ದೇವರು

ಈ ವಿಚಿತ್ರವಾದ ದೇವಾಲಯದಲ್ಲಿ ಮನುಷ್ಯರ ರಕ್ತ ಇಲ್ಲದಿದ್ದರೆ ಪೂಜೆನೇ ನಡೆಯುದಿಲ್ವಂತೆ,ಇನ್ನುಅನೇಕ ವಿಚಿತ್ರ ಆಚರಣೆ ಇರುವ ಈ ದೇವಾಲಯದ ಬಗ್ಗೆ ತಿಳ್ಕೊಂಡ್ರೆ ಬೆಚ್ಚಿಬೀಳ್ತಿರಾ ನೀವು !

ಭಾರತದಲ್ಲಿ ಇರುವ ಈ ಒಂದು ದೇವಸ್ಥಾನದಲ್ಲಿ ಮನುಷ್ಯರ ರಕ್ತ ಇಲ್ಲದಿದ್ದರೆ ಇಲ್ಲಿ ಪೂಜೆ ಪೂರ್ಣಗೊಳ್ಳುವುದಿಲ್ಲ.

ದೇವರಿಗೆ ಪೂಜೆಯ ಹೆಸರಿನಲ್ಲಿ ಪ್ರಾಣಿಯ ಬಲಿಯನ್ನು ನೀಡುವುದನ್ನು ನಾವು ಕೇಳಿದ್ದೇವೆ. ದೇವರು ಪ್ರಾಣಿ ಹಿಂಸೆಯನ್ನು ಕೇಳದೇ ಇದ್ದರೂ ಕೂಡ ದೇವರು ತೃಪ್ತಿಗೊಳ್ಳುತ್ತಾನೆ ಎನ್ನುವ ನಂಬಿಕೆಯಿಂದ ಪ್ರಾಣಿಬಲಿಯನ್ನು ನೀಡುವುದು ನಮ್ಮ ದೇಶದಲ್ಲಿ ಇಂದಿಗೂ ಕೂಡ ಚಾಲ್ತಿಯಲ್ಲಿದೆ.ಪೇಟಾ ದಂತಹ ಸಂಸ್ಥೆಗಳು ಈ ಪ್ರಾಣಿ ಬಲಿಯನ್ನು ನಿಲ್ಲಿಸಬೇಕೆಂದು ಎಷ್ಟೇ ಕಾರ್ಯಗಳನ್ನು ನಡೆಸಿದರೂ ಕೂಡ ಹಳ್ಳಿ ಪ್ರದೇಶಗಳಲ್ಲಿ ಪ್ರಾಣಿ ಬಲಿಯಂತಹ ಅನುಷ್ಠಾನವನ್ನು ಇಂದಿಗೂ ಕೂಡ ಜಾರಿಗೆ ತರುತ್ತಿದ್ದಾರೆ. ಆದರೆ ಭಾರತದಲ್ಲಿರುವ ಈ ಒಂದು ದೇವಸ್ಥಾನದಲ್ಲಿ ಮನುಷ್ಯರ ರಕ್ತವನ್ನು ದೇವರಿಗೆ ನೀಡಲಾಗುತ್ತಿದೆಯಂತೆ.

 

 

 

ಹಲವಾರು ಶತಮಾನಗಳಿಂದ ಈ ಸಂಪ್ರದಾಯವು ಚಾಲ್ತಿಯಲ್ಲಿದ್ದು, ಜನರು ಅದನ್ನು ಅನುಸರಿಸುತ್ತಿದ್ದಾರೆ. ದೇವಾಲಯವನ್ನು ಪವಿತ್ರ ಸ್ಥಳ ಎಂದು ಕೂಡಾ ಕರೆಯುತ್ತಿದ್ದಾರೆ . ಆದರೆ ಪಶ್ಚಿಮ ಬಂಗಾಳದ ಬಾರೋ ದೇವಿ ದೇವಸ್ಥಾನದಲ್ಲಿ ಮನುಷ್ಯನ ರಕ್ತ ನೀಡಿ ದೇವರನ್ನು ತೃಪ್ತಿ ಗೊಳಿಸುತ್ತಾರೆ .ಬಾರೋ ದುರ್ಗಾ ದೇವಿ ದೇವಸ್ಥಾನ ಇದಾಗಿದ್ದು,ಇನ್ನಷ್ಟು ಕುತೂಹಲಕಾರಿ ಮಾಹಿತಿಗಳನ್ನು ಈ ದೇವಸ್ಥಾನದ ಬಗ್ಗೆ ಈಗ ತಿಳಿದುಕೊಳ್ಳೋಣ .

ಬೇರೆ ದೇವಸ್ಥಾನಗಳಿಗೆ ಹೋಲಿಸಿದರೆ, ಈ ದೇವಸ್ಥಾನದಲ್ಲಿ ಮನುಷ್ಯನನ್ನಾಗಿ ನೀಡುತ್ತಿದ್ದಂತೆ, ಮನುಷ್ಯರ ರಕ್ತವನ್ನು ನೀಡಿ ದೇವರನ್ನು ತೃಪ್ತಿಗೊಳಿಸುತ್ತಾರೆ. 250 ವರ್ಷಗಳ ಹಿಂದೆ ಈ ಪದ್ಧತಿಯನ್ನು ರದ್ದು ಮಾಡಲಾಗಿದೆ. ಆದರೆ ಹಿಂದಿನ ದಿನಗಳಲ್ಲಿ ಮನುಷ್ಯರನ್ನೇ ಬಲಿಯಾಗಿ ಈ ದೇವಸ್ಥಾನದಲ್ಲಿ ನೀಡಲಾಗುತ್ತಿತ್ತಂತೆ. ಪ್ರತಿ ಅಷ್ಟಮಿಯ ರಾತ್ರಿಯಂದು ಮುಚ್ಚಿದ ಬಾಗಿಲುಗಳ ಮೂಲಕ ಇಲ್ಲಿ ಪೂಜೆಯನ್ನು ನಡೆಸಲಾಗುತ್ತದೆ.

ಈ ಸಮಯದಲ್ಲಿ 52ರ ಹರೆಯದ ಶಿವೇಂದ್ರನಾಥ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಮಾನವರ ರಕ್ತವನ್ನು ನೀಡದೆ ಇಲ್ಲಿ ಪೂಜೆಯು ಪೂರ್ಣಗೊಳ್ಳುವುದೇ ಇಲ್ಲ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಇನ್ನು ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಪರೀಕ್ಷಿಸಲು ರಾಜನು ಬಕ್ಷಿ ಎಂಬಾತನನ್ನು ಆಯ್ಕೆ ಮಾಡಿದ್ದ.

ಈ ವಿಚಿತ್ರವಾದ ಪದ್ದತಿಯನ್ನು ನಿಲ್ಲಿಸುವಂತೆ ರಾಜನನ್ನು ಬಕ್ಷಿ ಕೇಳಿಕೊಳ್ಳುತ್ತಾನೆ. ಮಾನವರ ಬಲಿ ತುಂಬಾ ಕ್ಷೋಭೆ ತರುವಂತಹ ವಿಷಯವಲ್ಲ ಎಂದು ರಾಜನನ್ನು ಕೇಳಿಕೊಳ್ಳುತ್ತಾನೆ. ಆಗ ಮಾನವರ ಬಲಿಯನ್ನು ನಿಷೇಧಿಸಲಾಗುತ್ತದೆ.ನಂತರ ಮಾನವರ ಬಲಿಯನ್ನು ನಿಷೇಧಿಸಿದ ಬಳಿಕ ಮೂರು ಹನಿ ರಕ್ತವನ್ನೂ ಸಮರ್ಪಿಸುವ ಮೂಲಕ ದೇವರನ್ನು ಭಕ್ತರು ಸಂತುಷ್ಟಗೊಳಿಸುತ್ತಾರೆ. ಮಾನವರ ರಕ್ತವನ್ನು ನೀಡದೆ ಇದ್ದಲ್ಲಿ ಈ ಪೂಜೆ ಪೂರ್ಣಗೊಳ್ಳುವುದಿಲ್ಲ ಎನ್ನುವುದು ಅಲ್ಲಿನ ಭಕ್ತರ ನಂಬಿಕೆಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top