fbpx
ಸಿನಿಮಾ

ಶ್ರೀರೆಡ್ಡಿಯ ಹೊಸ ಬಾಂಬ್, ಬಯಲಾಯಿತು ಸ್ಟಾರ್ ನಟಿ ಖುಷ್ಬೂರವರ ಪತಿ ಸುಂದರ್ ಬಗ್ಗೆಗಿನ ಸ್ಫೋಟಕ ಮಾಹಿತಿ.

ಶ್ರೀರೆಡ್ಡಿ ಸುಮಾರು ತಿಂಗಳುಗಳಿಂದ ತನ್ನ ಕಾಂಟ್ರೊವರ್ಸಿಯಲ್ ಹೇಳಿಕೆ ಗಳಿಂದ ಜನರಿಗೆ ಬಹಳ ಪರಿಚಿತಳಾಗಿದ್ದಾಳೆ .ದಿನಕ್ಕೆ ಒಬ್ಬೊಬ್ಬರ ಮೇಲೆ ಬಾಂಬ್ ಸಿಡಿಸುತ್ತಿರುವ ಶ್ರೀ ರೆಡ್ಡಿ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳುಸುತ್ತಿದ್ದಾಳೆ.ಇಷ್ಟುದಿನಗಳ ಕಾಲ ತೆಲುಗು ಚಿತ್ರರಂಗದವರನ್ನು ಟಾರ್ಗೆಟ್ ಮಾಡಿದ ಶ್ರೀರೆಡ್ಡಿಯ ಕಣ್ಣು ಈಗ ತಮಿಳು ಚಿತ್ರರಂಗದವರ ಮೇಲೆ ಬಿದ್ದಿದೆ.ಇಷ್ಟು ದಿನ ಶ್ರೀರೆಡ್ಡಿ ಆರೋಪ ಮಾಡಿದವರು ಪವನ್ ಕಲ್ಯಾಣ್ ,ನಾನಿ ,ಶ್ರೀಕಾಂತ್ ಸಂದಿಪ್ ಕಿಷ್ಣಾಲ್ ಈಗ ಇವರ ಜೊತೆ ಹೊಸ ಸೇರ್ಪಡೆ ಖುಷ್ಬೂರವರ ಪತಿ , ನಿರ್ದೇಶಕ ಕಮ್ ನಟ ಸುಂದರ್ ಸಿ.

 

 

ಶ್ರೀರೆಡ್ಡಿ ನಿರ್ದೇಶಕ ಕಮ್ ನಟ ಸುಂದರ್ ಸಿ. ರವರ ಬಗ್ಗೆ ಒಂದು ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ ಇದರ ಬಗ್ಗೆ ಹೇಳುವ ಭರದಲ್ಲಿ ಅರನ್ ಮನೈ’ ಚಿತ್ರದ ಚಿತ್ರೀಕರಣ ವೇಳೆ ನಡೆದ ಘಟನೆಯನ್ನು ಹೇಳಿಕೊಂಡಿದ್ದಾರೆತನ್ನನ್ನು ದುರ್ಬಳಕೆ ಮಾಡಿಕೊಳ್ಳುವ ಯತ್ನ ಆಗಿತ್ತು ಎಂದು ಬಾಂಬ್ ಸಿಡಿಸಿದ್ದಾರೆ. ಏನಿದು ಪ್ರಕರಣ? ನೀವೇ ನೋಡಿ

ಅರನ್ ಮನೈ ಚಿತ್ರದ ಶೂಟಿಂಗ್ ಹೈದ್ರಾಬಾದ್ ನಲ್ಲಿ ನಡೆಯುತ್ತಿತ್ತು. ಆಗ ನನಗೆ ಗಣೇಶ್ ಎಂಬುವರು ಫೋನ್ ಮಾಡಿದ್ರು. ಅವರು ಆ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಗೊತ್ತಿರುವವರಿಂದ ನಂಬರ್ ಪಡೆದುಕೊಂಡಿದ್ದ ಅವರು ಫೋನ್ ಮಾಡಿದ ನಂತರ ನಾನು ಸೆಟ್ ಗೆ ಹೋದೆ. ಅಲ್ಲಿ ಸುಂದರ್ ಸಿ ಅವರನ್ನ ಪರಿಚಯ ಮಾಡಿಕೊಟ್ಟರು. ಜೊತೆಗೆ ನನ್ನ ಫೇಸ್ ಬುಕ್ ಫ್ರೆಂಡ್ ಸೆಂಥಿಲ್ ಕುಮಾರ್ ಅವರನ್ನ ಕೂಡ ಭೇಟಿ ಮಾಡಿದೆ.” ಎಂದ್ರು ಶ್ರೀರೆಡ್ಡಿ

‘ಮುಂದಿನ ಸಿನಿಮಾದಲ್ಲಿ ನಿನಗೆ ಮುಖ್ಯಪಾತ್ರದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಹೇಳಿದರು. ಮರುದಿನ ನನ್ನನ್ನು ‘ನೊವೊಟೆಲ್’ಗೆ ಬರಲು ಫೋನ್ ಮಾಡಿದರು. ಯಾಕಂದ್ರೆ, ಮುಂದಿನ ಚಿತ್ರದಲ್ಲಿ ಅವಕಾಶ ಕೊಡಬೇಕಂದ್ರೆ, ಸುಂದರ್ ಸಿ ಅವರ ಜೊತೆ ಲೈಂಗಿಕವಾಗಿ ಕಾಂಪ್ರುಮೇಸ್ ಆಗಬೇಕು ಎಂದು ಹೇಳಿದರು.

ಶ್ರೀರೆಡ್ಡಿಯವರ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸುಂದರ್ ಸಿ ಶ್ರೀರೆಡ್ಡಿ ಆರೋಪದಲ್ಲಿ ಯಾವ ಸತ್ಯವಿಲ್ಲ. ನಾನು ಕಾನೂನು ಕ್ರಮ ಜರುಗಿಸುತ್ತೇನೆ. ಶೀಘ್ರದಲ್ಲೇ ಪೊಲೀಸ್ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top