ಸಮಾಚಾರ

ಇವರೇನು ದೊಡ್ಡ ಶೂರರಲ್ಲ, ಈ ಜಾಗಗಳ ವಾಸ್ತವ ತಿಳ್ಕೊಂಡ್ರೆ ಒಂದ್ ​ಸಲ ನೀವೂ ಟ್ರೈ ಮಾಡ್ತೀರಾ

ಪೆಡ್ರ ಡು ಟೆಲೆಗ್ರಫೊ, ಬ್ರೆಜಿಲ್

ಪೆಡ್ರ ಡೋ ಡೊ ಟೆಲೆಗ್ರಫೊ ಎಂಬ ಈ ಸಣ್ಣ ಬಂಡೆಯು ರಿಯೊ ಡಿ ಜನೈರೋದಿಂದ ಸಮೀಪದಲ್ಲಿದೆ. ಇಲ್ಲಿಂದ ಅಟ್ಲಾಂಟಿಕ್ ಸಾಗರದ ಸುಂದರ ನೋಟ ಕಾಣಬಹುದು. ಇಲ್ಲಿ ನೀವು ಯಾವುದೇ ಅಪಾಯವಿಲ್ಲದೆಯೇ ಕೂಲ್ ಫೋಟೋವನ್ನು ತೆಗೆದುಕೊಳ್ಳಬಹುದು. ಆದ್ರೆ ಫೋಟೋ ತೆಗೆಯುವದ ಆಂಗಲ್ ಬಗ್ಗೆ ಗಮನವಿರಬೇಕು.

 

                  ಪೆಡ್ರ ಡು ಟೆಲೆಗ್ರಫೊ, ಬ್ರೆಜಿಲ್

ಪೆಡ್ರಾ ಡ ಗಾವೆಯಾ, ಬ್ರೆಜಿಲ್

 

ಪೆಡ್ರಾ ಡ ಗಾವೆಯಾ, ಬ್ರೆಜಿಲ್

ಪೆಡ್ರಾ ಡ ಗವೇವಾ ರಿಯೊ ಡಿ ಜನೈರೊದಲ್ಲಿ 2,762 ಅಡಿ ಎತ್ತರವಿರುವ ಒಂದು ಕಲ್ಲು. ಈ ನಗರದಲ್ಲಿ ಈ ರೀತಿಯ ಅನೇಕ ಕಲ್ಲುಗಳಿವೆ. ಇಲಿ ಕೂಡ ನೀವು ಇಲ್ಲಿ ನೀವು ಸ್ವಲ್ಪ ಜಾಗರೂಕರಾಗಿ ಫೋಟೋ ತೆಗೆಯಬೇಕು.
ಎಲ್ಲ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಬೇಕು.

 

ಪೊಟಾಟೋ ಚಿಪ್ ರಾಕ್, ಯುಎಸ್ಎ
ಪೊಟಾಟೋ ಚಿಪ್ ರಾಕ್ ಕ್ಯಾಲಿಫೋರ್ನಿಯಾದ ಪೊವೆ ಪಟ್ಟಣದ ಸಮೀಪ ವುಡ್ಸನ್ ಪರ್ವತದ ಮೇಲಿದೆ. ಇದು ನಿಜವಾಗಿಯೂ ಆಲೂಗೆಡ್ಡೆ ಚಿಪ್ ರೀತಿ ಕಾಣುತ್ತದೆ. ಕೆಲವು ಫೋಟೋಗಳಲ್ಲಿ ಬಂಡೆ ಮೇಲೆ ನಿಂತಿರುವವರು ದೊಡ್ಡ ಶೂರರಿರಬೇಕು ಎನಿಸುತ್ತದೆ. ಆದರೆ ಸುಲಭವಾಗಿ ಹತ್ತಿ ಫೋಟೋ ಕ್ಲಿಕ್ಕಿಸಬಹದು.

 

 

ವಿಕ್ಟೋರಿಯಾ ಜಲಪಾತ, ಜಿಂಬಾಬ್ವೆ

ಜಿಂಬಾಬ್ವೆ ಮತ್ತು ಝಾಂಬಿಯಾ ನಡುವಿನ ಗಡಿರೇಖೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಈ ಪ್ರಸಿದ್ಧ ಜಲಪಾತ ಜಾಂಬೆಜಿ ನದಿಯಲ್ಲಿದೆ. ಜಲಪಾತದ ಎತ್ತರ 393 ಅಡಿಗಳು. ಆದರೆ ಜನರು ಹೇಗೆ ಫೋಟೋ ತೆಗೆದುಕೊಳ್ಳುತ್ತಾರೆ ಗೊತ್ತೇ?

ಜಲಪಾತದ ಮೇಲ್ಭಾಗದಲ್ಲಿ, ಒಂದು ಭಾಗದಲ್ಲಿ ಡೆವಿಲ್ಸ್ ಎಂಬ ಹೆಸರಿನ ಫೂಲ್ ಇದ್ದು. ಅಲ್ಲಿ ನೀರಿನ ಹರಿವು ಬಹಳ ನಿಧಾನವಾಗಿರುತ್ತದೆ, ಆದ್ದರಿಂದ ನೀವು ಅಲ್ಲಿ ಬೀಳುವುದಿಲ್ಲ .

 

 

 

ಫ್ಲೈಡಲ್ಸ್ ಜ್ವೆಟ್, ನಾರ್ವೆ

ಫ್ಲೈಡಾಲ್ಸ್ ಜ್ವೆಟ್ ರಾಕ್ 1,007 ಅಡಿ ಎತ್ತರದಲ್ಲಿ ಜಿರಾಂಜರ್ಫ್ಜೊರ್ಡೆನ್ ಮೇಲಿದೆ. ಈ ಅದ್ಭುತ ಸ್ಥಳದ ಹೆಸರನ್ನು “ಕಣಿವೆಯ ಮೇಲೆ ಹಾರುತ್ತಿದೆ” ಎಂದು ಅನುವಾದಿಸಲಾಗುತ್ತದೆ. ಇಲ್ಲಿ ಸಾಕಷ್ಟು ಎಚ್ಚರಿಕೆ ಚಿಹ್ನೆಗಳು ಇದ್ದರೂ ಕೂಡ ಅನೇಕರು ಇಲ್ಲಿ ಫೋಟೋ ಕ್ಲಿಕ್ಕಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top