ಕ್ರಿಕೆಟ್

ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್ ಪಡೆದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್- ವಿಡಿಯೋ ವೈರಲ್.

ಕ್ರಿಕೆಟ್ ದೇವರು ಎಂದೇ ಖ್ಯಾತಿಯಾಗಿರುವ ಸಚಿನ್​ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್​ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಟೀಂ ಇಂಡಿಯಾ ಅಂಡರ್ 19 ತಂಡದಲ್ಲಿ ಆಡುತ್ತಿರುವ ಅರ್ಜುನ್ ಶ್ರೀಲಂಕಾ ವಿರುದ್ಧದ ಮೊದಲ ಅಂಡರ್ 19 ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡಿ ತಮ್ಮ ಎರಡನೇ ಓವರ್ ನಲ್ಲಿ ಲಂಕಾ ಆಟಗಾರ ಕಮಿಲ್’ರನ್ನು LBW ಬಲೆಗೆ ಬೀಳಿಸಿದರು.

 

 

ಎಡಗೈ ವೇಗದ ಬೌಲರ್ ಆಗಿರುವ 18 ವರ್ಷದ ಅರ್ಜುನ್ ಕಳೆದ ಜುಲೈನಲ್ಲಿ ಶ್ರೀಲಂಕಾ ಪ್ರವಾಸಕ್ಕಾಗಿ ಪ್ರಕಟಿಸಲಾದ 19 ವರ್ಷದೊಳಗಿನವರ ಭಾರತ ತಂಡದಲ್ಲಿ ಅರ್ಜುನ್‌ ಸ್ಥಾನ ಪಡೆದಿದ್ದರು. ಅರ್ಜುನ್ ಮೊದಲ ವಿಕೆಟ್ ಕಬಳಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.,

ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ನಿಪುಣ್ ಧನಂಜಯ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತ ತಂಡದ ನಾಯಕ ಅಜುಜ್ ರಾವತ್ ಆರಂಭಿಕ ಬೌಲರ್ ಆಗಿ ಅರ್ಜುನ್ ತೆಂಡೂಲ್ಕರ್ ಅವರ ಕೈಗೆ ಚೆಂಡನ್ನಿಟ್ಟರು. ಉತ್ತಮವಾಗಿ ಬೌಲಿಂಗ್ ಮಾಡಿದ ಅರ್ಜುನ್ ತಮ್ಮ ಎರಡನೇ ಓವರಿನ ಐದನೇ ಎಸೆತದಲ್ಲಿ ಬ್ಯಾಟ್ಸ್ ಮ್ಯಾನ್ ನನ್ನ LBWಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top