ಕಿರುತೆರೆ

ವೇದಿಕೆ ಮೇಲೆಯೇ ಗಳಗಳನೆ ಕಣ್ಣೀರು ಸುರಿಸಿದ ಅನುಶ್ರೀ- ಕಾರಣವೇನು?

ನಟಿ ಕಮ್ ನಿರೂಪಕಿ ಅನುಶ್ರೀ ಅಂದರೆ ನಗುಮುಖದಿಂದಲೇ ಕಣ್ಣರಳಿಸೋ ಅಭಿಮಾನಿ ಪಡೆಯೇ ಸೃಷ್ಟಿಯಾಗಿದೆ.. ಪಟ ಪಟನೆ ಮಾತಾಡುವ ಮೂಲಕವೇ ಭಾರೀ ಜನಪ್ರಿಯತೆ ಗಳಿಸಿಕೊಂಡಿರುವ, ಅಪಾರ ಅಭಿಮಾನಿಗಳನ್ನೂ ಹೊಂದಿರುವ ಅನುಶ್ರೀಯ ನಿರೂಪಣೆ ಸ್ಟೈಲ್’ಗೆ ಕ್ಲೀನ್ ಬೌಲ್ಡ್ ಆದವರ ಸಂಖ್ಯೆಯೇನೂ ಕಡಿಮೆ ಇಲ್ಲ.. ಪುರುಷ ನಿರೂಪಕರನ್ನೂ ಸಡ್ಡು ಹೊಡೆಯುವಂಥ ಖ್ಯಾತಿಯನ್ನು ಗಳಿಸಿಕೊಂಡಿರುವ ಈ ಪ್ರತಿಭಾನ್ವಿತೆ ಆಗಾಗ್ಗೆ ಸಿನಿಮಾಗಳಲ್ಲಿಯೂ ನಟನೆ ಮಾಡಿಕೊಂಡು ಒಳ್ಳೆ ಪೇಮೆಂಟು ಕೂಡಾ ಪಡೆಯುತ್ತಾ ಮುನ್ನಡೆಯುತ್ತಿದ್ದಾರೆ.

 

 

ಇಂಥಾ ಅನುಶ್ರೀ ಖಾಸಗಿ ಚಾನೆಲ್’ವೊಂದರಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದಾರೆ.. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿರುವ ಅನುಶ್ರೀ ಕಣ್ಣೀರು ಹಾಕಿ ಎಲ್ಲರನ್ನು ಭಾವುಕಗೊಳಿಸಿದ್ದಾರೆ.

ಸೂರಜ್, ಶ್ರಾವ್ಯ ಮತ್ತು ಡ್ಯಾನ್ಸ್ ಮಾಸ್ಟರ್ ರುದ್ರ ಎಂಬ ಮೂವರು ಸ್ಪರ್ಧಿಗಳು ಮೊನ್ನೆಯ ಸಂಚಿಕೆಯಲ್ಲಿ ‘ಜಾಲಿಡೇಸ್’ ಸಿನಿಮಾದ ‘ರಕ್ತ ಸಂಭಂದಗಳ’ ಎಂಬ ಫ್ರೆಂಡ್’ಶಿಪ್ ಮಹತ್ವವನ್ನು ಸಾರುವ ಹಾಡಿಗೆ ಡ್ಯಾನ್ಸ್ ಮಾಡಿದ್ದರು.. ಡ್ಯಾನ್ಸ್ ಮುಗಿದ ಮೇಲೆ ತೀರ್ಪುಗಾರರ ನೆಚ್ಚಿನ ಸ್ನೇಹಿತರ ಫೋಟೋ ತೋರಿಸಿ ಅವರಿಂದ ಕೆಲ ನೆನಪುಗಳನ್ನು ಪಡೆಯಲಾಯಿತು. ವಿಜಯ್ ರಾಘವೇಂದ್ರ, ರಕ್ಷಿತಾ, ಅರ್ಜುನ್ ಜನ್ಯರ ನೆಚ್ಚಿನ ಸ್ನೇಹಿತರ ಫೋಟೋಗಳನ್ನು ಅನುಶ್ರೀ ತೋರಿಸಿ ಸ್ನೇಹಿತರ ಜೊತೆ ಮೂರು ಜನ ತೀರ್ಪುಗಾರರ ಬಾಂಧವ್ಯವನ್ನು ಹಂಚಿಕೊಂಡರು. ಈ ವೇಳೆ ನಿರೂಪಕಿ ಅನುಶ್ರೀಯ ಸ್ನೇಹಿತರ ಬದಲಾಗಿ ಅವ್ರ ಸಹೋದರ ‘ಅಭಿಜಿತ್’ ಫೋಟೋ ತೋರಿಸಲಾಯಿತು.

ತಮ್ಮನ ಫೋಟೋ ನೋಡುತ್ತಿದ್ದಂತೆ ಭಾವುಕರಾದ ಅನುಶ್ರೀ ತಮ್ಮ ಕಷ್ಟದ ದಿನಗಳನ್ನು ನೆನೆದು ಕಣ್ಣೀರು ಹಾಕಿದರು. ನಾನು ತುಂಬಾ ವರ್ಷಗಳ ಹಿಂದೆ ಒಬ್ಬಳೇ ಕೆಲಸಕ್ಕಾಗಿ ಬೆಂಗಳೂರಿಗೆ ಬಂದೆ. ನಮಗೆ ಅಪ್ಪ ಇಲ್ಲ ಅಮ್ಮ ಮಾತ್ರ ಇರೋದು, ನಾನು ಇಲ್ಲಿ ದುಡಿಯುತ್ತಿದ್ದರೆ ಅಲ್ಲಿ ನನ್ನ ತಮ್ಮ ನಮ್ಮ ಅಮ್ಮನನ್ನು 13 ವರ್ಷಗಳಿಂದ ಚೆನ್ನಾಗಿ ನೋಡಿಕೊಂಡಿದ್ದಾನೆ. ನನ್ನ ಕೈಯಿಂದ ಮಾಡಲು ಆಗದಿದ್ದುದನ್ನು ಅವನು ಮಾಡಿದ್ದಾನೆ.. ಚೆನ್ನಾಗಿ ಓದಿಕೊಂಡು ಒಳ್ಳೆಯ ಕೆಲಸಕ್ಕೂ ಸೇರಿಕೊಂಡಿದ್ದಾನೆ, ದೇವರು ನನಗೆ ನೀಡಿರುವ ಎಲ್ಲ ಆಯಸ್ಸನ್ನು ಅವನಿಗೆ ನೀಡಲಿ” ಎಂಬಂತ ಮಾತುಗಳನ್ನು ಆಡಿ ಎಲ್ಲರನ್ನೂ ಒಂದು ಕ್ಷಣ ಭಾವುಕರನ್ನಾಗಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top