ಆರೋಗ್ಯ

ಕೂದಲು ಉದರುವುದನ್ನು ಕಡಿಮೆ ಮಾಡಬಲ್ಲ ಬೆಟ್ಟದ ನೆಲ್ಲಿಕಾಯಿ ಲೇಹ ಮಾಡುವ ವಿಧಾನ ತಿಳ್ಕೊಳ್ಳಿ

ಬೆಟ್ಟದ ನೆಲ್ಲಿಕಾಯಿ ಲೇಹವನ್ನು 2 ಟೇಬಲ್ ಚಮಚದಷ್ಟು ಬೆಳಿಗ್ಗೆ ಖಾಲಿ ಹೊಟ್ಟೆ ಯಲ್ಲಿ ಪ್ರತಿದಿನ ಸವಿಸಿದರೆ ತುಂಬಾ ಆರೋಗ್ಯಕ್ಕೆ ಒಳ್ಳೆಯದು ಮತ್ತು ಚಿಕ್ಕ ವಯಸ್ಸಿನವರು ಮತ್ತು ಹಿರಿಯರು ಕೂಡ ಬೆಟ್ಟದ ನೆಲ್ಲಿಕಾಯಿ ಲೇಹವನ್ನು ಸವಿಸಬಹುದು . ಬೆಟ್ಟದ ನೆಲ್ಲಿಕಾಯಿ ಲೇಹವನ್ನು ಸವಿಸುವುದರಿಂದ ಬಿಳಿ ಕೂದಲನ್ನು ಬರದಂತೆ ತೆಡೆಗಟ್ಟುತ್ತದೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ .ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ‘ಸಿ ‘ ಇರುವುದರಿಂದ ಆರೋಗ್ಯಕ್ಕೆ ಉತ್ತಮಕಾರಿಯಾಗಿದೆ .

 

 

ಬೆಟ್ಟದ ನೆಲ್ಲಿಕಾಯಿ ಲೇಹ ಮಾಡಲು ಬೇಕಾದ ಪದಾರ್ಥಗಳು :

ಬೆಟ್ಟದ ನೆಲ್ಲಿಕಾಯಿ - 20
ಬೆಲ್ಲ - 5 ಕಪ್
ನೀರು - 2 ಕಪ್

ಬೆಟ್ಟದ ನೆಲ್ಲಿಕಾಯಿ ಲೇಹ ಮಾಡುವ ವಿಧಾನ :

ಮೊದಲಿಗೆ ಬೆಟ್ಟದ ನೆಲ್ಲಿಕಾಯಿಯನ್ನು ಸಣ್ಣದಾಗಿ ತುರಿದುಕೊಳ್ಳಬೇಕು ಮತ್ತು ಬೆಲ್ಲವನ್ನು ಸಣ್ಣದಾಗಿ ಪುಡಿಮಾಡಿಕೊಳ್ಳಬೇಕು .ನಂತರ ಸ್ಟೋವ್ ಮೇಲೆ ಪಾನ್ ಇಟ್ಟು ಅದರಲ್ಲಿ ತುರಿದುಕೊಂಡಿರುವ ಬೆಟ್ಟದ ನೆಲ್ಲಿಕಾಯಿಯನ್ನು ಹಾಕಬೇಕು ಹಾಗೂ ಒಂದುವರೆ ಕಪ್ ಅಷ್ಟು ನೀರು ಹಾಕಿ ಸಣ್ಣ ಉರಿಯಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನು ಬೈಯಿಸಿಕೊಳ್ಳಬೇಕು ಇನ್ನೊಂದು ಸ್ಟೋವ್ ಮೇಲೆ ಪಾನ್ ಇಟ್ಟು ಅದರಲ್ಲಿ ಬೆಲ್ಲ ಮತ್ತು ಅರ್ಧ ಕಪ್ ಅಷ್ಟು ನೀರು ಹಾಕಿ ಬೆಲ್ಲವನ್ನು ಕರಗಿಸಬೇಕು ನಂತರ ಬೈಯಿಸಿರುವ ಬೆಟ್ಟದ ನೆಲ್ಲಿಕಾಯಿಗೆ ಕರಗಿಸಿರುವ ಬೆಲ್ಲವನ್ನು ಸೋಸಿ ಹಾಕಬೇಕು ಹಾಕಿದ ನಂತರ ಇವೆರಡನ್ನೂ ಸಣ್ಣ ಉರಿಯಲ್ಲಿ ಪಾಕಬರುವವರೆಗೂ ಚೆನ್ನಾಗಿ ಬೈಯಿಸಿಕೊಳ್ಳಬೇಕು .ಬೆಂದ ಮೇಲೆ ಅದನ್ನು ಸರ್ವಿಂಗ್ ಬೋಲ್ ಗೆ ಹಾಕಿದರೆ ಸರ್ವ್ ಮಾಡಿದರೆ ಕಹಿ ಮತ್ತು ಸಿಹಿಯಾದ ಬೆಟ್ಟದ ನೆಲ್ಲಿಕಾಯಿ ಲೇಹ ಸವಿಸಲು ರೆಡಿ .

ಬೆಟ್ಟದ ನೆಲ್ಲಿಕಾಯಿ ಇಂದ ಮಾಡಿರುವ ಲೇಹವನ್ನು ಒಂದು ಡಬ್ಬದಲ್ಲಿ ಹಾಕಿ ಇಟ್ಟರೆ 2 ತಿಂಗಳವರೆಗೂ ಇರುತ್ತದೆ ಮಾತು ಫ್ರಿಜ್ ನಲ್ಲಿ ಇಟ್ಟರೆ 5 ರಿಂದ 6 ತಿಂಗಳವರಿಗೂ ಇರುತ್ತದೆ .ಬೆಟ್ಟದ ನೆಲ್ಲೆಕಾಯಿ ಲೇಹ ಸವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು .


copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top