ಸಿನಿಮಾ

ನಟಭಯಂಕರ ವಜ್ರಮುನಿ ತೆರೆಯ ಹಿಂದೆ ಅನುಭವಿಸಿದ ಭಯಂಕರ ನೋವಿನ ಕಥೆ ಕೇಳಿದ್ರೆ ಖಂಡಿತಾ ನೀವು ಅಯ್ಯೋ ಪಾಪ ಅಂತೀರಾ .

ವಜ್ರಮುನಿ ಅವ್ರು ಕನ್ನಡ ಸಿನಿಮಾ ರಂಗದ ಹಿರಿಯ ನಟರಾಗಿದ್ದರು. ಕನ್ನಡ ಸಿನಿಮಾಗಳಲ್ಲಿ ಇವರು ವಹಿಸಿದ ಖಳನಾಯಕನ ಪಾತ್ರ ಹೆಚ್ಚು ಪ್ರಸಿದ್ಧಿ ಪಡೆಯಿತು, ಜನಮನದಲ್ಲಿ ಅಚ್ಚಳಿಯದೆ ಉಳಿಯಿತು. ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ.  ವಿದ್ಯಾಭ್ಯಾಸದ ಕಡೆಗೆ ಗಮನಹರಿಸದೇ ನಾಟಕರಂಗದೆಡೆ ಒಲವು ತೋರಿಸಿ ಕಾಲೇಜು ವಿದ್ಯಾಭ್ಯಾಸವನ್ನು ತೊರೆದು ನಾಟಕಕ್ಕೆ ಇಳಿದರು. ಕಣಗಾಲ ಪ್ರಭಾಕರ ಶಾಸ್ತ್ರೀಗಳ “ಪ್ರಚಂಡ ರಾವಣ” ನಾಟಕದಲ್ಲಿ ಇವರು ಅಭಿನಯಿಸಿದ ರಾವಣನ ಪಾತ್ರ ಅವರಿಗೆ ವಿಶೇಷ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

 

 

1967 ನಲ್ಲಿ ಪುಟ್ಟಣ್ಣನವರ “ಸಾವಿರ ಮೆಟ್ಟಿಲು” ಸಿನಿಮಾ ಮುಖೇನ ನಟನಾಗಿ ಸಿನಿಮಾ ರಂಗ ಪ್ರವೇಶಿಸಿದರಾದರೂ ಆ ಚಿತ್ರ ರಿಲೀಸ್ ಆಗಿಲ್ಲ ಎಂಬ ಕೊರಗಲಿದ್ದರು ನಂತರ ಪುಟ್ಟಣ್ಣನವರೇ ನಿರ್ದೇಶಿಸಿದ “ಮಲ್ಲಮ್ಮನ ಪವಾಡ” ಸಿನಿಮಾದಲ್ಲಿ ನಟಿಸಿ ಬಿಡುಗಡೆಯೂ ಕಂಡು, ತಮ್ಮ ಮೊದಲನೆಯ ಚಿತ್ರದಲ್ಲಿ ಚಿತ್ರರಸಿಕರ , ಪ್ರೇಕ್ಷಕರ , ವಿಮರ್ಶಕರ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದರು ವಜ್ರಮುನಿ.  ನಂತರ ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು . ಒಂದೊಂದೆ ಯಶಸ್ಸಿನ ಮೆಟ್ಟಿಲನ್ನೇರಲು ಮುಂದಾದ ವಜ್ರಮುನಿ ಗೆಜ್ಜೆಪೂಜೆ , ನಾಗರಹಾವು , ಉಪಾಸನೆ, ಮಯೂರ , ಬಹದ್ದೂರ್ ಗಂಡು, ಭರ್ಜರಿ ಭೇಟೆ, ಪ್ರೇಮದ ಕಾಣಿಕೆ ಶಂಕರ್ ಗುರು, ಬಂಗಾರದ ಮನುಷ್ಯ, ಗಿರಿಕನ್ಯೆ, ಆಕಸ್ಮಿಕ, ಭಕ್ತ ಕುಂಬಾರ ಮೊದಲಾದ ಚಿತ್ರಗಳು ವಜ್ರಮುನಿಯವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಸಿನಿಮಾ, ಅದಷ್ಟೇ ಅಲ್ಲ ಬೆತ್ತಲೆ ಸೇವೆ ಸಿನಿಮಾ ದಲ್ಲಿ ಅದ್ಬುತ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನೂ ಗಳಿಸಿದರು.

ವಜ್ರಮುನಿ ಅವರು ಕೊನೆಗಾಲದಲ್ಲಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಅವರ ಎರಡೂ ಕಿಡ್ನಿಗಳು ಕೂಡ ಫೇಲ್ ಆಗಿದ್ದವು. ಮುಖ ಕಪ್ಪು ಬಣ್ಣಕ್ಕೆ ತಿರುಗಿತ್ತು. ಅವರ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ, ಕೂತರೆ ನಿಲ್ಲುವುದು ಕಷ್ಟ, ನಿಂತರೆ ಕೂರುವುದೇ ಯಮಯಾತನೆ.

ವಜ್ರಮುನಿ ಅವರು ತಮ್ಮ ಈ ದುಸ್ಥಿತಿಯ ಬಗ್ಗೆ ಅವರು ಅನೇಕರ ಬಳಿ ಹೇಳಿಕೊಂಡಿದ್ದರು. ತಾವು ಇನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಕಿಡ್ನಿ ಡಯಾಲಿಸಿಸ್ ಮಾಡಿಸಿಕೊಂಡ ದಿನಗಳಂತೂ ಇನ್ನೂ ಭೀಕರವಾಗಿ ಇದ್ದವು. ಇಡೀ ದಿನ ನೋವಿನಿಂದ ಬಳಲುತ್ತಿದ್ದರು. ನಿದ್ದೆ ಇಲ್ಲದೆ ಚಡಪಡಿಸುತ್ತಿದ್ದರು. ತಮ್ಮ ಸ್ಥಿತಿಯನ್ನ ನೆನೆದು ಬದುಕು ಸಾಕಾಗಿಹೋಗಿದೆ ಅಂತ ಕೊರಗುತ್ತಿದ್ರು. ವಜ್ರಮುನಿ ಅವರು ಜನವರಿ 5 2006 ರಂದು ತೀರಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top