ಸಿನಿಮಾ

ರಿಯಲ್ ಸ್ಟೋರಿ ಹೊಂದಿರುವ ಟಾಪ್ 5 ಕನ್ನಡ ಸಿನೆಮಾಗಳು ಯಾವವು ಗೊತ್ತೇ

ಅಟ್ಟಹಾಸ:
ಕಾಡುಗಳ್ಳ, ನರಹಂತಕ ವೀರಪ್ಪನ್ ನಿಜ ಜೀವನವನ್ನು ಆಧರಿಸಿದ ಸಿನಿಮಾ ಕನ್ನಡದಲ್ಲಿ “ಅಟ್ಟಹಾಸ”, ತಮಿಳಿನಲ್ಲಿ ‘ವನಯುದ್ಧಂ’ ಎಂಬ ಹೆಸರಿನಲ್ಲಿ ತಯಾರಾಗಿತ್ತು. ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅರ್ಜುಜ್ ಸರ್ಜಾ ಅಭಿನಯಿಸಿದ್ದಾರೆ. ವೀರಪ್ಪನ್ ಆಗಿ ಕಿಶೋರ್ ನಟಿಸಿದ್ದರು. ವರನಟ ಡಾ.ರಾಜ್ ಕುಮಾರ್ ಅವರ ಪಾತ್ರವನ್ನು ಸುರೇಶ್ ಒಬೆರಾಯ್ ಅಭಿನಯ ಮಾಡಿದ್ದರು.

 

 

ಮೈನಾ:
ಪೊಲೀಸ್ ಅಧಿಕಾರಿಯಾಗಿದ್ದ ಬಿಬಿ ಅಶೋಕ್ ಕುಮಾರ್ ಹೇಳಿದ ನಿಜ ಜೀವನಾಧಾರಿತ ಸಿನಿಮಾ ಮೈನಾ. ಚಿತ್ರದಲ್ಲಿ ಚೇತನ್, ನಿತ್ಯಾ ಮೆನನ್ ಮತ್ತು ಶರತ್ ಕುಮಾರ್ ಅಭಿನಯ ಮಾಡಿದ್ದರು.

ದಂಡುಪಾಳ್ಯ:
ಒಂದು ಸಮಯದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬೆಚ್ಚಿ ಬೀಳಿಸಿದ್ದ ಖತರ್ನಾಕ್ ದಂಡುಪಾಳ್ಯ ಗ್ಯಾಂಗಿನದ್ದು ಕರಾಳ ಕಥೆ. ಅಂತಹ ಭೀಕರ ಕ್ರೌರ್ಯವನ್ನು ಸಿನಿಮಾ ಮಾಡಿ ಮೂರೂ ಸಲ ಗೆದ್ದವರು ನಿರ್ದೇಶಕ ಶ್ರೀನಿವಾಸ ರಾಜು.

 

ಎದೆಗಾರಿಕೆ:
ಈ ಸಿನಿಮಾ ಅಗ್ನಿ ಶ್ರೀಧರ್ ಅವರದ್ದೇ ಸ್ಟೋರಿ, ಅವರೇ ಬರೆದಿರುವುದು, ಅವರದ್ದೇ ಜೀವನ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಶ್ರೀಧರ್ ಅವರೇ ಬರೆದಿದ್ದಾರೆ. ಆದಿತ್ಯ, ಆಕಾಂಕ್ಷಾ, ಅತುಲ್ ಕುಲಕರ್ಣಿ, ಅಚ್ಚುತಕುಮಾರ್, ಧರ್ಮ, ಸೃಜನ್ ಲೋಕೇಶ್, ಶರತ್ ಲೋಹಿತಾಶ್ವ ಚಿತ್ರದಲ್ಲಿ ಅಭಿನಯ ಮಾಡಿದ್ದರು. ಸುಮನಾ ಕಿತ್ತೂರು ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದರು.


ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ:
ದರ್ಶನ್ ನಟಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಭಾರಿ ಬಜೆಟ್‌ಲ್ಲಿ ಮೂಡಿ ಬಂದಿತ್ತು. ಈ ಸಿನಿಮಾಗಾಗಿ ಮೂವತ್ತು ಕೋಟಿ ಖರ್ಚು ಮಾಡಿದ್ದರು ನಿರ್ಮಾಪಕ ಆನಂದ ಅಪ್ಪುಗೋಳ. ಕನ್ನಡದಲ್ಲಿ ಇದು ಭಾರೀ ಬಜೆಟ್ ಚಿತ್ರವೆಂದು ದಾಖಲಾಗಿದೆ. ಏಳು ನಿಮಿಷದ ಮತ್ತು ಹದಿನಾಲ್ಕು ನಿಮಿಷದ ಎರಡು ಯುದ್ಧಗಳನ್ನು ಚಿತ್ರೀಕರಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top