗೊಂಡಿದ್ದಾರೆ, ಮಹಾಭಾರತದಲ್ಲಿ ಅಭಿಮನ್ಯು ಪಾತ್ರವಿರುದು ಒಂದು ಸ್ವಲ್ಪವೇ ಆಗಿದ್ದರೂ ಕುರುಕ್ಷೇತ್ರ ಸಿನಿಮಾದಲ್ಲಿ ಹೆಚ್ಚು ಬಿಲ್ಡಪ್ ಕೊಟ್ಟು ಚಿತ್ರೀಸಿದ್ದಾರೆ ಎಂದು ದಚ್ಚು ಮಿನಿಸಿಕೊಂಡಿದ್ದಾರೆ” ಎಂಬಂತ ನಾನಾ ಸುದ್ದಿಗಳು ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ಸ್ವತಃ ನಟ ನಿಖಿಲ್ ಕುಮಾರಸ್ವಾಮಿಯವರೇ ಸ್ಪಷ್ಟನೆ ನೀಡಿದ್ದಾರೆ.

 

 

ನೆನ್ನೆ ಸೀತಾರಾಮ ಕಲ್ಯಾಣ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಮುಂದೆ ಮಾತನಾಡಿದ ನಿಖಿಲ್ ಈ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. “ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿರುವ ಯಾರೊಂದಿಗೂ ನನಗೆ ಭಿನ್ನಾಭಿಪ್ರಾಯವಿಲ್ಲ. ದಯವಿಟ್ಟು ಈ ರೀತಿಯ ಗಾಸಿಪ್ ಗಳನ್ನು ಹರಡಿಸಬೇಡಿ. ನನ್ನ ಪಾತ್ರದ ಬಗ್ಗೆ ದರ್ಶನ್ ಬೇಸರಗೊಂಡಿದ್ದಾರೆ ಅನ್ನೋದು ಸುಳ್ಳು, ಕುರುಕ್ಷೇತ್ರ ಕಾಲ್ಪನಿಕ ಚಿತ್ರವಲ್ಲ ಅದೊಂದು ಐತಿಹಾಸಿಕ ಚಿತ್ರ ನಡೆದಿರುವುದನ್ನೇ ಸಿನಿಮಾ ಮಾಡಲಾಗಿದೆ. ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ಪ್ರಾಮುಖ್ಯತೆಯನ್ನೂ ನೀಡಲಾಗಿದೆ. ” ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ಅವರು “ಚಿತ್ರದಲ್ಲಿ ನಾನು ಸೆಕೆಂಡ್ ಹಾಫ್ ನಲ್ಲಿ ಬರುತ್ತೇನೆ, ಸುಮಾರು 32ನಿಮಿಷಗಳ ಕಾಲ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತೇನೆ. ಚಕ್ರವ್ಯೂಹದಲ್ಲಿ ಅಭಿಮನ್ಯು ಸಿಲುಕಿಕೊಂಡಾಗ ಅದರಿಂದ ಹೊರ ಬರಲಾಗದ ಯುದ್ಧ 12 ನಿಮಿಷ ಯುದ್ದದ ಸನ್ನಿವೇಶ, ಜೊತೆಗೆ ಒಂದು ಹಾಡು ಇದೆ. ಇದನ್ನು ಹೊರತು ಪಡಿಸಿದರೆ ಐದು ದೃಶ್ಯಗಳಲ್ಲಿ ನಾನು ನಟಿಸಿದ್ದು ಭೀಷ್ಮನ(ಅಂಬರೀಷ್) ಹತ್ತಿರ ಮಾತನಾಡುವ ದೃಶ್ಯ ತುಂಬಾ ಚೆನ್ನಾಗಿ ಮೂಡಿಬಂದಿದೆ.” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top