ಆರೋಗ್ಯ

ಬೆನ್ನುನೋವು, ಸೊಂಟನೋವು ಮಂಗಮಾಯ ಮಾಡಬಲ್ಲ ಮೆಂತ್ಯ ಲೇಹ ಮಾಡುವ ವಿಧಾನ ತಿಳ್ಕೊಳ್ಳಿ

ಸಾಮಾನ್ಯವಾಗಿ ಮಲೆನಾಡಿನಲ್ಲಿ ಲೇಹಗಳನ್ನು ಕೊಡ ಬೇಕಾದರೆ ಮೆಂತ್ಯ ಲೇಹವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುತ್ತಾರೆ .ಬಾಣಂತಿರು ಮತ್ತು ಬೆನ್ನು ನೋವು ,ಸೊಂಟನೋವು , ಇರುವಂತವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಲೇಹವನ್ನು ತೆಗೆದುಕೊಳ್ಳುವುದರಿಂದ ನೋವುಗಳು ಕಡಿಮೆ ಆಗುತ್ತದೆ.ಬಾಣಂತಿರು ಮೆಂತ್ಯ ಲೇಹವನ್ನು ತೆಗೆದುಕೊಂಡರೆ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .

 

 

ಮೆಂತ್ಯ ಲೇಹವನ್ನು ಮಾಡಲು ಬೇಕಾದ ಪದಾರ್ಥಗಳು:

ಮೆಂತ್ಯ – 1/4 ಕಪ್
ತುಪ್ಪ – 1/4 ಕಪ್
ಬೆಲ್ಲ – 1/2 ಕಪ್
ನೀರು – ಒಂದು 1/4 ಕಪ್

 

ಮಾಡುವ ವಿಧಾನ :

ನಾಳೆ ಮೆಂತ್ಯ ಲೇಹವನ್ನು ಮಾಡಬೇಕಾದರೆ ಹಿಂದಿನ ದಿನವೇ ಮೆಂತ್ಯವನ್ನು ನೆನಸಿಡಬೇಕು ಅದನ್ನು ನೆನೆಸಿದ ನೀರು ತೆಗೆದು ಮೆಂತ್ಯವನ್ನು ಮಿಕ್ಸಿ ಜಾರ್‍ಗೆ ಹಾಕಿ ಮತ್ತು ನೆನೆಸಿದ ನೀರನ್ನು ಸ್ವಲ್ಪ ಹಾಕಿ ಚೆನ್ನಾಗಿ ನುಣ್ಣಗೆ ಬ್ಲೆಂಡ್ ಮಾಡಿಕೊಳ್ಳಬೇಕು .ಸ್ಟೋವ್ ಮೇಲೆ ಪಾನ್ ಇಟ್ಟು ಅದರಲ್ಲಿ ನುಣ್ಣಗೆ ಬ್ಲೆಂಡ್ ಮಾಡಿರುವ ಮೆಂತ್ಯ ಮತ್ತು ನೀರು ಹಾಕಿ 2 ರಿಂದ 3 ನಿಮಿಷದವರೆಗೆ ಚೆನ್ನಾಗಿ ಬೈಯಿಸಿಕೊಳ್ಳಬೇಕು ನಂತರ ತುಪ್ಪವನ್ನು ಹಾಕಿ ತಳ ಇಡಿಯಾದಂತೆ ಮಿಶ್ರಣವನ್ನು ಕಲಸುತ್ತಾ ಬನ್ನಿ ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ ನಂತರ ತುಪ್ಪವನ್ನು ತಳ ಬುಡುತ್ತ ಬಂದರೆ ಮೆಂತ್ಯ ಲೇಹ ರೆಡಿ ಆಗಿದೆ .ಬಳಿಕ ಪ್ಲೇಟ್ ಗೆ ಹಾಕಿ ಸರ್ವ್ ಮಾಡಿದರೆ ಮೆಂತ್ಯ ಲೇಹ ಸವಿಯಲು ಸಿದ್ಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top