ದೇವರು

ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆಯುವ ಮುನ್ನ ತಪ್ಪದೇ ಈ ನಿಯಮಗಳನ್ನೂ ಪಾಲಿಸಿದರೆ ನಿಮ್ಮ ಎಲ್ಲ ಬೇಡಿಕೆಗಳು ಖಂಡಿತಾ ನೆರವೇರುತ್ತದೆ .

ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರನ ದಿವ್ಯ ಸಾನಿಧ್ಯ . ಸಕಲ ಶುಭ ಮಂಗಳಗಳ ಮೇಲೆ ಅದು ಈ ಭೂಲೋಕ ವೈಕುಂಟಕ್ಕೆ ಜನರು ಬಂದು ತಮ್ಮ ಹರಕೆಗಳನ್ನು ಮಾಡಿಕೊಳ್ಳುವರು. ಇನ್ನೂ ಹಲವರು ಹರಕೆಗಳನ್ನು ತೀರಿಸಲು ಕಾಲ್ನಡಿಗೆಯಲ್ಲಿ 7 ಗಿರಿಗಳನ್ನು ಹತ್ತಿ ದರ್ಶನ ಮಾಡಲು ಬರುವರು. ಇಂತಹ ಭಕ್ತರು ಅನೇಕರಿಗೆ ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿಯವರ ಸನ್ನಿಧಾನಕ್ಕೆ ಹೋಗಬೇಕಾದರೆ ಕೆಲವು ಸೂಕ್ತ ವಿಧಾನ ಅಥವಾ ಸಂಪ್ರದಾಯದ ಬಗ್ಗೆ ತಿಳಿದಿರುವುದಿಲ್ಲ.

 

 

ಬಹು ಹಿಂದಿನಿಂದ ಈ ನಂಬಿಕೆಯಿದ್ದು ಹಾಗೂ ಶ್ರೀ ವೆಂಕಟೇಶ್ವರ ಸ್ವಾಮಿಯವರೇ ಹೇಳಿದ್ದಾರೆ ಎಂಬ ನಂಬಿಕೆ ಇದೆ. ಶ್ರೀ ಲಕ್ಷ್ಮೀ ದೇವಿಯು ವೈಕುಂಟ ತೊರೆದ ಮೇಲೆ ಆಕೆಯನ್ನು ಹುಡುಕಾಡುತ್ತಾ, ಭೂಮಿಗೆ ಬಂದ ಭಗವಂತ ಶ್ರೀ ವೆಂಕಟೇಶ್ವರನಾಗಿ ತನ್ನ ರಮಾರಮಣಿಯಾದ ಮಾತೆ ಪದ್ಮಾವತಿಯನ್ನು ವಿವಾಹವಾಗಿ ನೆಲೆಸಿದ ಪುಣ್ಯಭೂಮಿ ತಿರುಮಲ ತಿರುಪತಿಯಾಗಿದೆ .
ಇಂತಹ ಸನ್ನಿಧಾನದಲ್ಲಿ ದೇವರ ದರ್ಶನ ಮಾಡಬೇಕಾದರೆ ಕೆಲವು ವಿಧಾನಗಳನ್ನು ಅನುಸರಿಸಲೇಬೇಕು . ನಮ್ಮಲ್ಲಿ ತಿರುಪತಿಗೆ ಬರುವ ಹಲವಾರು ನೇರವಾಗಿ ತಿರುಮಲಕ್ಕೆ ಹೋಗಿ ದರ್ಶನ ಮಾಡಿ ವಾಪಸ್ಸು ಬರುತ್ತಾರೆ. ಆದರೆ ಈ ರೀತಿ ಇನ್ನೊಮ್ಮೆ ಹೋಗುವ ಮುನ್ನ ಶ್ರೀ ವೆಂಕಟನಾಥನ ದಿವ್ಯ ಸಾನಿಧ್ಯ ಸೇರುವ ಪಾರಂಪರಿಕ ಮಾರ್ಗದ ಬಗ್ಗೆ ತಿಳಿದುಕೊಳ್ಳೋಣ.

ಶ್ರೀ ವೆಂಕಟೇಶ್ವರ ಮಹಾತ್ಮೆಯ ಪ್ರಕಾರ ಶ್ರೀನಿವಾಸನ ರೂಪದಲ್ಲಿ ಬಂದ ಸ್ವಾಮಿಗೆ ನೆಲೆ ನಿಲ್ಲಲು ಸ್ಥಳದ ಅಗತ್ಯವಿತ್ತು. ತಿರುಪತಿಯ ಏಳು ಬೆಟ್ಟಗಳು ಆದಿ ವರಹಾ ಸ್ವಾಮಿಯ ಒಡೆತನದಲ್ಲಿತ್ತು. ಶ್ರೀನಿವಾಸನು ವರಹಾ ಸ್ವಾಮಿಯನ್ನು ತನಗೆ ನೆಲೆ ನಿಲ್ಲಲು ಸ್ಥಳ ಕೇಳಿದಾಗ ವರಹಾ ಸ್ವಾಮಿಯು ಇದಕ್ಕೆ ಪ್ರತಿಯಾಗಿ ತನಗೆ ಏನು ? ದೊರೆಯುವುದೆಂದು ಕೇಳಿದಾಗ .
ಶ್ರೀ ವೆಂಕಟೇಶ್ವರ ಸ್ವಾಮಿಯೂ ತನ್ನನ್ನು ಬೇಡಿ ಬರುವ ಭಕ್ತರು ಮೊದಲಿಗೆ ನಿನ್ನ ಸನ್ನಿಧಾನಕ್ಕೆ ಬಂದು ದರ್ಶನ ಪಡೆದು ಆನಂತರ ನನ್ನ ಸನ್ನಿಧಾನಕ್ಕೆ ಬಂದರೆ ಅವರಿಗೆ ತಿರುಮಲಕ್ಕೆ ಬಂದ ಫಲ ಸುಲಭವಾಗಿ ದೊರೆಯುವುದು ಹಾಗೂ ನನ್ನ ಆಶೀರ್ವಾದ ಅವರಿಗೆ ದೊರೆಯುವುದು ಎಂದು ಮಾತು ಕೊಟ್ಟರು.

ಅಲ್ಲದೆ ಶ್ರೀ ವೆಂಕಟೇಶ್ವರ ಸ್ವಾಮಿಯೂ ತನ್ನ ವಿವಾಹದ ನಂತರ ತಾನು ವರಹಾನಿಗೆ ಕೊಟ್ಟ ಮಾತನ್ನು ಲೋಹದ ಹಾಳೆಯ ಮೇಲೆ ಬರೆಸಿಕೊಟ್ಟರು. ಇಂದಿಗೂ ಸಹ ಆದಿ ವರಹಾ ಸ್ವಾಮಿ ದೇವಾಲಯದಲ್ಲಿ ಆ ಒಪ್ಪಂದದ ಪತ್ರವಿದೆ. ಆದ್ದರಿಂದಲೇ ನಾವು ಕಾಲ್ನಡಿಗೆಯಲ್ಲಿ ಹೋದಾಗ ಮೊದಲಿಗೆ ವರಹಾ ಸ್ವಾಮಿಯ ದೇವಾಲಯಕ್ಕೆ ಹೋಗಿ ಅಲ್ಲೇ ಹತ್ತಿರದಲ್ಲಿ ಇರುವ ಪುಷ್ಕರಣಿಯಲ್ಲಿ ಪವಿತ್ರ ಸ್ನಾನ ಮಾಡಿ ನಂತರ ಆದಿ ವರಹಾ ಸ್ವಾಮಿಯವರ ದೇವಾಲಯಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆಯಬೇಕು.
ದೇವರ ದೇವನಾದ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿದರೆ, ತಿರುಮಲಕ್ಕೆ ಹೋದ ಫಲ ಅಕ್ಷರಶಃ ನಮ್ಮದಾಗುವುದು. ನಮ್ಮ ಹರಕೆಯ ಫಲ ಬಹು ಬೇಗ ನಮ್ಮ ಪಾಲಿಗೆ ಬರುವುದು ಎಂಬ ನಂಬಿಕೆಯೂ ಇದೆ. ಇನ್ನು ಮುಂದೆ ಹೀಗೆ ಸರಿಯಾದ ವಿಧಾನವನ್ನು ಅನುಸರಿಸಿ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಸ್ವಾಮಿಯ ಕೃಪಾಕಟಾಕ್ಷವನ್ನು ಪಡೆದು ಪುನೀತರಾಗಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top