ಮನೋರಂಜನೆ

ಮುಂದುವರೆದ ಸಂಜು ಓಟ-ದಂಗಾಗಿಸುತ್ತೆ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್.

ಬಾಲಿವುಡ್‌ನ ಸ್ಟಾರ್ ನಟರಾಗಿ ಹೆಚ್ಚಿನ ಸಲ ವಿವಾದಗಳ ಕೇಂದ್ರ ಬಿಂದುವಾಗಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವವರು ಸಂಜಯ್ ದತ್. ಇಂಥ ಸಂಜಯ್ ದತ್ ಜೀವನವನ್ನು ಆಧರಿಸಿದ ‘ಸಂಜು’ ಚಿತ್ರದ ಯಶಸ್ಸಿನ ಓಟ ಅಡೆತಡೆಯಿಲ್ಲದೇ ಮುಂದುವರೆಯುತ್ತಿದೆ. ದೇಶದ ಬಹುತೇಕ ಚಿತ್ರಮಂದಿರಗಳಲ್ಲಿ ಸಂಜು ಬಾಬಾ ಎಗ್ಗಿಲ್ಲದೆ ನುಗ್ಗುತ್ತಿದ್ದಾನೆ. ರಂಗು ರಂಗಾದ ವ್ಯಕ್ತಿತ್ವ ಹೊಂದಿರುವ ಸಂಜಯ್ ದತ್ ಜೀವನವನ್ನು ಸಿನಿಮಾ ಚೌಕಟ್ಟಿಗೆ ಹೇಗೆ ಒಗ್ಗಿಸಲಾಗಿದೆ ಎಂಬ ಕ್ಯೂರಿಯಾಸಿಟಿಯಿಂದ ಚಿತ್ರಪ್ರೇಮಿಗಳು ಚಿತ್ರಮಂದಿರಗಳತ್ತ ದೌಡಾಯಿಸುತ್ತಿದ್ದಾರೆ. ಪರಿಣಾಮ ಬಾಲಿವುಡ್ ಬಾಕ್ಸ್ ಆಫೀಸ್ ದಾಖಲೆಗಳೆಲ್ಲಾ ಮುರಿದು ಬೀಳುತ್ತಿವೆ.

 

 

ಬಿಡುಗಡೆಯಾದ ಮೊದಲ ದಿನವೇ 35 ಕೋಟಿ ಕಲೆಕ್ಷನ್ ಮಾಡಿ ಮೂರ್ ದಿನದಲ್ಲಿ ನೂರು ಕೋಟಿ ಗಡಿ ದಾಟಿದ್ದ ರಣಬೀರ್ ಕಪೂರ್ ಅಭಿನಯದ ಈ ಚಿತ್ರ ಈ ವರ್ಷದ ಎಲ್ಲಾ ಬಾಲಿವುಡ್ ಬಾಕ್ಸ್ ಆಫೀಸ್ ರೆಕಾರ್ಡ್ ಗಳನ್ನೂ ಅಳಿಸಿಹಾಕಿದೆ. ಸದರಿ ಚಿತ್ರ ಗಳಿಕೆಯಲ್ಲಿ ಇದೀಗ 500 ಕೋಟಿಯನ್ನು ದಾಟಿಕೊಂಡಿದ್ದು ಕೇವಲ 7 ದಿನಗಳಿಗೆ 500 ಕೋಟಿ ಕ್ಲಬ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ಬಾಲಿವುಡ್ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.. ಭಾರತದಲ್ಲಿ ಹದಿನೈದು ದಿನಗಳಲ್ಲಿ 378ಕೋಟಿ ಗಳಿಸಿಕೊಂಡಿದ್ದರೆ ಭಾರತದಿಂದ ಹೊರಗೆ 122 ಕೋಟಿ ಬಾಚಿಕೊಂಡಿದೆ. ಒಟ್ಟಾರೆ ಹದಿನೈದು ದಿನಗಳಲ್ಲಿ 500 ಕೋಟಿ ಗಳಿಸಿದೆ ಎಂದು ಹೇಳಲಾಗಿದೆ.

ಯೌವನದ ಹುಮ್ಮಸ್ಸಿನಲ್ಲಿ ಧಾರಾಳವಾಗಿಯೇ ಅಡ್ಡದಾರಿಯನ್ನೂ ಹಿಡಿದು ಆ ಹುರುಪಿನಲ್ಲಿ ಮಾಡಿಕೊಂಡಿದ್ದ ಯಡವಟ್ಟುಗಳು, ಡ್ರಗ್ಸ್, ಗರ್ಲ್ ಫ್ರೆಂಡ್, ಎಕೆ47 ರೈಫಲ್ಇಟ್ಟುಕೊಂಡಿದ್ದಕ್ಕೆ ವರ್ಷಗಳ ಕಾಲ ಜೈಲು ಹಕ್ಕಿಯಾಗಿ ಹೊರ ಬಂದ ಘಟನೆಗಳನ್ನು ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ.. ರಣ್ಬೀರ್ ಕಪೂರ್, ಪರೇಶ್ ರಾವಲ್, ಮೋನಿಶಾ ಕೊಯಿರಾಲ, ಸೋನಂ ಕಪೂರ್, ಅನುಷ್ಕಾ ಶರ್ಮಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top