ಹೆಚ್ಚಿನ

ನಮ್ಮ ಬೆಂಗಳೂರಿನ ಬಗ್ಗೆ ಗೊತ್ತಿರದ ಅನೇಕ ಕುತೂಹಲಕಾರಿ ವಿಷಯಗಳು !ತಪ್ಪದೆ ತಿಳ್ಕೊಳ್ಳಿ ,ನೀವು ಹೆಮ್ಮೆ ಪಡ್ತಿರಾ .

*. ಬ್ರಿಟಿಷರು ಬಿಟ್ಟುಹೋದ ಕೆಲವು ಅಪರೂಪದ ಬಳುವಳಿಗಳ ಪಟ್ಟಿಗೆ ಬೆಂಗಳೂರಿನ ಕ್ಲಬ್‌ ಸೇರಿಸಬಹುದು. ಬ್ರಿಟಿಷರ ಮೋಜಿನ ಚಟುವಟಿಕೆಗಳಿಗೆ, ಹವ್ಯಾಸ ಪ್ರೀತಿಗೆ ಹುಟ್ಟಿಕೊಂಡ ಎಷ್ಟೋ ಕ್ಲಬ್‌ಗಳು ಇಂದಿಗೂ ಬೆಂಗಳೂರಿನ ಮಹತ್ವವನ್ನು ಎತ್ತಿಹಿಡಿದು ನಿಂತಿವೆ.. ದೊಡ್ಡ್ ದೊಡ್ಡ್ ಮನುಷ್ಯರೆಲ್ಲ ಇಲ್ಲೇ ಬರೋದು. ಆಗಿನ ಕಾಲದಲ್ಲೇ Winston Churchil ಗೆ ರೂಪಾಯಿ ಸಾಲ ಕೊಟ್ಟಿತ್ತು ಈ ಕ್ಲಬ್.

* ಫ್ರೀಡಂ ಪಾರ್ಕ್, ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನ ಬೆಂಗಳೂರು . ಸ್ವಾತಂತ್ರ್ಯ ಉದ್ಯಾನವು ಭಾರತದ ಕರ್ನಾಟಕದ ಬೆಂಗಳೂರು ನಗರದಲ್ಲಿದೆ. ಇದು ಮೊದಲು ಕೇಂದ್ರ ಜೈಲ್ ಆಗಿತ್ತು. ನವೆಂಬರ್ 2008 ರಲ್ಲಿ ಇದನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ಪ್ರತಿಭಟನೆಗಾಗಿ ಅದರ ಒಂದು ಭಾಗವನ್ನು ನಿಗದಿಪಡಿಸಲಾಗಿದೆ. 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಭಾರತದಲ್ಲಿ ಘೋಷಿಸಿದಾಗ, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಈ ಸ್ಥಳದಲ್ಲಿ ಅಡ್ವಾಣಿಯವರನ್ನು ಬಂಧಿಸಲಾಯಿತು.ಲೋಕ ಪಾಲ್ ಮಸೂದೆಯನ್ನು ಜಾರಿಗೆ ತರಲು ಸರ್ಕಾರದ ಕ್ರಮಕ್ಕೆ ಅಣ್ಣಾ ಹಜಾರೆ ಅನಿರ್ದಿಷ್ಟ ಉಪವಾಸವನ್ನು ಬೆಂಬಲಿಸುವ ಇಂಡಿಯಾ ಅಗೆನೆಸ್ಟ್ ಕರಪ್ಷನ್ (ಐಎಸಿ) ಸಹ ಇಲ್ಲಿ ಆಯೋಜಿಸಲಾಗಿತ್ತು.

 

 

*. ಶಿವಾಜಿನಗರದಲ್ಲಿ ಮುಂಚೆ ಭತ್ತವನ್ನು ಬೆಳೆಯುತ್ತಿದ್ದರು. ಅದನ್ನು ಬ್ಲ್ಯಾಕ್ ಪ್ಯಾಲಿ ಎಂದೇ ಕರೆಯುತ್ತಿದ್ದರು.

 

* ದೇಶದಲ್ಲೇ ಮೊದಲ ಬಾರಿಗೆ ಎ.ಸಿ. ವೋಲ್ವೋ ಸಿಟಿ ಬಸ್ ಶುರು ಆಗಿದ್ದು ಬೆಂಗಳೂರಿನಲ್ಲಿ

* ಅತಿ ಹೆಚ್ಚು ದ್ವಿಚಕ್ರ ವಾಹನ ಇರೋ ನಗರಗಳಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ

 

* ಬೆಂಗಳೂರಿನ ನಿರ್ಮಾಪಕ, ಕೆಂಪೇಗೌಡರು, ನಗರದ ಜನರ ನೀರಿನ ಸೌಕರ್ಯಕ್ಕಾಗಿ, ಬೆಂಗಳೂರಿನ ಸುತ್ತಮುತ್ತ ಅನೇಕ ಕೆರೆ-ಕಟ್ಟೆಗಳನ್ನು ಕಟ್ಟಿಸಿದರು. ಸುಮಾರು 285 ಕೆರೆಗಳಿದ್ವು, ಈಗ ಅನೇಕ ಕೆರೆಗಳು ಮುಚ್ಚಿ ಹೋಗಿವೆ.

 

 

 

 

 

* ಕನಕಪುರ ರಸ್ತೆಯ ಕೆಬ್ಬೆದೊಡ್ಡಿಯಲ್ಲಿ ದೊಡ್ಡ ಧ್ಯಾನ ಮಂದಿರ ಇದೆ (Maitreya Buddha Pyramid). ಸುಮಾರ್ ಸಾವಿರ ಜನ ಒಂದೇ ಸರ್ತಿ ಇಲ್ಲಿ ಸೇರ್ಬೋದು

* ಬಹಳ ವರ್ಷಗಳ ಹಿಂದೆ ಟ್ರಿನಿಟಿ ಸರ್ಕಲ್ ಬೆಂಗಳೂರಿನ ಕೊನೆಯಾಗಿತ್ತು, ಅಲ್ಲಿಂದ ಮುಂದಿನ ಭಾಗ ಏರ್ಪೋರ್ಟ್ ಆಗಿತ್ತು, ಊರಾಚೆ ಜಾಗ ಅದು ಅನ್ನೋರು

* ಮೇ 10, 1857ರಲ್ಲಿ ಮೀರತ್ ನ ಕಂಟೋನ್ಮೆಂಟ್ ಭಾಗದಲ್ಲಿ ಭಾರತೀಯ ಸಿಪಾಯಿಗಳಿಗೂ ಮತ್ತು ಬ್ರಿಟಿಷ್ ಸಿಪಾಯಿಗಳಿಗೂ ಸಿಪಾಯಿ ದಂಗೆ ಆಯಿತು ಎನ್ನದು ಹೇಳಲಾಗುತ್ತದೆ. ಆದರೆ ಅದಕ್ಕೂ ಮೊದಲು ಬೆಂಗಳೂರು ಪೋರ್ಟಿನಲ್ಲಿ ಸಿಪಾಯಿ ದಂಗೆ ಎದ್ದಿತ್ತು (1832).

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top