ದೇವರು

ಜುಲೈ 31 ನೇ ತಾರೀಖು ಸಂಕಷ್ಟ ಹರ ಚತುರ್ಥಿ,ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಸುಖಕರ ಜೀವನ ನಡೆಸಬೇಕು ಅಂದ್ರೆ ಈ ಪುಣ್ಯ ದಿನ ಹೀಗೆ ಮಾಡಿ .

 

ಗಣ ಪದದ ಅರ್ಥವೇನೆಂದರೆ ಗ ಎಂದರೆ ಬುದ್ಧಿ , ಹಾಗೂ ನ ಎಂದರೆ ಹೆಚ್ಚಿನ ಜ್ಞಾನ ಬುದ್ಧಿ ಹಾಗೂ ಜ್ಞಾನಕ್ಕೆ ಅಧಿಪತಿಯಾದ ಗಣಪತಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ನಮ್ಮ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ನೆರವೇರುತ್ತವೆ .ಇಂತಹ ಮಹಾಗಣಪತಿಯನ್ನು ಪೂಜಿಸಲು ನಮ್ಮ ಪುರಾಣಗಳಲ್ಲಿ ಒಂದು ಶುಭದಿನವನ್ನು ಹೇಳಲಾಗಿದೆ. ಆ ದಿನವೇ ಸಂಕಷ್ಟಹರ ಚತುರ್ಥಿ ಈ ಹೆಸರೇ ಸೂಚಿಸುವಂತೆ ಕಷ್ಟಗಳನ್ನು ಪರಿಹಾರ ಮಾಡುವಂತಹ ವ್ರತ ಇದು.

ಈ ವ್ರತವನ್ನು ನಮ್ಮ ಹಿಂದೂ ಪಂಚಾಂಗದಲ್ಲಿ ಬರುವ ಚಂದ್ರ ಮಾಸದ ಬಹುಳ ಪಕ್ಷದ ನಾಲ್ಕನೇ ದಿನವನ್ನು ಸಂಕಷ್ಟಹರ ಚತುರ್ಥಿ ಎಂದು ಹೇಳುತ್ತಾರೆ .ಈ ಸಂಕಷ್ಟ ಹರ ಚತುರ್ಥಿ ವ್ರತವು ಮಂಗಳವಾರ ಬಂದರೆ ಇನ್ನು ತುಂಬಾನೇ ಶ್ರೇಷ್ಠ. ಇದನ್ನು ಅಂಗಾರಕ ಸಂಕಷ್ಟಹರ ಚತುರ್ಥಿ ಎಂದು ಸಹ ಕರೆಯುತ್ತಾರೆ . ಇದು ತುಂಬಾ ಅಪರೂಪ ಅಂಗಾರಕ ಸಂಕಷ್ಟ ಹರ ಚತುರ್ಥಿ ವರ್ಷದಲ್ಲಿ ಒಂದರಿಂದ ಎರಡು ಬಾರಿ ಮಾತ್ರ ಬರುತ್ತದೆ .

 

 

ಗಣೇಶನ ಸ್ವತಃ ಸಂಕಷ್ಟ ಚತುರ್ಥಿಯ ದಿನ ಭೂಲೋಕಕ್ಕೆ ಬಂದು ಭಕ್ತರ ಪ್ರಾರ್ಥನೆಗಳನ್ನು ಸ್ವೀಕಾರ ಮಾಡಿ , ಭಕ್ತರ ಕಷ್ಟಗಳನ್ನು ಸಹ ದೂರ ಮಾಡುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ .ಗಣೇಶ ಪುರಾಣದ ಪ್ರಕಾರ ಸಂಕಷ್ಟಹರ ಚತುರ್ಥಿ ವ್ರತವನ್ನು ಮಾಡುವುದರಿಂದ ದೇಹವು ಶುದ್ಧವಾಗಿ , ಬಯಕೆಗಳು ಈಡೇರುತ್ತದೆ. ಈ ವ್ರತವನ್ನು ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ.
ಸಂಕಷ್ಟಹರ ಚತುರ್ಥಿ ವ್ರತವನ್ನು ಮಾಡುವುದರಿಂದ ಮಕ್ಕಳಿಲ್ಲದವರಿಗೆ ಸಂತಾನಭಾಗ್ಯ ದೊರೆಯುತ್ತದೆ. ಕುಜದೋಷ ಸಹ ನಿವಾರಣೆಯಾಗುತ್ತದೆ .ಸಂಕಷ್ಟಹರ ಚತುರ್ಥಿ ವ್ರತವನ್ನು ಮಾಡುವ ದಿನ ಬೆಳಗ್ಗೆ ಎಳ್ಳನ್ನು ಪುಡಿ ಮಾಡಿ ಇದನ್ನು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳ ಸ್ನಾನ ಮಾಡಬೇಕು. ನಂತರ ಈ ವ್ರತವನ್ನು ಮಾಡುತ್ತಿದ್ದೇನೆ ಎಂದು ದೇವರ ಮನೆಯಲ್ಲಿ ಮೊದಲಿಗೆ ಸಂಕಲ್ಪ ಮಾಡಿಕೊಂಡು ಉಪವಾಸ ಪ್ರಾರಂಭ ಮಾಡಬೇಕು. ದಿನವೆಲ್ಲಾ ಉಪವಾಸ ಇರಲು ಸಾಧ್ಯವಿಲ್ಲದವರು ಹಾಲು ಹಣ್ಣನ್ನು ಸೇವಿಸಬಹುದು.

ಈ ವ್ರತವನ್ನು ಚಂದ್ರನ ಬೆಳಕಿನಲ್ಲಿ ಮಾಡಬೇಕು. ಆದ್ದರಿಂದ ರಾತ್ರಿ ಚಂದ್ರೋದಯ ಆದ ನಂತರ ಪೂಜೆ ಪ್ರಾರಂಭ ಮಾಡಬೇಕು. ಗಣೇಶನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ನೈವೇದ್ಯವಾಗಿ ಕರಿಗಡುಬು, ಮೋದಕವನ್ನು ಅರ್ಪಿಸಬೇಕು . ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು . ಪೂಜೆಯ ನಂತರ ಚಂದ್ರ ದರ್ಶನ ಪಡೆದು ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು. ನಂತರ ಸ್ವಲ್ಪ ಕರಿಗಡುಬು ಮೋದಕವನ್ನು ಪ್ರಸಾದವಾಗಿ ಹಂಚಲೇ ಬೇಕು. ಬಳಿಕ ಉಪ್ಪಿಲ್ಲದ ಆಹಾರವನ್ನು ಸೇವಿಸಬಹುದು.ಹೀಗೆ 21 ಬಾರಿ ವ್ರತಗಳನ್ನು ಆಚರಿಸಿದ ನಂತರ ಉದ್ಯಾಪನೆ ಮಾಡಬೇಕು.

ಸಂಕಟಹರ ಗಣೇಶ ಸ್ತೋತ್ರ.
“ ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ
ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ
ಪ್ರಥಮಂ ವಕ್ರತುಂಡಂಚ ಏಕದಂತಂ ದ್ವಿತೀಯಕಮ್
ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಮ್ ಚತುರ್ಥಕಮ್
ಲಂಬೋದರಂ ಪಂಚಮಂಚ ಷಷ್ಠಂ ವಿಕಟಮೇವಚ
ಸಪ್ತಮಂ ವಿಜ್ಞ ರಾಜಂಚ ಧೂಮ್ರವರ್ಣಮ್ ತಥಾಷ್ಟಕಮ್
ನವಮಂ ಫಲ ಚಂದ್ರಂಚ ದಶಮಂ ವಿನಾಯಕಮ್
ಏಕಾದಶ ಗಣಪತಿಮ್ ದ್ವಾದಶಂತು ಗಜಾನನಂ”

“ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರೀಂ ಪ್ರಭೋ
ವಿದ್ಯಾರ್ಥಿ ಲಭತೇ ವಿದ್ಯಂ ವಿದ್ಯಾಂ ಧನಾರ್ತಿ ಲಭತೇ ಧನಂ
ಪುತ್ರಾರ್ಥಿ ಲಭತೇ ಪುತ್ರಂ ಮೋಕ್ಷಾರ್ಥಿ ಲಭತೇ ಗತಿಂ”

“ಜಪೇತ್ ಗಣಪತಿ ಸ್ತೋತ್ರಂ ಷಡ್ಬೀರ್ಮಾಸ್ಯ ಫಲಂ ಲಭೇತ್
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಮಸ್ಯಾಃ
ಅಷ್ಠಾಭ್ಯೋ ಬ್ರಹ್ಮಣೇಬ್ಯಾಷ ಚ ಲಿಖಿತ್ವ ಯಃ ಸಮರ್ವಯೇತ್
ತಸ್ಯ ವಿದ್ಯಾ ಭವೇತ್ಸರ್ವ ಗಣೇಶಸ್ಯ ಪ್ರಸಾದತಃ”
ಇತಿ ಶ್ರೀ ನಾರದ ಪುರಾಣೆ ಸಂಕಷ್ಟ ನಾಶನ ಗಣಪತಿ ಸ್ತೋತ್ರಂ ಸಂಪೂರ್ಣಮ್.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top