fbpx
ಸಿನಿಮಾ

ಮುಂದಿನ ಬಿಗ್​ಬಾಸ್’ಗೆ ಬರ್ತಿದ್ದಾರೆ ಖ್ಯಾತ ಅಡಲ್ಟ್​ ಸಿನಿಮಾ ನಟ.

ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಶುರು ಆಗಿದೆ. ಎರಡು ತಿಂಗಳ ನಂತರ ಸೆಪ್ಟಂಬರ್ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಆರಂಭವಾಗುವ ಸಾಧ್ಯತೆ ಇದೆ. ಈ ನಡುವೆ ಹಿಂದಿ ಬಿಗ್ ಬಾಸ್ ಕೂಡ ತನ್ನ ಕೆಲಸವನ್ನು ಭರದಿಂದ ನಡೆಸುತ್ತಿದೆ.

ಹಿಂದಿ ಬಿಗ್ ಬಾಸ್ 12 ನೇ ಸೀಸನ್ ಗಾಗಿ ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ಶುರುವಾಗಿದೆ. ಮೂಲಗಳ ಮಾಹಿತಿ ಪ್ರಕಾರ ಈ ಬಾರಿ ಬಿಗ್​ಬಾಸ್​ ಮನೆಗೆ ಬ್ರಿಟನ್​ನ ಅಡಲ್ಟ್​ ಸಿನಿಮಾ ನಟನೋರ್ವನ ಪ್ರವೇಶ ಆಗಲಿದೆ ಎಂದು ತಿಳಿದು ಬಂದಿದೆ. ಅಡಲ್ಟ್​ ಸ್ಟಾರ್​ ಡ್ಯಾನಿ ಡಿ ಬಿಗ್​ಬಾಸ್​ ಸ್ಪರ್ಧಿ ಅಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

 

 

 

ಅಡಲ್ಟ್​ ಸ್ಟಾರ್​ ಡ್ಯಾನಿ ಡಿ ಅವರ ಮ್ಯಾನೇಜರ್​ ಜತೆ ಈಗಾಗಲೇ ಬಿಗ್​ಬಾಸ್​ ತಂಡ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ನೀಲಿಚಿತ್ರ ನಟ ಒಂದು ಕಂಡೀಷನ್ ಇಟ್ಟಿದ್ದು ಅವರ ಹೇಳತಿ, ನಟಿ ಮಹಿಕಾ ಶರ್ಮಾ ಬಿಗ್​ಬಾಸ್​ಗೆ ಬಂದ್ರೆ ಮಾತ್ರ ಇವರು ಕೂಡ ಓಕೆ ಅನ್ನುತ್ತಾರೆ ಎಂದು ಹೇಳಲಾಗುತ್ತಿದೆ.

ಡ್ಯಾನಿ ಡಿ ಮತ್ತು ಮಹಿಕಾ ಸದ್ಯ ಮಾಡರ್ನ್​ ಕಲ್ಚರ್​ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಮಹಿಕಾ ಶರ್ಮಾ ಈ ಮೊದಲು ಎಫ್​ಐಆರ್ ಮತ್ತು ರಾಮಾಯಣ ದಂತಹ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top