ಆರೋಗ್ಯ

ತೌಡು ಅಕ್ಕಿ ತಿನ್ನೋದ್ರಿಂದ ಇಷ್ಟು ಲಾಭಗಳು ಅಂತ ಗೊತ್ತಾದ್ಮೇಲೆ ಬಿಳಿ ಅಕ್ಕಿ ಬಿಟ್ಟು ಇನ್ಮೇಲೆ ತೌಡುಯುಕ್ತ ಅಕ್ಕಿ ತಿನ್ನೋಕೆ ಶುರು ಮಾಡ್ತೀರಾ

ಇತ್ತೀಚಿನ ದಿನಗಳಲ್ಲಿ ಆಹಾರ ಎಷ್ಟು ಆರೋಗ್ಯಕರವಾಗಿದೆ ಎನ್ನುವುದಕ್ಕಿಂತ ಎಷ್ಟು ಆಕರ್ಷಕವಾಗಿದೆ ಎಂಬುದು ಬಹಳ ಮುಖ್ಯವಾಗಿದೆ , ಆಹಾರಕ್ಕೆ ಮೇಣ ಹಚ್ಚಿ ತಾಜಾ ಇರುವಂತೆ ಮಾಡುವುದು , ಇಂಜೆಕ್ಷನ್ ಕೊಟ್ಟು ಕಾಯಿಯನ್ನು ಹಣ್ಣಾಗಿ ಮಾಗಿಸುವುದು , ಹೆಚ್ಚು ಕಡು ಬಣ್ಣದಿಂದ ಕಾಣಲಿ ಎಂದು ಬಣ್ಣದ ನೀರಲ್ಲಿ ತರಕಾರಿ ಹಾಗು ಹಣ್ಣು ಹಂಪಲನ್ನು ಅದ್ದುವುದು ಇತ್ಯಾದಿಗಳನ್ನು ಮಾಡಿ ಗ್ರಾಹಕರ ಆರೋಗ್ಯವನ್ನು ಹಾಳು ಮಾಡುತ್ತಾರೆ .

 

 

ಇನ್ನು ಅಕ್ಕಿಯನ್ನು ಬಿಳಿಯಾಗಿ ಹಾಗು ಆಕರ್ಷಕವಾಗಿ ಕಾಣುವಂತೆ ಮಾಡಲು ಪಾಲಿಶ್ ಮೊರೆ ಹೋಗುತ್ತಾರೆ ಅಂಗಡಿಯವರು ,ಇದು ಬಹಳ ಸೊಗಸಾಗಿ ಕಾಣುತ್ತದೆ ಆದರೆ ತೌಡು ತೆಗೆದ ಅಕ್ಕಿಯಲ್ಲಿ ಸತ್ವವೇ ಇರುವುದಿಲ್ಲ ಎಂದು ಎಷ್ಟೋ ಜನರಿಗೆ ಗೊತ್ತೇ ಇರುವುದಿಲ್ಲ .

ದಿನಕ್ಕೆ ಒಂದು ಬಾರಿ ತೌಡುಯುಕ್ತ ಅಕ್ಕಿಯನ್ನು ತಿಂದರೆ ಆ ದಿನಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡುತ್ತದೆಯಂತೆ , ತೌಡನ್ನು ಕೇವಲವಾಗಿ ನೋಡಿ ತೆಗೆದು ಬಿಸಾಡುತ್ತಾರೆ ಆದರೆ ಇದರಲ್ಲಿ ಪೋಷಕಾಂಶಗಳು ಖನಿಜ ಲವಣಗಳು , ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುವ ಗುಣಗಳು ಅಧಿಕವಾಗಿ ಇರುತ್ತದೆ ಎಂದು ಎಷ್ಟೋ ಜನರಿಗೆ ಗೊತ್ತಿಲ್ಲ .

400 ಕ್ಕೂ ಹೆಚ್ಚು ಸಂಯುಕ್ತಗಳಿದ್ದು ಇದು ದೇಹಕ್ಕೆ ಅಗತ್ಯವಾದ ಎಲ್ಲ ಕೊರತೆಯನ್ನು ನೀಗಿಸುತ್ತದೆ , ಕೊಲರಾಡೋ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ
ಭಾರತದಲ್ಲಿ ಹಳೆಯ ಕಾಲದಲ್ಲಿ ತೌಡುಯುಕ್ತ ಅಕ್ಕಿಯನ್ನು ತಿನ್ನುತ್ತಿದ್ದರಿಂದ ಆರೋಗ್ಯವಾಗಿದ್ದರು ಅಷ್ಟೇ ಅಲ್ಲದೆ ಸಕ್ಕರೆ ಖಾಯಿಲೆಯಂತಹ ಸಮಸ್ಯೆಗಳು ಬಹಳ ದೂರವೇ ಉಳಿದಿದ್ದವು , ಇನ್ನು ಕೊಲೆಸ್ಟ್ರಾಲ್ ನಿಂದ ಸಂಭವಿಸುತ್ತಿರುವ ಹಾರ್ಟ್ ಅಟ್ಯಾಕ್ ಸಮಸ್ಯೆ ಕೂಡ ಬಹಳ ದೂರವೇ ಇತ್ತು .

ಶರೀರಕ್ಕೆ ಬೇಕಾದ ಥಯಾಮಿನ್ ,ನಿಯಾಸಿನ್ , ವಿಟಮಿನ್ b6 ಹೇರಳವಾಗಿದೆ , ತೌಡುಯುಕ್ತ ಅಕ್ಕಿಯಲ್ಲಿರುವ ಫೈಬರ್ ಅಂಶವು ಜೀರ್ಣ ಶಕ್ತಿಯನ್ನು ಹೆಚ್ಚಿಸಿ ಮಲಬದ್ದತೆಯನ್ನು ತಡೆಯುತ್ತದೆ .

 

ಕ್ಯಾಲೊರಿ ಬಹಳ ಹೆಚ್ಚಾಗಿದ್ದು ಹೊಟ್ಟೆ ತುಂಬಿದ ಅನುಭವವಾಗುತ್ತದೆ ,ಆಂಟಿ ಆಕ್ಸಿಡಂಟ್ ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top