ದೇವರು

ಅನೇಕ ಪುರಾಣ ಕಥೆಗಳನ್ನು ಒಳಗೊಂಡ ಕೇವಲ 6 ತಿಂಗಳು ಮಾತ್ರ ದೇವರ ದರ್ಶನ ಕೊಟ್ಟು ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡೋ ಈ ಮಹಿಮಯುತ ದೇವಾಲಯದ ಬಗ್ಗೆ ಗೊತ್ತಾದ್ರೆ ಖಂಡಿತಾ ನೀವು ಒಂದ್ಸಲ ಭೇಟಿ ಮಾಡ್ತೀರಾ .

ಈ ಗುಡಿಯಲ್ಲಿ ಭಕ್ತರನ್ನು ಆರು ತಿಂಗಳು ಮಾತ್ರ ದೇವರ ದರ್ಶನ ಮಾಡಲು ಅನುಮತಿಸುತ್ತಾರೆ ಯಾಕೆ ?ಆ ದೇವಸ್ಥಾನ ಯಾವುದು ? ಅಲ್ಲಿನ ವಿಶೇಷತೆ ಏನು ?

ಭಾರತ ದೇಶದಲ್ಲಿ ಅನೇಕ ದೇವಸ್ಥಾನಗಳಿವೆ ಅದರ ಜೊತೆಗೆ ಅದೆಷ್ಟೋ ವಿಚಿತ್ರಗಳು ಮತ್ತು ವಿಶೇಷತೆಗಳು ಸಹ ಇರುತ್ತವೆ. ಅಂತಹ ದೇವಸ್ಥಾನಗಳ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ…
ಆ ತೀರ್ಥ ಸ್ಥಳವೇ ನಲ್ಲಿತೀರ್ಥಸ್ಥಳ ದೇವಾಲಯ. 1480ನೇ ವರ್ಷದ ಪುರಾತನ ಕಾಲಕ್ಕೆ ಸೇರಿದ್ದು.ನಳ್ಳಿ ಎಂದರೆ ತಮಿಳಿನಲ್ಲಿ ಕೊಬ್ಬರಿ ಕಾಯಿ ಎಂದು ಅರ್ಥ. ಇದರಿಂದ ಗುಹೆಯೊಳಗೆ ನೀರಿನ ಬಿಂದು ಬೀಳುವುದರಿಂದ ಈ ದೇವರಿಗೆ ನಲ್ಲಿತೀರ್ಥ ಎಂದು ಹೆಸರು ಬಂತು. ಈ ದೇವಸ್ಥಾನದ ಸ್ಥಳ ಪುರಾಣ ಕಥೆ ಹೀಗಿದೆ .

ಅರುಣಾಸರ ಎಂಬ ರಾಕ್ಷಸ ಜಾಬಿಲಿ ಎಂಬ ಋಷಿಯ ಹತ್ತಿರ ಪವಿತ್ರವಾದ ಗಾಯಿತ್ರಿ ಮಂತ್ರ ಪಠಿಸುತ್ತಿದ್ದ.ಗಾಯಿತ್ರಿ ಮಂತ್ರದ ಶಕ್ತಿಯನ್ನು ಪಡೆದು ಅರುಣಾಸರ ಗಾಯಿತ್ರಿ ಮಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಪ್ರಾರಂಭ ಮಾಡಿದನಂತೆ.

 

 

ಅರುಣಾಸರ ಗಾಯಿತ್ರಿ ಮಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಪ್ರಾರಂಭ ಮಾಡಿದಾಗ ಪ್ರಪಂಚವನ್ನೇ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಪ್ರಯತ್ನ ಪಟ್ಟನು . ಅರುಣಾಸರ ಗಾಯಿತ್ರಿ ಮಂತ್ರವನ್ನು ದುರುಪಯೋಗಿಸುತ್ತಿರುವುದು. ಜಾಬಿಲಿ ಋಷಿಗೆ ಗೊತ್ತಿರಲಿಲ್ಲ . ಅರುಣಾಸರ ಮಾಡುತ್ತಿರುವ ಎಲ್ಲಾ ದೌರ್ಜನ್ಯವನ್ನು ಮತ್ತು ದುರುಪಯೋಗ ಮಾಡುತ್ತಿರುವುದನ್ನು ನಾರದರು ಜಾಬಿಲಿ ಋಷಿಗೆ ಹೇಳಿದರು.ಈ ವಿಷಯ ತಿಳಿದ ಜಾಬಿಲಿ ಋಷಿ ಅರುಣಾಸರ ಮಾಡುತ್ತಿರುವ ದೌರ್ಜನ್ಯವನ್ನು ತಡೆಗಟ್ಟಬೇಕು ಎಂದು ನಿರ್ಧಾರ ಮಾಡಿದನು.

ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾರದ ಋಷಿಮುನಿಗಳು ದುರ್ಗಾ ಪರಮೇಶ್ವರಿಯ ನೆನಪು ಮಾಡಿಕೊಂಡು ತಪಸ್ಸು ಮಾಡುವುದಕ್ಕೆ ಹೊರಟರು ತನ್ನ ತಪಸ್ಸಿಗೆ ಮೆಚ್ಚಿ ದುರ್ಗಾಪರಮೇಶ್ವರಿ ಜಾಬಿಲಿ ಮಹರ್ಷಿಯ ಮುಂದೆ ಪ್ರತ್ಯಕ್ಷಳಾದಳು. ಆಗ ದುರ್ಗಾಪರಮೇಶ್ವರಿ ಏನು ವರ ಬೇಕು ಕೇಳು ? ಎಂದು ಋಷಿಮುನಿಗೆ ಹೇಳಿದರು. ಆಗ ಜಾಬಿಲಿ ಋಷಿಮುನಿಯು ಅರುಣಾಸರನ ಬಗ್ಗೆ ವಿವರಿಸಿದನು.
ಆಗ ಆ ದೇವಿ ಅರುಣಾಸುರನನ್ನು ಸಂಹಾರ ಮಾಡುತ್ತೇನೆ ಎಂದು ಭಾಷೆಯನ್ನು ಕೊಟ್ಟಳು. ಆ ಸ್ಥಳವೇ ನಲ್ಲಿತೀರ್ಥ ಗುಹೆ. ಪವಿತ್ರವಾದ ಗಾಯಿತ್ರಿ ಮಂತ್ರವನ್ನು ದುರುಪಯೋಗ ಮಾಡಿರುವ ಅರುಣಾಸರ ದುರ್ಗಾಪರಮೇಶ್ವರಿ ನಂದಿನಿ ಎಂಬ ಆ ನದೀ ತೀರದಲ್ಲಿ ಕಣಜ ಆಕಾರದಲ್ಲಿ ಅವನನ್ನು ಸಂಹಾರ ಮಾಡಿದಳು. ಆದ್ದರಿಂದ ಈ ಸ್ಥಳದಲ್ಲಿ ಸಾಕ್ಷತ್ ದುರ್ಗಾಪರಮೇಶ್ವರಿ ತಾಯಿ ನೆಲೆಯೂರಿದ್ದಾಳೆ. ಈ ದೇವಸ್ಥಾನವನ್ನು “ಕಟೀಲು” ಅಥವಾ “ಕಟೀಲು ಶ್ರೀ ದುರ್ಗಾಪರಮೇಶ್ವರಿ” ಎಂದು ಸಹ ಕರೆಯುತ್ತಾರೆ.

ಇದು ಮಂಗಳೂರಿನ ಅತ್ಯಂತ ಪ್ರಸಿದ್ಧವಾದ ದೇವಸ್ಥಾನ. ಇಲ್ಲಿ ಸೋಮನಾಥೇಶ್ವರ ಲಿಂಗವನ್ನು ಸ್ವಚ್ಛತಾ ಸಾಲಿಗ್ರಾಮದಿಂದ ತಯಾರು ಮಾಡಿದ್ದಾರೆ. ಇಲ್ಲಿರುವ ಲಿಂಗ ಅರ್ಧನಾರೀಶ್ವರನ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಅತ್ಯಂತ ಸುಂದರವಾದ ಅಂಶವೇನೆಂದರೆ ಗುಹೆ.ನಾಗಪ್ಪ ಕೊಳಲು ದೇವಸ್ಥಾನದ ಉತ್ತರ ಭಾಗದಲ್ಲಿರುವ ಅತೀ ಚಿಕ್ಕ ಕೊಳಗಳು,ಗುಹೆಯನ್ನು ಪ್ರವೇಶಿಸ ಬೇಕಾದರೆ ನಾಗಪ್ಪ ಕೊಳದಲ್ಲಿ ಸ್ನಾನವನ್ನು ತಪ್ಪದೇ ಮಾಡಲೇಬೇಕು.

ಅರಸಕ್ಕೂಮಂಚ ಎಂಬ ರಾಜನು ದೇವಸ್ಥಾನದ ಮುಖ್ಯ ದ್ವಾರದ ಉತ್ತರ ದಿಕ್ಕಿನಲ್ಲಿ ಕುಳಿತಿರುತ್ತಾನೆ ಎಂದು ಇತಿಹಾಸ ಪುರಾಣಗಳು ಸೂಚಿಸುತ್ತವೆ. ಆದರೆ ರಾತ್ರಿಯ ಸಮಯದಲ್ಲಿ ಯಾರೂ ಕೂಡ ಈ ಜಾಗಕ್ಕೆ ಪ್ರವೇಶಿಸುವುದಿಲ್ಲವಂತೆ . ಯಾಕೆಂದರೆ ಆ ರಾಜನ ಆತ್ಮ ಅಲ್ಲಿ ಸಂಚರಿಸುತ್ತದೆಯಂತೆ. ಆದ್ದರಿಂದ ಸಂಜೆಯ ಮೇಲೆ ಯಾರೂ ಕೂಡ ಆ ಸ್ಥಳಕ್ಕೆ ಹೋಗುವುದಿಲ್ಲ.
ಈ ದೇವಸ್ಥಾನದ ಮತ್ತೊಂದು ವಿಶೇಷತೆ ಏನೆಂದರೆ ವರ್ಷಕ್ಕೆ ಕೇವಲ ಆರು ತಿಂಗಳು ಮಾತ್ರ ಈ ದೇವಸ್ಥಾನದ ಬಾಗಿಲು ಅಕ್ಟೋಬರ್ ನಿಂದ ಏಪ್ರಿಲ್ ತಿಂಗಳಿನ ವರೆಗೆ ಮಾತ್ರ ತೆರೆಯುತ್ತದೆ.ಈ ದೇವಸ್ಥಾನದ ಇನ್ನುಳಿದ ಆರು ತಿಂಗಳು ದೇವಸ್ಥಾನ ಒಳಗೆ ಋಷಿಗಳಿಗೆ ಮತ್ತು ದೇವರುಗಳಿಗೆ ಮಾತ್ರ ಪ್ರವೇಶವಿರುತ್ತದೆಯಂತೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top