ವಿಶೇಷ

ಪರಿಸರ ಹಾಳುಗೆಡಿಸುವ ಪ್ಲಾಸ್ಟಿಕನಿಂದ ಪರಿಸರವನ್ನ ಕಾಪಾಡಿದ 7 ಭಾರತೀಯರ ಬಗ್ಗೆ ತಿಳ್ಕೊಳ್ಳಿ

1.ಏಂಜೆಲಿನಾ ಅರೋರಾ:

15 ವರ್ಷ ವಯಸ್ಸಿನ ಏಂಜೆಲಿನಾ ಅರೋರಾ ಎಂಬ ಹುಡುಗಿ ಪರಿಸರ ಸ್ನೇಹಿ ಪ್ಲಾಸ್ಟಿಕ್ ತಯಾರು ಮಾಡಿದ್ದಾರೆ. ನದಿ ಹಾಗು ಸಮುದ್ರದಲ್ಲಿರುವ ಸಿಗುವ ಸಿಗಡೆಯಿಂದ ಪ್ಲಾಸ್ಟಿಕ್ ತಯಾರು ಮಾಡಿದ್ದಾರೆ.

 

2.ಸತೀಶ್ ಕುಮಾರ್ :

ಪರಿಸರ ಹಾಳು ಮಾಡುವ ಪ್ಲಾಸ್ಟಿಕ್‌ ನ್ನು ಇತರ ಉಪಯೋಗಗಳಿಗೆ ಬಳಸಿಕೊಳ್ಳುವುದು ಉತ್ತಮವಾದ ನಡೆ. ತೆಲಂಗಾಣ ರಾಜ್ಯದ ಹೈದರಾಬಾದ್ ಎಂಜಿನಿಯರ್ ಒಬ್ಬರು ಅದೇ ಕೆಲಸ ಮಾಡುತ್ತಿದ್ದಾರೆ. ಸತೀಶ್ ಕುಮಾರ್ 2016ರಿಂದ ಪ್ಲಾಸ್ಟಿಕ್‌ನ್ನು ಇಂಧನವಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಈ ಮೂಲಕ ಅವರು ಇದುವರೆಗೆ ಒಟ್ಟು 50 ಟನ್ ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

3.ರಾಜಗೋಪಾಲನ್ ವಾಸುದೇವನ್:

ಪ್ಲಾಸ್ಟಿಕ್ ರಸ್ತೆ ಎಲ್ಲಾದರೂ ಕೇಳಿದ್ದೀರಾ.? ಮೇಘಾಲಯ ರಾಜ್ಯದಲ್ಲಿ ಇಂಥ ರಸ್ತೆ ನಿರ್ಮಾಣವಾಗಿದೆ.

ನಾವು ಬಳಸುವ ಪ್ಲಾಸ್ಟಿಕ್ ನಿಂದಾಗಿ ನಿಸರ್ಗ ಹಾಳಾಗುತ್ತಿದೆ. ಪ್ರಾಣಿಗಳು ಸಾಯುತ್ತಿವೆ, ಭೂಮಿ ಬರಡಾಗುತ್ತಿದೆ. ಇದನ್ನು ಆಲೋಚಿಸಿದ ಮಧುರೈನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮೆಸ್ಟ್ರಿ ಉಪನ್ಯಾಸಕರಾಗಿರುವ ರಾಜಗೋಪಾಲನ್ ವಾಸುದೇವನ್ ಪ್ಲಾಸ್ಟಿಕ್ ಬಳಸಿ ಹಾಕಿ ರೋಡ್ ಮಾಡುವ ಬಗ್ಗೆ ಆಲೋಚಿಸಿದರು ಹಾಗೂ ಅದನ್ನು ಸಂಬಂಧಪಟ್ಟವರ ಜೊತೆ ಚರ್ಚಿಸಿ ಅದನ್ನು ಜಾರಿಗೊಳ್ಳುವಂತೆ ಮಾಡಿದ್ದಾರೆ

 

4.ಅನುರಾಗ್ ಮತ್ತು ಸತ್ಯೇಂದ್ರ ಮೀನಾ

ಖಾಲಿ ಆಗಿರುವ ನೀರಿನ ಬಾಟಲ್ ಗಳನ್ನು ನಾವು ಅಲ್ಲಿ ಇಲ್ಲಿ ಎಸೆದು ಕಸದ ರಾಶಿ ಮಾಡಿ ಪರಿಸರ ಹಾಲು ಮಾಡುತ್ತೇವೆ. ನಿಜಕ್ಕೂ ಈ ಪ್ಲಾಸ್ಟಿಕ್ ಪರಿಸರಕ್ಕೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಇದನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಐಐಟಿ ಬಾಂಬೆಯ ಅಂತಿಮ ವರ್ಷದ ವಿದ್ಯಾರ್ಥಿಗಳು ತಾತ್ಕಾಲಿಕ ಪರಿಹಾರವನ್ನು ಈ ಸಮಸ್ಯಗೆ ಕಂಡುಕೊಂಡಿದ್ದು ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವ ಅದ್ಭುತ ಯೋಜನೆ ತಯಾರುಮಾಡಿದ್ದಾರೆ.

ಇವರು “ಸ್ವಚ್ಛ್ ಮೆಶೀನ್” ಎಂಬ ಹೆಸರಿನ ಮಷಿನ್ ಅಭಿವೃದ್ಧಿಪಡಿಸಿದ್ದು ಇದಕ್ಕೆ ನೀವು ಉಪಯೋಗಿಸಿದ ನೀರಿನ ಬಾಟಲ್ ಹಾಕಿ ಶುದ್ಧವಾದ 300 ಎಮ್‌ಎಲ್ ನೀರನ್ನು ಪಡೆದುಕೊಳ್ಳಬಹುದು.

 

5.ನಾರಾಯಣ ಪ್ರಿಸಪಥಿ :

ಇತ್ತೀಚಿನ ದಿನಗಳಲ್ಲಿ ಹೋಟೆಲ್ ಹಾಗು ಪಾರ್ಸೆಲ್ ಫುಡ್ ನಲ್ಲಿ ಪ್ಲಾಸ್ಟಿಕ್ ಚಮಚ ಬಳಕೆ ಮಾಡುವುದು ಹೆಚ್ಚಾಗಿದೆ. ಇದರಿಂದ ಪರಿಸರ ಹಾನಿ ಆಗುತ್ತಿದೆ. ಇದನ್ನು ಹೋಗಲಾಡಿಸಲು ನಾರಾಯಣ ಪ್ರಿಸಪಥಿ ಎಂಬುವವರು ಆಹಾರ ಪದರ್ತಿಗಳಿಂದ ಮಾಡಿದ ತಿನ್ನಬಹುದಾದ ಚಮಚ ಮಾಡಿದ್ದಾರೆ.

 

 

6.ಅಫ್ರೋಜ್ ಷಾ:

ಬಾಂಬೆ ಉಚ್ಚ ನ್ಯಾಯಾಲಯದ ವಕೀಲ 33 ವರ್ಷದ ಅಫ್ರೋಜ್ ಷಾ, ಹಿಂದೊಮ್ಮೆ ಕಸವೇ ತುಂಬಿದ್ದ ವರ್ಸೋವಾ ಬೀಚ್‌ ವನ್ನು ಸ್ವಚ್ಛಗೊಳಿಸಿ ಸುಂದರ ತಾಣವನ್ನಾಗಿಸಿದ್ದಾರೆ. ಶಾ ಜೊತೆಗೆ 40 ಜನರ ಇತರ ವರ್ಸೋವಾ ನಿವಾಸಿಗಳೂ ಸೇರಿಕೊಂಡು ವಾರಕ್ಕೊಮ್ಮೆ ಸ್ವಚ್ಛತಾ ಆಂದೋಲನ ನಡೆಸಿದರು.

 

7.ಸಂತ್ ಬಲ್‍ಬೀರ್ ಸಿಂಗ್ ಸಿಚೇವಲ್:
2000 ಇಸವಿಯಲ್ಲಿ ಇಕೋ ಬಾಬಾ ಎಂದೇ ಕರೆಯಲ್ಪಡುವ ಸಂತ್ ಬಲ್‍ಬೀರ್ ಸಿಂಗ್ ಸಿಚೇವಲ್ ಈ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಿದ್ದು, ಈಗ ತಮ್ಮ ಕಾರ್ಯದಲ್ಲಿ ಯಶ ಕಂಡಿದ್ದಾರೆ. 160 ಕಿಮೀ ಉದ್ದವಿರುವ ಈ ನದಿಯಿಂದ ಟನ್‍ಗಟ್ಟಲೆ ಮಾಲಿನ್ಯವನ್ನು ಬಾಬಾ ಮತ್ತು ಅವರ ಸಂಗಡಿಗರು ಸೇರಿ ಸ್ವಚ್ಛಗೊಳಿಸಿದ್ದಾರೆ. ವಿಶೇಷ ಎಂದರೆ ಸರ್ಕಾರವಾಗಲೀ, ಇನ್ನಿತರ ಯಾವುದೇ ಸಂಘ ಸಂಸ್ಥೆಗಳ ಸಹಾಯವಿಲ್ಲದೆ ಇವರು ನದಿಯಿಂದ ಹೂಳೆತ್ತುವ ಕಾರ್ಯವನ್ನು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top