ಹೆಚ್ಚಿನ

ಜುಲೈ 13 ನೇ ತಾರೀಖು ಬಂದ ಸೂರ್ಯಗ್ರಹಣದಿಂದ 12 ರಾಶಿಯವರಿಗೆ ಏನೆಲ್ಲಾ ಲಾಭ ಮತ್ತು ನಷ್ಟ ಸಂಭವಿಸಲಿದೆ ಎಂದು ತಿಳ್ಕೊಳ್ಳಿ .

ಜುಲೈ 13 ನೇ ತಾರೀಖಿನಂದು ಈ ವರ್ಷದ ಎರಡನೇ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣ ಆಸ್ಟ್ರೇಲಿಯಾ , ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸಲಿದೆ . ನಮ್ಮ ಭಾರತ ದೇಶದಲ್ಲಿ ಹೆಚ್ಚಾಗಿ ಗೋಚರಿಸುವುದಿಲ್ಲ. ಆದ್ದರಿಂದ ಸೂತಕ ಸಮಯ ಮತ್ತು ನಿಯಮ ಭಾರತೀಯರಿಗೆ ಆಷ್ಟಾಗಿ ಅನ್ವಯವಾಗುವುದಿಲ್ಲ . ಆದರೆ ರಾಶಿಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಲಿದೆ .

ಮೇಷ ರಾಶಿ

 

ಸೂರ್ಯ ಗ್ರಹಣದಿಂದ ಆರ್ಥಿಕ ಲಾಭ ತಂದುಕೊಡಲಿದೆ. ಸುಖ, ಸಂತೋಷ ನಿಮ್ಮ ಜೀವನದಲ್ಲಿ ವೃದ್ಧಿಯಾಗಲಿದೆ. ನೌಕರಿಯಲ್ಲಿ ಬಡ್ತಿ ಮತ್ತು ಯಶಸ್ಸು ಲಭಿಸಲಿದೆ .

ವೃಷಭ ರಾಶಿ

 

ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೆಚ್ಚಾಗಿ ಹಣವು ಖರ್ಚಾಗಲಿದೆ, ಸುಖ – ಶಾಂತಿ ನೆಮ್ಮದಿಗೆ ಭಂಗ ಬರಲಿದೆ, ಆರ್ಥಿಕವಾಗಿ ನಷ್ಟ ಸಂಭವಿಸಲಿದೆ .

ಮಿಥುನ ರಾಶಿ

 

ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ,ಮಾನಸಿಕ ಒತ್ತಡ ಹೆಚ್ಚಾಗಲಿದೆ, ಅತಿಯಾದ ಬರವಸೆ ಮತ್ತು ಆತ್ಮವಿಶ್ವಾಸ ಬೇಡ .

ಕಟಕ ರಾಶಿ

 

ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಇರುವುದಿಲ್ಲ , ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿದೆ, ಬೇರೆಯವರ ಜೊತೆ ಗಲಾಟೆಯಾಗುವ ಸಾಧ್ಯತೆ ಇದೆ .

ಸಿಂಹ ರಾಶಿ

 

ಇಚ್ಛಾಶಕ್ತಿಯು ವೃದ್ಧಿಯಾಗಲಿದೆ, ಸಾಹಸದಲ್ಲಿ ವೃದ್ಧಿ, ಸಣ್ಣ ಪ್ರವಾಸದಿಂದ ನಿಮಗೆ ಲಾಭವಾಗಲಿದೆ, ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ .

ಕನ್ಯಾ ರಾಶಿ

 

ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಹೆಚ್ಚಾಗಿ ಕಾಡಲಿವೆ, ಕಾನೂನಾತ್ಮಕ ವಿಚಾರದಲ್ಲಿ ನಿಮಗೆ ಜಯ ಸಿಗುವ ಅಥವಾ ಲಭಿಸುವ ಸಾಧ್ಯತೆ ಹೆಚ್ಚಾಗಿದೆ.

ತುಲಾ ರಾಶಿ

 

ಪೂರ್ಣ ಶಕ್ತಿ ಹಾಗೂ ಸಂಪೂರ್ಣ ಮನಸ್ಸಿನಿಂದ ಕೆಲಸ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ, ಕುಟುಂಬ ಹಾಗೂ ಪ್ರೀತಿಯಲ್ಲಿ ಸಮಸ್ಯೆ ಉಂಟಾಗಲಿದೆ, ಯಶಸ್ಸಿನ ದಾರಿಯಲ್ಲಿ ನಿಧಾನವಾಗಿ ಪ್ರಗತಿ ಅಥವಾ ಉನ್ನತಿಯಾಗಲಿದೆ.

ವೃಶ್ಚಿಕ ರಾಶಿ

 

ಧನ ಲಾಭ ಪ್ರಾಪ್ತಿ, ಉನ್ನತಿ ಕಾಣಲಿದ್ದೀರಿ,ವಿರೋಧಿಗಳ ವಿರುದ್ಧ ಜಯ ಸಾಧಿಸುವಿರಿ, ಖುಷಿ ಮತ್ತು ಶಾಂತಿ ಜೀವನದಲ್ಲಿ ಪ್ರಾಪ್ತಿಯಾಗಲಿದೆ .

ಧನಸ್ಸು ರಾಶಿ 

 

ಜೀವನ ಸಂಗಾತಿಯ ಜೊತೆ ಕಲಹ ಉಂಟಾಗಲಿದೆ, ವ್ಯಾಪಾರ ಮತ್ತು ವ್ಯವಹಾರ ಮಾಡುತ್ತಿರುವ ನಿಮ್ಮ ಸಹೋದ್ಯೋಗಿಗಳ ಜೊತೆ ಕಲಹ, ಗಲಾಟೆ ,ವೈಮನಸ್ಸುಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ.

ಮಕರ ರಾಶಿ

 

ನಿಮ್ಮ ಗೌರವಕ್ಕೆ ಹಾನಿ ಉಂಟಾಗಲಿದೆ, ಧನಹಾನಿ ಸಂಭವಿಸಲಿದೆ, ಆದಷ್ಟು ಎಚ್ಚರದಿಂದ ಇದ್ದು, ಸಮಾಧಾನವಾಗಿ ಎಲ್ಲವನ್ನು ನಿಭಾಯಿಸಿ.

ಕುಂಭ ರಾಶಿ

 

ಮಾನಸಿಕ ಒತ್ತಡ ಹೆಚ್ಚಾದಂತೆ ಸಮಸ್ಯೆ ಕೂಡ ಹೆಚ್ಚಾಗುತ್ತದೆ, ಆದ್ದರಿಂದ ಶಾಂತ ರೀತಿಯಿಂದ ಯೋಚಿಸಿ ನಂತರ ವರ್ತಿಸಿದರೆ ಉತ್ತಮ, ಪರಿಶ್ರಮ ಅಥವಾ ಸಂಘರ್ಷ ಪಡಬೇಕಾದ ಅಗತ್ಯವಿದೆ.

ಮೀನ ರಾಶಿ 

 

ಸೂರ್ಯಗ್ರಹಣ ನಿಮ್ಮ ರಾಶಿಗೆ ಶುಭಕರವಾಗಿದೆ, ಪ್ರತಿಯೊಂದು ಕೆಲಸದಲ್ಲೂ ಲಾಭ ಸಿಗಲಿದೆ , ಉದ್ಯೋಗ, ವ್ಯಾಪಾರ, ವ್ಯವಹಾರದಲ್ಲಿ ಲಾಭ ನಿಮಗೆ ಹೆಚ್ಚಾಗಿ ಲಭಿಸಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top