ಸಿನಿಮಾ

ವೀಕೆಂಡ್ ವಿಥ್ ರಮೇಶ್ ಷೋ ಮತ್ತೆ ಶುರುವಾಗೋದು ಯಾವಾಗ- ಈ ಬಗ್ಗೆ ಸ್ವತಃ ರಮೇಶ್ ಅವರೇ ಹೇಳಿದ್ದೇನು.

ರಮೇಶ್ ಅರವಿಂದ್ ಅವರು ಕನ್ನಡ ಸಿನಿಮಾ ರಂಗದ ಪ್ರತಿಭಾವಂತ ನಟರಲ್ಲಿ ಒಬ್ಬರು. ಕೆ.ಬಾಲಚಂದರ್ ಅವರು ನಿರ್ದೇಶಿಸಿರುವ ಸುಂದರ ಸ್ವಪ್ನಗಳು ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದರು. ಅದಕ್ಕೂ ಮೊದಲು ಬೆಂಗಳೂರು ದೂರದರ್ಶನದಲ್ಲಿ ‘ಪರಿಚಯ’ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅನೇಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಯಶಸ್ವಿಯಾಗಿದ್ದಾರೆ. ರಾಮ ಶಾಮ ಭಾಮ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾ ಜೊತೆಗೆ ಟಿವಿ ಷೋ ಮೂಲಕವೂ ಕನ್ನಡಿಗರನ್ನು ತಲುಪುತ್ತಿರುವ ರಮೇಶ್ ಅವರು ಕಳೆದ ವರ್ಷ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬಗ್ಗೆ ನಾಡಿನ ಜನತೆಗೆ ತಿಳಿಸಿದ್ದರು. ಈ ವರ್ಷ ಕನ್ನಡದ ಕೋಟ್ಯಧಿಪತಿ ಎಂಬ ಷೋ ಮಾಡುತ್ತಿದ್ದು ಇದರನ್ನು ಕೂಡ ಮಿಂಚುತ್ತಿದ್ದಾರೆ. ಇನ್ನು ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನು ಮತ್ತೆ ಯಾವಾಗ ಶುರು ಮಾಡ್ತೀರಾ ಎಂದು ರಮೇಶ್ ಅವರಿಗೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆ ಮಾಡುತ್ತಿದ್ದರು. ಆದರೆ ರಮೇಶ್ ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಸದ್ಯ ರಮೇಶ್ ಈ ಬಗ್ಗೆ ಮಾತನಾಡಿದ್ದಾರೆ.

 

 

 

ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ರಮೇಶ್ ಅರವಿಂದ್, ಸದ್ಯ ನಾನು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಮಾಡುತ್ತಿದ್ದು ನನ್ನ ಏಕಾಗ್ರತೆ ಹೆಚ್ಚಾಗಿ ಷೋ ಮೇಲೆ ಇದೆ. ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮ ಬೇರೆ ಚಾನೆಲ್ ಷೋ ಆಗಿದ್ದು ಅಲ್ಲಿ ಕೂಡ ನಾನು ಉತ್ತಮ ಭಾಂದವ್ಯ ಹೊಂದಿದ್ದು ಕನ್ನಡದ ಕೋಟ್ಯಧಿಪತಿ ಮುಗಿದ ಬಳಿಕ ನೋಡುತ್ತೇನೆ ಎಂದು ಹೇಳಿದ್ದಾರೆ.

ರಮೇಶ್ ಅವರ ಮಾತಿನ ದಾಟಿ ಗಮನಿಸುತ್ತಿದ್ದರೆ ಕನ್ನಡದ ಕೋಟ್ಯಧಿಪತಿ ಷೋ ಮುಗಿದ ಕೂಡಲೇ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮ ಶುರು ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top