fbpx
ದೇವರು

ಒಂದೇ ಒಂದು ಪರ್ವತ ಶ್ರೇಣಿಯಲ್ಲಿ 900 ದೇವಾಲಯಗಳು ಇರೋ ಈ ದೇವಾಲಯದ ಕುತೂಹಲಕಾರಿ ಸಂಗತಿಗಳನ್ನು ಕೇಳಿದ್ರೆ ನೀವು ಆಶ್ಚರ್ಯ ಪಡೋದು ಖಂಡಿತಾ

ಗುಜರಾತ್ ನ ಭಾವನಗರ ಜಿಲ್ಲೆ ಪ್ರಕೃತಿಯ ರಮಣೀಯವಾದ ತಾಣದ ನಡುವೆ ಇದೆ. 2014ನೇ ವರ್ಷದಿಂದ ಸಂಪೂರ್ಣ ಸಸ್ಯಹಾರಿ ಪ್ರಾಂತ್ಯವಾಗಿ ಬದಲಾಗಿದೆ. ಎಲ್ಲರಿಗೂ ಸಸ್ಯ ಆಹಾರವನ್ನು ಕೊಡಬೇಕು ಎಂದು ಅಲ್ಲಿನ ಸರ್ಕಾರ ಘೋಷಿಸಿದೆ. ಅದಕ್ಕೆ ಅಲ್ಲಿನ ಪ್ರಜೆಗಳು ಕೂಡ ಒಪ್ಪಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ.

ಜೈನ ಮತದಲ್ಲಿ ಪ್ರಪ್ರಥಮ ಬಾರಿಗೆ ತೀರ್ಥಂಕರರ ಸ್ಥಾನ ಗಳಿಸಿಕೊಂಡ ವೃಷಭನಾಥರು ಆರಂಭ ಮಾಡಿದ ಸಂಸ್ಕಾರದಿಂದ ಇಲ್ಲಿ 900 ದೇವಾಲಯಗಳನ್ನು ಪ್ರತಿಷ್ಠಾಪಿಸಿದ್ದಾರೆ. ಪ್ರಪಂಚದಲ್ಲಿ ಈ ರೀತಿಯ ಕ್ಷೇತ್ರ ಎಲ್ಲೂ ಇಲ್ಲ ಇದೊಂದೇ ಇರುವುದು ಎಂದೇ ಹೇಳಬಹುದು. ಅಲ್ಲಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

 

 

 

ಪಡಿಲಾನ ಸಾವಿರದ 1904 ರಲ್ಲಿ ಈ ಕ್ಷೇತ್ರಕ್ಕೆ ಒಂದು ಒಳ್ಳೆಯ ಹೆಸರು, ಕೀರ್ತಿ ಇತ್ತು. ಶತ್ರುಂಜಯ ಪರ್ವತ ಶ್ರೇಣಿಯಲ್ಲಿ ವೃಷಭನಾಥನು ತಪಸ್ಸು ಮಾಡುವ ಸಮಯದಲ್ಲಿ ಆತನಿಗೆ ಜ್ಞಾನ ಮತ್ತು ಸಿದ್ಧಿ ದೊರೆತ ಕಾರಣ, ಒಂದೊಂದು ವರ್ಷದಲ್ಲಿ ಒಂದೊಂದು ದೇವರನ್ನು ಸ್ಥಾಪಿಸಿದನು. 900 ವರ್ಷಗಳಿಗೆ 900 ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಶಿಲ್ಪಿಗಳು ತಮ್ಮ ರಕ್ತವನ್ನು ಬೆವರಿನ ರೂಪದಲ್ಲಿ ಹರಿಸಿ, ಶ್ರಮಿಸಿ ದೇವಾಲಯಗಳನ್ನು ನಿರ್ಮಿಸಿದ್ದರು ಅದ್ದರಿಂದ ಇವು ಕಂಗೊಳಿಸುತ್ತಿವೆ ಎಂದು ಇಲ್ಲಿನ ಜನರ ಅಭಿಪ್ರಾಯವಾಗಿದೆ. ಈ ದೇವಸ್ಥಾನದ ರಕ್ಷಣೆಯ ಜವಾಬ್ದಾರಿಯನ್ನು ಆನಂದ್ ಜಿ ಮತ್ತು ಕಲ್ಯಾಣ್ ಜಿ ಟ್ರಸ್ಟ್ ಗಳು ನೆರವೇರಿಸುತ್ತವೆ. 4,000 ಮೆಟ್ಟಿಲುಗಳ ದಾರಿಯನ್ನು ನಿರ್ಮಿಸಿ ಪ್ರಜೆಗಳಿಗೆ ಸುಲಭ ದಾರಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಸಂಜೆಯ ಹೊತ್ತಿಗೆ ಸೂರ್ಯಾಸ್ತದ ಸಮಯದಲ್ಲಿ ಈ ದೇವಸ್ಥಾನದಲ್ಲಿ ಯಾರು ಮನುಷ್ಯರು ಇಲ್ಲಿ ಯಾರೂ ಸಹ ಇಲ್ಲಿ ಇರಬಾರದು .

ಕುಮಾರ್ ಪಾಲೆ ಸಾಲಂಕಿ ಎನ್ನುವ ಜೈನ ಮತದವನು ಈ ದೇವಾಲಯಗಳನ್ನು ನಿರ್ಮಿಸಿದ್ದರಿಂದ ಆತನ ಹೆಸರು ಇಲ್ಲಿ ಅಚ್ಚಳಿಯದಂತೆ ಇದೆ ಎಂದು ಹೇಳುತ್ತಾರೆ ಇಲ್ಲಿನ ಜನರು.ಇನ್ನೂ ಮುಖ್ಯವಾದ ವಿಚಾರ ಏನೆಂದರೆ ಕೇವಲ ಜೈನರು ಮಾತ್ರ ಈ ದೇವಾಲಯವನ್ನು ದರ್ಶನ ಮಾಡಬೇಕು ಎಂಬ ಯಾವ ಕಾನೂನು ಕೂಡ ಇಲ್ಲ . ಆದರೆ ಅವರು ಪಾಲಿಸುವ ಆಚಾರ-ವಿಚಾರವನ್ನು ಗೌರವಿಸಬೇಕು ಎನ್ನುವ ನಿಯಮ ಈ ಪ್ರಾಂತ್ಯದಲ್ಲಿ ಇದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top