ಕ್ರಿಕೆಟ್

ಭಾರತ V/S ಇಂಗ್ಲೆಂಡ್ ಪ್ರಥಮ್ ಟೆಸ್ಟ್- ಟೀಮ್ ಇಂಡಿಯಾಗೆ ಮೊದಲದಿನದ ಗೌರವ.

ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಮೊದಲ ದಿನದ ಗೌರವ ಸಂಪಾದಿಸಿಕೊಂಡಿದೆ. ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್ಮನ್’ಗಳನ್ನು ಸಾದಾರಣ ಮೊತ್ತಕ್ಕೆ ಕಟ್ಟಿಹಾಕುವುದರಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ ಮೊದಲ ದಿನವೇ ಒಂಬತ್ತು ವಿಕೆಟ್ಟುಗಳನ್ನು ಉರುಳಿಸಿದೆ.. ಮೊದಲದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಒಂಭತ್ತು ವಿಕೆಟ್ಟುಗಳ ನಷ್ಟಕ್ಕೆ 285/9 ಸ್ಕೋರ್ ಮಾಡಿದೆ.

 

 

ಪ್ರವಾಸಿ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ನಾಯಕ ಜೋ ರೂಟ್(80) ಹಾಗೂ ಜಾನಿ ಬೌರ್‌ಸ್ಟೋವ್ (70) ಆಕರ್ಷಕ ಅರ್ಧಶತಕಗಳ ನೆರವಿನಿಂದ ಸಾದಾರಣ ಮೊತ್ತ ಕಲೆಹಾಕಿದೆ. ಆರ್ ಅಶ್ವಿನ್ ಅವರು ನಾಲ್ಕು ವಿಕೆಟ್ ಗಳನ್ನು ಪಡೆಯುವ ಮೂಲಕ ಆಂಗ್ಲರ ಬ್ಯಾಟಿಂಗ್ ಓಟಕ್ಕೆ ಬ್ರೇಕ್ ಹಾಕಿದ್ದಾರೆ. ಜೊತೆಗೆ ಮೊಹಮದ್ ಶಮಿ ಎರಡು ವಿಕೆಟ್ ಕಬಳಿಸಿದರೆ ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮ ತಲಾ ಒಂದೊಂದು ವಿಕೆಟ್ ಗಳಿಸಿಕೊಂಡರು.

ಒಂದು ಹಂತದಲ್ಲಿ 3 ವಿಕೆಟ್​ಗೆ 216 ರನ್ ಬಾರಿಸಿ ಸುಸ್ಥಿತಿಯಲ್ಲಿದ್ದ ಇಂಗ್ಲೆಂಡ್ ದೊಡ್ಡ ಮೊತ್ತದ ನಿರೀಕ್ಷೆ ಇಟ್ಟಿತ್ತು. ಆದರೆ ಟೀ ಬ್ರೇಕ್ ನಂತರ ಇಂಗ್ಲೆಂಡ್ ದಿಢೀರ್ ಕುಸಿತ ಕಂಡಿದ್ದರಿಂದ ಪಂದ್ಯದಲ್ಲಿ ಭಾರತ ಹುಡಿತ ಸಾಧಿಸಿತು. ಸದ್ಯ ಸ್ಯಾಮ್​ ಕರನ್​ 24 ಹಾಗೂ ಜೇಮ್ಸ್ ಆ್ಯಂಡರ್ಸನ್​ ಖಾತೆ ತೆರೆಯದೇ ಕ್ರೀಸ್ ಕಾಯ್ದುಕೊಂಡಿದ್ದು ಇಂದು ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಸಂಕ್ಷಿಪ್ತ ಸ್ಕೊರ್:
ಇಂಗ್ಲೆಂಡ್:

88 ಓವರ್​ಗಳಲ್ಲಿ 9 ವಿಕೆಟ್​ಗೆ 285 ರನ್​
ಜೋ ರೂಟ್ (80 ರನ್, 156 ಎಸೆತ, 9 ಬೌಂಡರಿ)
ಜಾನಿ ಬೇರ್​ಸ್ಟೋ (70ರನ್, 88 ಎಸೆತ, 9 ಬೌಂಡರಿ)
ಕೀಟನ್ ಜೆನ್ನಿಂಗ್ಸ್ (42ರನ್ 98 ಎಸೆತ )

ಭಾರತದ ಬೌಲಿಂಗ್:
ಅಶ್ವಿನ್ 60-4
ಮೊಹಮದ್ ಶಮಿ 64-2

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top