fbpx
ಕಿರುತೆರೆ

ಭಾರತೀಯ ಕಿರುತೆರೆಯಲ್ಲೇ ಇತಿಹಾಸ ಸೃಷ್ಟಿಸಿರುವ ಕಾರ್ಯಕ್ರಮದ ಮೈಲಿಗಲ್ಲಿನ ಸಂಚಿಕೆಗೆ ಅತಿಥಿಯಾದ ನಟಿ ಶ್ರುತಿ.

ಬರೋಬ್ಬರಿ 3000 ಸಂಚಿಕೆಗಳ ಗಡಿ ತಲುಪುವ ಮೂಲಕ ಭಾರತದ ದೂರದರ್ಶನ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದ ”ಥಟ್ ಅಂತ ಹೇಳಿ’ ಎಂಬ ಕನ್ನಡದ ರಸಪ್ರಶ್ನೆ ಕಾರ್ಯಕ್ರಮ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.. ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮ 04-02-2002ರಲ್ಲಿ ಪ್ರಾರಂಭವಾಗಿದ್ದು ಇದೀಗ ಬರೋಬ್ಬರಿ 3500 ಎಪಿಸೋಡುಗಳನ್ನು ಪೂರೈಸಿದೆ. TRP, ಜಾಹಿರಾತುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಅಚ್ಚುಕಟಾಗಿ ಜನರ ಮನ ಗೆದ್ದಿರುವ ಈ ಕಾರ್ಯಕ್ರಮಕ್ಕೆ ನಟಿ ಶ್ರುತಿ ಹರಿಹರನ್ ಅತಿಥಿಯಾಗಿ ಆಗಮಿಸಿದ್ದಾರೆ..

 

 

ಕಾರ್ಯಕ್ರಮ 3500ಎಪಿಸೋಡುಗಳನ್ನು ಪೂರೈಸಿದ ಅಂಗವಾಗಿ ವಿಶೇಷ ಅಥಿತಿಗಳನ್ನು ಕರೆಸಿದ್ದು ನಿರ್ದೇಶಕ ಜಯತೀರ್ಥ ಮತ್ತು ನಟಿ ಶ್ರುತಿ ಹರಿಹರನ್ ಭಾಗವಹಿಸಿದ್ದಾರೆ. ನಿರೂಪಕ ನಾ.ಸೋಮೇಶ್ವರ ಅವರು ಕೇಳುವ ಪ್ರಶ್ನೆಗಳಿಗೆ ಈ ಇಬರು ಹೇಗೆ ಉತ್ತರಿಸುತ್ತಾರೆ, ಅದೆಷ್ಟು ಪುಸ್ತಕಗಳನ್ನು ಗೆಲ್ಲುತ್ತಾರೆ ಎಂಬುದು ಸದ್ಯದ ಕುತೂಹಲ, ಈ ಸಂಚಿಕೆಯ ಶೂಟಿಂಗ್ ಅದಾಗಲೇ ಮುಗಿದಿದ್ದು 3501 ಮತ್ತು 3502 ಸಂಚಿಕೆಗಳಾಗಿ ಪ್ರಸಾರವಾಗಲಿದೆ.

ಅಂದಹಾಗೆ ಈ ವಿಚಾರವನ್ನು ನಿರೂಪಕರಾಗಿರುವ ನಾ.ಸೋಮೇಶ್ವರ ಅವರೇ ಹಂಚಿಕೊಂಡಿದ್ದು ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ್’ವೊಂದನ್ನು ಪ್ರಕಟಿಸುವುದರ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ಇನ್ನು ಕಾರ್ಯಕ್ರಮದ 3500 ಎಪಿಸೋಡು ಇಂದು(24-7-2018)ಪ್ರಸಾರವಾಗಲಿದ್ದು ಈ ಸಂಚಿಕೆಯಲ್ಲಿ ಕತಾರ್ ದೇಶದಲ್ಲಿ ವಾಸವಾಗಿರುವ ಕನ್ನಡಿಗರು ಭಾಗವಹಿಸಲಿದ್ದಾರೆ. ಆ ನಂತರ 3501 ಮತ್ತು 3502 ಸಂಚಿಕೆಗಳಲ್ಲಿ ಶ್ರುತಿಹರಿಹರನ್ ಮತ್ತು ಜಯತೀರ್ಥ ಅವರು ಉಪಸ್ಥಿತಿ ಇರಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top