ದೇವರು

ಮನೆಯ ದರಿದ್ರ ಹೋಗಲು ಕಾಳಿಮಾತೆ ತೆನಾಲಿರಾಮನಿಗೆ ಹೇಳಿದ್ದ ಅತಿ ದೊಡ್ಡ ರಹಸ್ಯ ಏನು ಗೊತ್ತಾ ,ಹಾಗದ್ರೆ ಗುಂಟೂರಿನ ತೆನಾಲಿಯ ಕಾಳಿದೇವಾಲದ ಬಗ್ಗೆ ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು

ತೆನಾಲಿ ಎಂಬ ಹಳ್ಳಿಯಲ್ಲಿ ರಾಮನ ಹೆಸರಿನ ಚಿಕ್ಕ ಹುಡುಗ ವಾಸಿಸುತ್ತಿದ್ದ. ತಂದೆ ತಾಯಿಯನ್ನು ಕಳೆದುಕೊಂಡಿದ್ದ ರಾಮನ್ ಅನಾಥನಾಗಿದ್ದ. ಅವನು ತನ್ನ ದೂರದ ಸಂಬಂಧಿಗಳೊಂದಿಗೆ ವಾಸ ಮಾಡುತ್ತಿದ್ದ.

ರಾಮನ್ ಒಳ್ಳೆಯ ಹುಡುಗನಾಗಿದ್ದ. ಆದರೂ, ಅವನು ಬಹಳ ತುಂಟನಾಗಿದ್ದ. ಅವನಿಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ರಸ್ತೆ ಬದಿ ಆಟವಾಡುತ್ತ ಕಾಲ ಕಳೆಯುತ್ತಿದ್ದ. ಹೀಗೆ ದಿನಾಲೂ ತನ್ನ ಅಮೂಲ್ಯ ಸಮಯವನ್ನು ಹಾಳು ಮಾಡುತ್ತ ಕಾಲ ಕಳೆಯುತ್ತಿದ್ದ. ಅವನಿಗೆ ಶಾಲೆಗೆ ಹೋಗು ಎಂದು ಹೇಳುವವರೇ ಇರಲಿಲ್ಲ.

ಒಂದು ದಿನ ರಾಮನ್ ಊರಿಗೆ ಒಬ್ಬ ಮಹಾನ ಋಷಿ ಬಂದಿದ್ದರು. ಅವರ ಸೇವೆಯನ್ನು ರಾಮನ್ ಮಾಡಿದ. ಮೂರೂ ದಿನಗಳ ರಾಮನ್ ಮಾಡಿದ ಸೇವೆಗೆ ಸಂತೃಪ್ತರಾದ ಋಷಿಗಳು ರಾಮನನಿಗೆ ಏನಾದರು ಸಹಾಯ ಮಾಡಬೇಕು ಎಂದು ಯೋಚಿಸುತ್ತಿದ್ದರು. ರಾಮ ಶಾಲೆಗೆ ಹೋಗದೆ ಬೀದಿ ಬೀದಿ ಸುತ್ತುತ್ತಿದ್ದನ್ನು ಕಂಡು ಅವರು ಮರುಗಿದ್ದರು. ಕೊನೆಯ ದಿನ ಅವರು ರಾಮನ್ ನನ್ನ ಕರೆದು ನೀನು ಶಾಲೆಗೆ ಏಕೆ ಹೋಗುವುದಿಲ್ಲ, ನಿನ್ನ ಅಮೂಲ್ಯ ಸಮಯವನ್ನು ಏಕೆ ಹಾಳು ಮಾಡುತ್ತಿದ್ದೀಯ ಎಂದು ಬುದ್ದಿ ವಾದ ಹೇಳಿದರು.

 

 

ಆಗ ರಾಮ ನಾನು ಅನಾಥ ಹಾಗಾಗಿ ನನ್ನ ಕಾಳಜಿ ಯಾರು ಮಾಡುವುದಿಲ್ಲ ಎಂದು ಹೇಳಿದ. ಇದಕ್ಕೆ ಖುಷಿಗಳ ಮನ ಕರಗಿತು.

ಆಗ ಖುಷಿಗಳು ರಾಮನ್ ಗೆ ಮಹಾ ಕಾಳಿ ಮಂತ್ರವನ್ನು ಹೇಳಿಕೊಟ್ಟರು. ಈ ಊರಿನ ಬೆಟ್ಟದ ಮೇಲಿರುವ ಮಹಾ ಕಾಳಿ ದೇವಾಲಯಕ್ಕೆ ಸೂರ್ಯೋದಯ ಮುಂಚೆ ಹೋಗಿ 108 ಬಾರಿ ಮಾತ್ರವನ್ನು ಜಪಿಸು. ಆಗ ತಾಯಿ ಪ್ರತ್ಯಕ್ಷಳಾಗಿ ನಿನಗೆ ಬೇಡಿದ ವರವನ್ನು ಕೊಡುತ್ತಾರೆ ಎಂದು ಹೇಳಿದರು. ನಂತರ ಖುಷಿಗಳು ಮುಂದಿನ ಊರಿಗೆ ಪ್ರಯಾಣ ಬೆಳೆಸಿದರು.

ಮರುದಿನ ಸೂರ್ಯೋದಯ ಮುಂಚೆಯೇ ಬೆಟ್ಟ ಏರಿದ ರಾಮನ್ ತಾಯಿ ಮಹಾಕಾಳಿ ಮುಂದೆ 108 ಬಾರಿ ಮಂತ್ರವನ್ನು ಜಪಿಸಿದ ಬಳಿಕ. ರೌದ್ರಾವತಾರದಲ್ಲಿ ಸಾವಿರ ಮುಖವುಳ್ಳ ಮಹಾಕಾಳಿ ಪ್ರತ್ಯಕ್ಷವಾದರು. ಮಗು ನಿನಗೆ ಏನು ಬೇಕು ಕೇಳು ಎಂದು ತಾಯಿ ಹೇಳಿದರು. ಆದರೆ ರಾಮನ್ ಮಾತ್ರ ಕೈ ಕಟ್ಟಿ ನಗುತ್ತ ಕುಳಿತಿದ್ದ.

ಆಗ ಮಹಾಕಾಳಿ, ಈ ಮೂರ್ಖ ಹುಡುಗ ನನ್ನ ರೌದ್ರಾವತಾರದಲ್ಲಿ ನೋಡಿದ ಯಾರಾದರೂ ಸಹಿತ ಭಯಬಿದ್ದು ಓದಿ ಹೋಗ್ತಾರೆ ಆದ್ರೆ ನೀನು ಮಾತ್ರ ನಗುತ್ತ ಕುಳಿತಿರುವೆಯಲ್ಲ. ನೀನು ನಿನ್ನ ಬೇಡಿಕೆಯನ್ನು ಕೂಡ ಕೇಳುತ್ತಿಲ್ಲ. ನೀನು ವಿಕಟಕವಿ ಆಗುತ್ತೀಯ ಎಂದು ಹೇಳಿದರು.

 

 

 

ಆಗ ಮಹಾಕಾಳಿಯ ಸಿಟ್ಟನ್ನು ನೋಡಿ ಮಾತನಾಡಿದ ರಾಮನ್, ನೀವು ನನಗೆ ಸರಿಯಾಗಿ ಹೇಳಿದ್ದಾರಾ ನಾನು ವಿಕಟಕವಿ ಆಗುತ್ತೇನೆ. ಅದೊಂದು ಸರಿಯಾದ ಹೆಸರು. ಹಿಂದೆಯಿಂದ ಓದಿದರೂ ಕೂಡ ವಿಕಟಕವಿ ಎಂದೇ ಉಚ್ಚಾರವಾಗುತ್ತೆ. ಈ ವಿಶಿಷ್ಟ ಹೆಸರಿಗೆ ಧನ್ಯವಾದಗಳು ಎಂದು ಹೇಳಿದ.

ಇದಕ್ಕೆ ಸಹಮತಿಸಿದ ತಾಯಿ. ನೀನು ಏಕೆ ನಕ್ಕೆ ಎಂದು ಕೇಳು ಎಂದು ರಾಮನ್ ಗೆ ಕೇಳಿದರು.

ಆಗ ರಾಮನ್, ತಾಯಿ ಕಾಳಿ ದೇವಿ, ನಿಮಗೆ ಒಂದು ಸಾವಿರ ಮುಖಗಳು ಮತ್ತು ಒಂದು ಸಾವಿರ ಮೂಗುಗಳಿವೆ ಆದರೆ ಕೇವಲ ಎರಡೇ ಕೈಗಳನ್ನು ಹೊಂದಿದ್ದೀರಾ, ನನಗೆ ಶೀತ ಬಂದಾಗ ನಾನು ಎರಡು ಕೈಗಳಿಂದ ನನ್ನ ಒಂದೇ ಮೂಗು ಒರೆಸುವಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತೇನೆ. ಆದರೆ, ನೀವು ಒಂದು ಸಾವಿರ ಮೂಗುಗಳನ್ನು ಹೊಂದಿದ್ದೀರಿ ಮತ್ತು ಕೇವಲ ಎರಡು ಕೈಗಳನ್ನು ಹೊಂದಿದ್ದೀರಿ. ಒಂದು ಸಾವಿರ ಮುಖಗಳ ಸಾವಿರ ಮೂಗುಗಳನ್ನು ಸೋರುತ್ತಿರುವಾಗ ನೀವು ಹೇಗೆ ಹೆಣಗಾಡುತ್ತಿರುವಿರಿ ಎಂದು ನಾನು ಯೋಚಿಸುತ್ತಿದ್ದೆ. ನನಗೆ ನಗುವುದು ನಿಲ್ಲಿಸಲಾಗಲಿಲ್ಲ ಎಂದು ರಾಮನ್ ಹೇಳಿದ.

ಆಗ ರಾಮನ್ ಹೇಳಿದ ಮಾತಿಗೆ ಮಹಾಕಾಳಿ ದೇವಿ ಕೂಡ ನಕ್ಕರು. ಆಗ ರಾಮನ್, ತಾಯಿ ನೀವು ಸುಂದರವಾಗಿ ನಗುತ್ತೀರಾ ಎಂದು ಹೇಳಿದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top